‘ಜೊತೆ ಜೊತೆಯಲಿ’ ಜೋಡಿಗೆ ಮದುವೆ ಸಂಭ್ರಮದ ಜೊತೆಗೆ ಮತ್ತೊಂದು ಖುಷಿ..!

‘ಜೊತೆ ಜೊತೆಯಲಿ’ ಜೋಡಿಗೆ ಮದುವೆ ಸಂಭ್ರಮದ ಜೊತೆಗೆ ಮತ್ತೊಂದು ಖುಷಿ..!

ಜೊತೆ ಜೊತೆಯಲಿ ಈ ಟೈಟಲ್​ ಕೇಳಿದ ತಕ್ಷಣ ಜನಕ್ಕೆ ನೆನಪಾಗೋದು ಆ ಒಂದು ಸುಮಧುರ ಟ್ರ್ಯಾಕ್​. ಎಷ್ಟೋ ಜನ ಈ ಟ್ರ್ಯಾಕ್​ ಕೇಳಿ ಫಿದಾ ಆಗಿದ್ದಾರೆ. ಮಾತ್ರವಲ್ಲದೇ ಧಾರಾವಾಹಿಯನ್ನ ನೋಡಲು ಆರಂಬಿಸಿದ್ದಾರೆ. ಹೀಗೇ ಟೈಟಲ್​ ಟ್ರ್ಯಾಕ್​ ಮೂಲಕವೇ ಸಖತ್​ ಸದ್ದು ಮಾಡಿರುವ ಜೊತೆ ಜೊತೆಯಲಿ ಧಾರಾವಾಹಿಯ ಬಗ್ಗೆ ಹೇಳೊಕೆ ಸಾಕಷ್ಟಿದೆ.

45 ವರ್ಷ ವಯಸ್ಸಿನ ವ್ಯಕ್ತಿ ಹಾಗೂ 20 ವರ್ಷದ ಹುಡುಗಿ ನಡುವೆ ನಡೆಯುವಂತಹ ಪ್ರೀತಿ ಕಥೆಯನ್ನು ಮುಖ್ಯ ಎಳೆಯಾಗಿಟ್ಟುಕೊಂಡು ಆರಂಭವಾದ ಈ ಸೀರಿಯಲ್​ನ ಜನ ಮೊದಲ ದಿನದಿಂದಲೂ ವೀಕ್ಷಣೆ ಮಾಡ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆ ಒಂದು ಪ್ರೊಮೋ. ಹೌದು ಅನಿರುದ್ಧ​ ಆಂದ್ರೆ ಆರ್ಯವರ್ಧನ್​ ಅವರ ಎಂಟ್ರಿ ನೋಡಿ ಜನಕ್ಕೆ ಅಶ್ಚರ್ಯ ಜೊತೆಗೆ ಕುತೂಹಲ ಹೆಚ್ಚಾಗಿತ್ತು.

blank

ಆದರೆ ಇಂಹತ ಪ್ರೀತಿ ಕಥೆ ನಿಜವಾಗಲೂ ವರ್ಕ್​ ಆಗುತ್ತಾ ಅಂತಾ ಅಂದುಕೊಂಡಿದ್ರು, ಆದ್ರೆ ಸೀರಿಯಲ್​ ಎಪಿಸೋಡ್​ ಸಾಗ್ತಾ ಸಾಗ್ತಾ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಯ್ತು.. ಜೊತೆ ಜೊತೆಯಲಿ ಧಾರಾವಾಹಿ ಎಲ್ಲಾ ಪಾತ್ರಗಳು ಕೂಡಾ ಜನಮನ್ನಣೆ ಗಳಿಸಿದ್ವು. ಕಥೆ ಚಿತ್ರಕಥೆ ಸಂಭಾಷಣೆ ಕೂಡ ಈ ಧಾರಾವಾಹಿ ಸಕ್ಸಸ್​ಗೆ ಕಾರಣವಾಯ್ತು.

ಇದೀಗ ಜೊತೆ ಜೊತೆಯಲಿ ಧಾರಾವಾಹಿಯ ಬಗ್ಗೆ ಇಷ್ಟೆಲ್ಲ ಹೇಳಲು ಒಂದು ಮುಖ್ಯ ಕಾರಣ ಇದೆ ಅದು ಏನಪ್ಪಾ ಅಂದ್ರೆ. ಈ ಧಾರಾವಾಹಿ ಆರಂಭವಾಗಿ ಬರೋಬ್ಬರಿ ಸೆಪ್ಟಂಬರ್ 11ಕ್ಕೆ 3 ವರ್ಷವಾಗುತ್ತೆ. 2019 ಸೆಪ್ಟಂಬರ್​ 11 ರಂದು ಭರ್ಜರಿಯಾಗಿ ಲಾಂಚ್​ ಆದ ಈ ಧಾರಾವಾಹಿ ಅಂದಿನಿಂದ ಇಲ್ಲಿಯವರೆಗೂ ಅದೇ ಹವಾ ಮೆಂಟೈನ್​ ಮಾಡಿಕೊಂಡು ಬಂದಿದ್ದು, 500 ಎಪಿಸೋಡ್​ ಕಂಪ್ಲೀಟ್​ ಮಾಡಿದೆ.

blank

ಸದ್ಯ ಈ ಧಾರಾವಾಹಿಯಲ್ಲಿ ಅನು ಆರ್ಯವರ್ಧನ್​ ಮದುವೆ ಸಂಭ್ರಮ ನಡೀತಿದೆ. ಪ್ರೇಕ್ಷಕರಿಗೆ ತುಂಬಾನೆ ಇಷ್ಟವಾಗಿದೆ. ಜೊತೆಗೆ ಈ ಧಾರಾವಾಹಿಯ ರಾಜನಂದಿನಿ ಯಾರು..ಯಾರು ಆ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕ್ಯೂರಿಯಾಸಿಟಿ ಕೂಡ ಜನರ ಮನಸಲ್ಲಿ ಸದ್ಯ ಕಾಡುತ್ತಿದೆ. ಒಟ್ಟಿನಲ್ಲಿ ವಿಭಿನ್ನ ಕಥೆಯ ಮೂಲಕ ಸಖತ್​ ಸದ್ದು ಮಾಡುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಗೆ ಕಂಗ್ರಾಟ್ಸ್​​ ಅಂಡ್​ ಆಲ್​ ದಿ ಬೆಸ್ಟ್.

Source: newsfirstlive.com Source link