‘ಪ್ರೀತಿ ಮಾಡಬಾರದು.. ಮಾಡಿದ್ರೆ ಹೀಗೆ ಸಾಯಬಾರದು’ -ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಪ್ರೇಮಿ ಆತ್ಮಹತ್ಯೆ

‘ಪ್ರೀತಿ ಮಾಡಬಾರದು.. ಮಾಡಿದ್ರೆ ಹೀಗೆ ಸಾಯಬಾರದು’ -ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಪ್ರೇಮಿ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಿದ ಯುವತಿ ಮದುವೆಯಾಗುವುದಕ್ಕೆ ನಿರಾಕರಿಸಿದ್ದಕ್ಕೆ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆರ್.ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 31 ವರ್ಷದ ಸಿದ್ದರಾಮ ಎಂಬಾತ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ. ಕಳೆದ ಮೂರು ವರ್ಷಗಳಿಂದ ಸುಧಾ ಹಾಗೂ ಸಿದ್ದರಾಮ ಪರಸ್ಪರ ಪ್ರೀತಿಸ್ತಿದ್ದರು. ಆದರೆ ನಿನ್ನೆ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಮದುವೆಯಾಗೋಕೆ ಯುವತಿ ಹಿಂದೇಟು ಹಾಕಿದ್ದಳಂತೆ.

ಅಲ್ಲದೇ ಆಕೆ ಇನ್ನೋರ್ವನನ್ನ ಪ್ರೀತಿಸಿದ್ಲು ಎನ್ನಲಾಗಿದ್ದು, ಆದ್ದರಿಂದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಅಣ್ಣ ಸಂತೋಷ್​​ ಹೇಳಿಕೆ ನೀಡಿದ್ದಾರೆ. ಸದ್ಯ ಈ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ.

Source: newsfirstlive.com Source link