‘ಶಾಸಕ ಜಮೀರ್ ಅಹ್ಮದ್​ ಕೂಡ ಒಂಥರಾ ತಾಲಿಬಾನೇ’ -ಸೊಗಡು ಶಿವಣ್ಣ

‘ಶಾಸಕ ಜಮೀರ್ ಅಹ್ಮದ್​ ಕೂಡ ಒಂಥರಾ ತಾಲಿಬಾನೇ’ -ಸೊಗಡು ಶಿವಣ್ಣ

ತುಮಕೂರು: ದೇಶದಲ್ಲಿ ಬಹಳಷ್ಟು ಬಂದಿ ತಾಲಿಬಾನಿಗಳಿದ್ದಾರೆ.. ಶಾಸಕ ಜಮೀರ್ ಅಹ್ಮದ್ ಕೂಡ ಒಂಥರಾ ತಾಲಿಬಾನೇ ಅಂತ ಮಾಜಿ ಸಚಿವ ಸೊಗಡು ಶಿವಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, ತುಮಕೂರಿನಲ್ಲಿ ತಾಲಿಬಾನಿಗಳಿದ್ದಾರೆ. 1994ರಲ್ಲಿ ಒಬ್ಬ ಟೆರರಿಸ್ಟ್ ಇದ್ದ. ಅವನನ್ನು 15 ವರ್ಷ ಆದ್ಮೇಲೆ ಹಿಡ್ಕೊಂಡು ಹೋದ್ರು. ಆದರೆ ಈಗ ಆತ ಪೆರೋಲ್​​ ಮೇಲೆ ಹೊರಗೆ ಬಂದಿದ್ದಾನೆ.. ಇದೇ ರೀತಿ ತುಮಕೂರಲ್ಲಿ ನೂರೆಂಟು ಜನ ತಾಲಿಬಾನಿಗಳಿದ್ದಾರೆ.

blank

ಎಸ್‌ಎಫ್‌ಐ, ಪಿಎಫ್‌ಐ ಅವರೆಲ್ಲ ಅವರೆ ತಾಲಿಬಾನಿಗಳು. ಕಾಂಗ್ರೆಸ್​ ಹೈನಲ್ಲೂ ತಾಲಿಬಾನ್​​ಗಳಿದ್ದಾರೆ. ಬೆಂಗಳೂರಲ್ಲಿ ಯಾಕಷ್ಟು ಗಲಾಟೆ ಆಯ್ತು ಎಲ್ಲರಿಗೂ ಗೊತ್ತು. ಶಾಸಕ ಜಮೀರ್ ಕೂಡ ಒಂಥರಾ ತಾಲಿಬಾನೇ. ಬೆಂಗಳೂರು ಗಲಭೆ ಪ್ರಕರಣ ಏಕೆ ಆಯ್ತು..? ಪೊಲೀಸ್ ಠಾಣೆಗೆ ನುಗ್ಗಿ ಹೊಡಿತಾರೇ ಎಂದರೇ ಹುಟುಗಾಟವಲ್ಲ.. ಆಗಿನ ಗೃಹಮಂತ್ರಿ, ಇಂದಿನ ಮುಖ್ಯಮಂತ್ರಿ ಸ್ಪಾಟ್‌ಗೆ ಹೋಗಿ ನಿಯಂತ್ರಿಸಿದ್ದರು. ಜಮೀರ್ ಹಾಗೂ ಅಸಾವುದ್ದೀನ್ ನಂತಹವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

Source: newsfirstlive.com Source link