ಕಟೀಲ್ ನೇತೃತ್ವಕ್ಕೆ ಜಯ ಸಿಕ್ಕಿದೆ, ಬೊಮ್ಮಾಯಿ ಸರ್ಕಾರವನ್ನ ಜನ ಒಪ್ಕೊಂಡಿದ್ದಾರೆ -ಅರುಣ್ ಸಿಂಗ್

ಕಟೀಲ್ ನೇತೃತ್ವಕ್ಕೆ ಜಯ ಸಿಕ್ಕಿದೆ, ಬೊಮ್ಮಾಯಿ ಸರ್ಕಾರವನ್ನ ಜನ ಒಪ್ಕೊಂಡಿದ್ದಾರೆ -ಅರುಣ್ ಸಿಂಗ್

ನವದೆಹಲಿ: ಮಹಾನಗರ ಪಾಲಿಕೆಯಲ್ಲಿ ಉತ್ತಮ ಫಲಿತಾಂಶ ಸಿಕ್ಕ ಬೆನ್ನಲ್ಲೇ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ.. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಎಂ ಬೊಮ್ಮಾಯಿ ನೇತೃತ್ವಕ್ಕೆ ಜಯ ಸಿಕ್ಕಿದೆ, ಬೊಮ್ಮಾಯಿ ಸರ್ಕಾರವನ್ನ ಜನ ಒಪ್ಪಿದ್ದಾರೆ ಅಂತಾ ಹೇಳಿದರು.

blank

ಮುಂದಯೂ ಕೂಡಾ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. 2023ರಲ್ಲಿ ಮತ್ತೆ ನಾವು ಅಧಿಕಾರ ನಡೆಸುತ್ತೇವೆ. ಯಡಿಯೂರಪ್ಪ ನೀಡಿರೋ ಕೆಲಸವನ್ನ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಕಟೀಲ್ ಸಂಘಟನೆ ಕೆಲಸ ಮಾಡುತ್ತಾರೆ. ಬೊಮ್ಮಾಯಿ ಸರ್ಕಾರದ ಕೆಲಸ ಮಾಡ್ತಿದ್ದಾರೆ. ಇಬ್ಬರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. 2023 ರಲ್ಲಿ ಜನರ ವಿಶ್ವಾಸ ಗಳಿಸಿ ಸರ್ಕಾರ ರಚನೆ ಮಾಡುತ್ತೆವೆ ಎಂದರು.

May be an image of 3 people and people standing

 

Source: newsfirstlive.com Source link