ಘನ ಘೋರ ದುರಂತ! ರಾತ್ರಿ ಮಲಗಿದ್ದಾಗ ಮನೆ ಮೇಲೆ ಬಿತ್ತು 11,000 ವೋಲ್ಟ್ ವೈರ್..!​

ಘನ ಘೋರ ದುರಂತ! ರಾತ್ರಿ ಮಲಗಿದ್ದಾಗ ಮನೆ ಮೇಲೆ ಬಿತ್ತು 11,000 ವೋಲ್ಟ್ ವೈರ್..!​

ಜಾರ್ಖಂಡ್​​ನ ಧನ್​ಬಾದ್​ನಲ್ಲಿ ನಿನ್ನೆ ಮಧ್ಯರಾತ್ರಿ ಕರಾಳ ಘಟನೆಯೊಂದು ನಡೆದು ಹೋಗಿದೆ. 11,000 ವೋಲ್ಟೇಜ್ ವೈರ್​ ಒಂದು ಮನೆಯ ಮೇಲೆ ತುಂಡಾಗಿ ಬಿದ್ದು, ಅನಾಹುತ ನಡೆದುಹೋಗಿದೆ.

ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ ವೇಳೆ ಮನೆಯವ್ರೆಲ್ಲ ಮಲಗಿದ್ದಾಗ ಮಹಡಿ ಮೇಲೆ ವೈರ್ ಕಟ್ ಆಗಿ ಬಿದ್ದಿದೆ ಅಂತಾ ಧನ್​ಬಾದ್ ಜಿಲ್ಲೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಹೆಲ್ ಅನ್ಸಾರಿ ಮೃತ ದುರ್ದೈವಿ. ಈತನ ತಾಯಿ ಶಮಿದಾ ಖಟೂನ್ ಮತ್ತು ಸಹೋದರರಾದ ಶಹನವಾಜ್, ಶಹ್ವಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಇವರನ್ನ ಶಹೀದ್ ನಿರ್ಮಲ್ ಮಹ್ಟೊ ಮೆಡಿಕಲ್ ಕಾಲೇಜ್ ಅಂಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ವ್ಯಕ್ತಿಯ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದುರ್ಘಟನೆಗೆ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಹೈ-ವೋಲ್ಟೇಜ್ ವೈರ್​​ಗಳನ್ನ ಅದೆಷ್ಟೋ ಮನೆಯ ಮೇಲ್ಭಾಗದಲ್ಲಿ ಎಳೆದಿದ್ದಾರೆ. ಇದಕ್ಕೆ ಇಂಧನ ಇಲಾಖೆಯ ಬೆಲೆ ತೆರಬೇಕು ಅಂತಾ ಒತ್ತಾಯಿಸಿದ್ದಾರೆ.

Source: newsfirstlive.com Source link