ಕಾಬೂಲ್​ನಲ್ಲಿ ಪಾಕ್, ISI ವಿರುದ್ಧ ಪ್ರೊಟೆಸ್ಟ್; ಪ್ರತಿಭಟನಾ ನಿರತ ಮಹಿಳೆಯರ ಮೇಲೆ ಫೈರಿಂಗ್

ಕಾಬೂಲ್​ನಲ್ಲಿ ಪಾಕ್, ISI ವಿರುದ್ಧ ಪ್ರೊಟೆಸ್ಟ್; ಪ್ರತಿಭಟನಾ ನಿರತ ಮಹಿಳೆಯರ ಮೇಲೆ ಫೈರಿಂಗ್

ಪಾಕಿಸ್ತಾನ್ ಮತ್ತು ಅಲ್ಲಿನ ಐಎಸ್​ಐ ವಿರುದ್ಧ ಅಫ್ಘಾನಿಸ್ತಾನದ ನೂರಾರು ಮಹಿಳೆಯರು ಇಂದು ಕಾಬೂಲ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನ ಸಹಿಸದ ತಾಲಿಬಾನಿಗಳು ಪ್ರತಿಭಟನಾ ನಿರತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಅಂತಾ ವರದಿಯಾಗಿದೆ.

ಪಾಕಿಸ್ತಾನದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು. ಪಾಕ್ ವಿರುದ್ಧ ಘೋಷಣೆ ಕೂಗಿ ಧಿಕ್ಕಾರ ಹಾಕುತ್ತಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ತಾಲಿಬಾನಿಗಳು, ಗಾಳಿಯಲ್ಲಿ ಮನಬಂದಂತೆ ಗುಂಡು ಹಾರಿಸಿದ್ದಾರೆ ಅಂತಾ ಹೇಳಲಾಗಿದೆ.

ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಪ್ರಕಾರ, ತಾಲಿಬಾನಿಗಳು ನೇರವಾಗಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಪ್ರೆಸಿಡೆಂಟಲ್ ಪ್ಯಾಲಸ್​ ಮುಂದೆ ಪ್ರತಿಭಟನೆ ನಡೆಯುತ್ತಿತ್ತು. ಪ್ರತಿಭಟನಾಕಾರರು ಕಾಬೂಲ್​ನ ಸೆರೆನಾ ಹೋಟೆಲ್​ನಿಂದ ಜಾಥಾ ಮೂಲಕ ಪ್ಯಾಲಸ್​ ಕಡೆಗೆ ಬರುತ್ತಿದ್ದರು. ಇನ್ನು ಸೆರೆನಾ ಹೋಟೆಲ್​​ನಲ್ಲಿ ಒಂದು ವಾರದಿಂದ ಐಎಸ್​ಐ ಡೈರೆಕ್ಟರ್​ ಉಳಿದುಕೊಂಡಿದ್ದಾನೆ ಎನ್ನಲಾಗಿದೆ.

ಪ್ರತಿಭಟನಾ ನಿರತ ವಿಡಿಯೋದಲ್ಲಿ ಅಫ್ಘಾನಿಸ್ತಾನದ ನೂರಾರು ಮಹಿಳೆಯರು ಹಾಗೂ ಪುರುಷರನ್ನ ಕಾಣಬಹುದಾಗಿದೆ. ಪ್ರತಿಭಟನಾಕಾರರು ಆಜಾದಿ, ಆಜಾದಿ ಎಂದು ಘೋಷಣೆ ಕೂಗಿದ್ದಾರೆ. ಜೊತೆಗೆ ಡೆತ್​ ಟು ಪಾಕಿಸ್ತಾನ್, ಡೆತ್ ಟು ಐಎಸ್​ಐ ಎಂದು ಕೂಗುತ್ತಿದ್ದಾರೆ. ವೈರಲ್ ಆಗಿರುವ ಮತ್ತೊಂದು ವಿಡಿಯೋದಲ್ಲಿ ಪಂಜಶೀರ್ ಮೇಲೆ ಆಕ್ರಮಣ ಮಾಡುವ ಹಕ್ಕು ಪಾಕಿಸ್ತಾನಕ್ಕಾಗಲಿ ಅಥವಾ ತಾಲಿಬಾನ್​ಗೆ ಇಲ್ಲ ಅಂತಾ ಮಹಿಳೆಯೊಬ್ಬರು ಕೂಗಿದ್ದಾಳೆ.

ಐಎಸ್​ಐ ಮುಖ್ಯಸ್ಥ ಅಫ್ಘಾನಿಸ್ತಾನಕ್ಕೆ ಬಂದ ಬಳಿಕ ಪಂಜ್​ಶೀರ್ ವ್ಯಾಲಿಯನ್ನ ತಾಲಿಬಾನಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ತಾಲಿಬಾನಿಗಳಿಗೆ ನೀಡುತ್ತಿರುವ ಬೆಂಬಲವನ್ನ ವಿರೋಧಿಸಿ ಪ್ರತಿಭಟನೆ ನಡೆದಿದೆ.

Source: newsfirstlive.com Source link