ಸಚಿವ ನಿರಾಣಿ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಅಕೌಂಟ್​- ಫಾಲೋವರ್ಸ್​​ಗೆ ಸಚಿವರ ಎಚ್ಚರಿಕೆ

ಸಚಿವ ನಿರಾಣಿ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಅಕೌಂಟ್​- ಫಾಲೋವರ್ಸ್​​ಗೆ ಸಚಿವರ ಎಚ್ಚರಿಕೆ

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಹಲವು ರಾಜಕಾರಣಿಗಳ, ಗಣ್ಯರ ಹೆಸರಿನಲ್ಲಿ ಫೇಸ್​ ಬುಕ್​ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್​ ತೆರೆದು ಅಮಾಯಕರಿಗೆ ವಂಚಿಸುತ್ತಿರುವ ಘಟನೆ ಹೆಚ್ಚಾಗ್ತಾ ಇದೆ. ಅದ್ರಂತೆ ಸಚಿವ ಮುರುಗೇಶ್ ನಿರಾಣಿ ಹೆಸರಿನಲ್ಲೂ ಕೂಡ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದು, ಸ್ನೇಹಿತರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ.

ನಕಲಿ‌ ಖಾತೆ ಬಗ್ಗೆ ನಿರಾಣಿ ಫೇಸ್​ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ‌ ಮೂಲಕ ಸ್ಪಷ್ಟನೆ ನೀಡಿದ್ದು, ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಮೋಸ ಮಾಡೋದಕ್ಕಾಗಿಯೇ ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹೀಗೆ ಮಾಡಿದ್ದಾರೆ. ಈ ಬಗ್ಗೆ ನಾನು ಸೈಬರ್ ಕ್ರೈಂ​ಗೆ ದೂರು ನೀಡಲು ಮುಂದಾಗಿದ್ದೇನೆ. ಇಂತಹ ಸಂದೇಶಗಳಿಂದ ಮೋಸ ಹೋಗಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದ್ದಾರೆ.

Source: newsfirstlive.com Source link