‘ಕನಸು ನನಸು’: ದುಬಾರಿ ಕಾರು ಖರೀದಿಸಿದ ಖುಷಿಯಲ್ಲಿ ಮಾನ್ಸಿ ಜೋಶಿ

‘ಕನಸು ನನಸು’: ದುಬಾರಿ ಕಾರು ಖರೀದಿಸಿದ ಖುಷಿಯಲ್ಲಿ ಮಾನ್ಸಿ ಜೋಶಿ

ಕನ್ನಡದ ಜನಪ್ರಿಯ ಧಾರಾವಾಹಿ ಪಾರು ಸೀರಿಯಲ್‌ನ ಅನುಷ್ಕಾ ಪಾತ್ರಧಾರಿ ಮಾನ್ಸಿ ಜೋಶಿ ಈಗ ಹ್ಯಾಪಿ ಮೂಡ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಮನೆಗೆ ಹೊಸ ಮೆಂಬರ್ ಬಂದಿದ್ದಾರೆ. ಜೊತೆಗೆ ಒಂದು ಡ್ರೀಮ್‌ ನನಸಾಗಿದೆ.

blank

ಮಾನ್ಸಿ ಜೋಷಿ ಹೊಸ ಕಾರು ಖರೀದಿಸಿದ್ದಾರೆ. ಫ್ಯಾಮಿಲಿ ಜೊತೆ ಕಾರು ಡೆಲಿವರಿ ಪಡೆದಿರೋ ಮಾನ್ಸಿ ಜೋಷಿ ಫುಲ್ ಖುಷ್ ಆಗಿದ್ದಾರೆ. ವಿಶೇಷ ಅಂದ್ರೆ, ಕಾರು ಖರೀದಿಸಿದ ನಂತರ ಮಾನ್ಸಿ ತಮ್ಮ ಕ್ಲೋಸ್‌ ಫ್ರೆಂಡ್ ಪಾರು ಖ್ಯಾತಿಯ ಮೋಕ್ಷಿತಾ ಪೈ ಮನೆಗೆ ಹೋಗಿದ್ದರು. ಮೋಕ್ಷಿತಾ ಮಾನ್ಸಿ ಅವರ ಹೊಸ ಕಾರನಲ್ಲಿ ಒಂದು ರೌಂಡ್ ಹಾಕಿ, ಸ್ನೇಹಿತೆಗೆ ವಿಷ್ ಮಾಡಿದ್ದಾರೆ.

blank

ಮನೆ ಹಾಗೂ ಕಾರು ಖರೀದಿಸೋದು ಎಲ್ಲರಿಗೂ ಒಂದು ಡ್ರೀಮ್. ಆ ಕನಸು ನನಸಾದ ಕ್ಷಣ ಯಾರೂ ಮರೆಯೋಕೆ ಆಗಲ್ಲ. ಅದು ಮೊದಲ ಕಾರು ಖರೀದಿಸಿದ ಕ್ಷಣವಂತೂ ಜಸ್ಟ್ ಬ್ಯೂಟಿಫುಲ್‌. ಹೀಗೇ ಮಾನ್ಸಿ ಜೋಷಿ ಅವರ ಮತ್ತಷ್ಟು ಕನಸು ಬೇಗ ಬೇಗ ಸಾಕಾರಗೊಳ್ಳಲಿ ಅನ್ನೋದೇ ನಮ್ಮ ಆಶಯ.

blank

Source: newsfirstlive.com Source link