‘ರಾಧೆ ಶ್ಯಾಮ’ ಸೀರಿಯಲ್​ನಲ್ಲಿ ಅಶ್ವಿನಿ ಗೌಡ; ಏನ್ ಪಾತ್ರ..?

‘ರಾಧೆ ಶ್ಯಾಮ’ ಸೀರಿಯಲ್​ನಲ್ಲಿ ಅಶ್ವಿನಿ ಗೌಡ; ಏನ್ ಪಾತ್ರ..?

ಕನ್ನಡದಲ್ಲಿ ಅದೆಷ್ಟೋ ಹೊಸ ಧಾರಾವಾಹಿಗಳು ವಿಭಿನ್ನ ರೀತಿಯ ಕಥೆಗಳೊಂದಿಗೆ ಪ್ರೇಕ್ಷಕರನ್ನ ರಂಜಿಸುತ್ತಿವೆ. ಆ ಸಾಲಿಗೆ ಮತ್ತೊಂದು ಸೆರ್ಪಡೆ ‘ರಾಧೆ ಶ್ಯಾಮ’.

ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಬರಲು ಸಜ್ಜಾಗಿರುವ ರಾಧೆ ಶ್ಯಾಮ ಧಾರಾವಾಹಿ ಬಗ್ಗೆ ಈಗಾಗಲೇ ನಾವು ಸಾಕಷ್ಟು ಮಾಹಿತಿ ನೀಡಿದ್ವಿ.. ಈಗ ಮತ್ತೊಂದು ಹೊಸ ಸುದ್ದಿ ಅಂದ್ರೆ ಕನ್ನಡದ ಕಿರುತೆರೆ ಹಾಗೂ ಹಿರಿತೆರೆ ಮೇಲೆ ತಮ್ಮದೇ ಆದ ಛಾಪು ಮೂಡಿಸಿರುವ ಅಶ್ವಿನಿ ಗೌಡ ರಾಧೆ ಶ್ಯಾಮ ಧಾರಾವಾಹಿಯಲ್ಲಿ ಪ್ರಮುಖ ರೋಲ್​ ಮಾಡುತ್ತಿದ್ದಾರೆ.

ಸಿನಿಮಾ ಇಂಡಸ್ಟ್ರಿಗೆ ಹೀರೋಯಿನ್​ ಆಗಿ ಎಂಟ್ರಿ ಕೊಟ್ಟ ಅಶ್ವಿನಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೆಯಲ್ಲ ಜನ ಮನ್ನನೆಗೆ ಪಾತ್ರವಾದ ಕಾವೇರಿ, ಪದ್ಮಾವತಿ, ಮರಳಿ ಬಂದಳು ಸೀತೆ ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ್ದು, ಸದ್ಯ ತೆಲುಗಿನ ​ಅಮ್ಮಕೂ ತೆಲಿಯನಿ ಕೋಯಿಲಮ್ಮ ಸೀರಿಯಲ್ ನಟಿಸುತ್ತಿದ್ದು, ಬಹು ಭಾಷೆಗಳಲ್ಲಿ ಸೈ ಎನಿಸಿಕೊಂಡಿದ್ದಾರೆ ಅಶ್ವಿನಿ.

ಇದನ್ನೂ ಓದಿ: ನಟಿ ಇಶಿತಾಗೆ ಗಂಡ ಮುರುಗ ಕೊಟ್ಟ ಸರ್​ಪ್ರೈಸ್ ನೋಡಿ ಕಣ್ತುಂಬಿ ಬಂತು..! ಏನದು ಸರ್​ಪ್ರೈಸ್?

blank

ಸದ್ಯ ಅಶ್ವಿನಿ ಅವರು ರಾಧೆ ಶ್ಯಾಮ ಧಾರಾವಾಹಿಯಲ್ಲಿ ಕಥಾ ನಾಯಕ ಶ್ಯಾಮನ ತಾಯಿ ಪಾತ್ರ ನಿರ್ವಹಿಸಲಿದ್ದು, ಮುಗ್ಧ ಮನಸ್ಸಿನ ಮುದ್ದು ಮುಖದ ಶ್ಯಾಮ ಅಮ್ಮನೇ ದೇವರು ಎಂದು ಬದುಕುತ್ತಿರುತ್ತಾನೆ. ಯಾವುದೇ ಕೆಲಸವಿದ್ದರೂ ಹಿಂಜರಿಕೆಯಿಲ್ಲದೇ ಮಾಡುತ್ತಾನೆ.. ಇದಕ್ಕೆಲ್ಲ ಕಾರಣ ಅಮ್ಮನ ಆಶೀರ್ವಾದವೆಂದು ಬದುಕುತ್ತಿರುವ ಸಂಸ್ಕಾರವಂತ ನಮ್ಮ ಶ್ಯಾಮ.

ಇದನ್ನೂ ಓದಿ:ಕೃಷ್ಣ ಜನ್ಮಾಷ್ಟಮಿಗೆ ರಾಧೆ ಶ್ಯಾಮ ಟೈಟಲ್​ ಟ್ರ್ಯಾಕ್​ ಗಿಫ್ಟ್..​!

ಇನ್ನೂ ರಾಧೆ ಪಾತ್ರ ಶ್ಯಾಮನಿಗೆ ತದ್ವಿರುದ್ಧ. ಅಪ್ಪ ಅಮ್ಮನ ಮುದ್ದಿನ ಮಗಳು. ಹಾಗೂ ಸರಿ ತಪ್ಪನ್ನು ಮುಖಕ್ಕೆ ಹೊಡಿದಾಗೆ ಹೇಳುವ ಹುಡುಗಿ.. ಯಾವುದಕ್ಕೆ ಹೆದರದೆ ಮುನ್ನುಗುವ ಹೆಣ್ಣುಮಗಳು. ಈ ರೀತಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ರಾಧೆ ಶ್ಯಾಮ ಹೇಗೆ ಒಂದಾಗ್ತಾರೆ ಎಂಬುವುದೇ ಕಥೆಯ ಒನ್​ ಲೈನ್​ ಸ್ಟೋರಿ.
ಈಗಾಗಲೇ ರಾಧೆ ಶ್ಯಾಮ ಧಾರಾವಾಹಿಯ ಟೈಟಲ್​ ಟ್ರ್ಯಾಕ್​ ಜನಕ್ಕೆ ಇಷ್ಟಾ ಆಗಿದ್ದು, ಇದೇ ಸೆಪ್ಟಂಬರ್​ 6 ರಂದು ರಾಧೆ ಶ್ಯಾಮ ವೀಕ್ಷಕರ ಮನೆಗೆ ಬರಲು ಸಜ್ಜಾಗಿದ್ದು, ರಾಧೆ ಶ್ಯಾಮ ಧಾರಾವಾಹಿ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿರುವ ಅಶ್ವಿನಿ ಗೌಡ ಅವರಿಗೆ ಆಲ್​ ದಿ ಬೆಸ್ಟ್​.

ಇದನ್ನೂ ಓದಿ: ರಾಧೆ ಶ್ಯಾಮ ಧಾರಾವಾಹಿಯ ರಾಧೆ ಯಾರು ಗೊತ್ತಾ..?

Source: newsfirstlive.com Source link