79ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮನೆಗೆ ನುಗ್ಗಿ ಕಳ್ಳತನ; ಶಾಕ್ ಆದ ತುಮಕೂರು ಪೊಲೀಸರಿಂದ ಕಟ್ಟೆಚ್ಚರ

79ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮನೆಗೆ ನುಗ್ಗಿ ಕಳ್ಳತನ; ಶಾಕ್ ಆದ ತುಮಕೂರು ಪೊಲೀಸರಿಂದ ಕಟ್ಟೆಚ್ಚರ

ತುಮಕೂರು: ಕಳೆದ ಮೂರು ದಿನಗಳಿಂದ ತುಮಕೂರಿನಲ್ಲಿ ಬೀಗ ಹಾಕಿದ ಮನಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಹೀಗಾಗಿ ತುಮಕೂರು ಪೊಲೀಸರು ಕಟ್ಟೆಚ್ಚರ ವಹಿಸಿ ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಎಚ್ಚರ ಜನರೇ ಎಚ್ಚರ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಗ್ರಾಮಗಳಲ್ಲಿ ದೊಡ್ಡ ಕಳ್ಳರ ಗ್ಯಾಂಗ್​​​ ಬಂದಿದೆ. ನಿಮ್ಮ ಮನೆಗಳಿಗೆ ನುಗ್ಗಿ ವಸ್ತುಗಳನ್ನು ಕಳ್ಳತನ ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಪ್ರಚಾರ ಮಾಡುತ್ತಾ ನೊಣವಿನಕೆರೆ ಪೊಲೀಸರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನೊಣವಿನಕೆರೆ ಸಬ್​​ ಇನ್ಸ್​ಪೆಕ್ಟರ್​​ ಗಣೇಶ್​​ ನೇತೃತ್ವದಲ್ಲಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ನೊಣವಿನಕೆರೆಯ ಸುತ್ತ 79 ಹಳ್ಳಿಗಳಿಗೆ ಕಳ್ಳರು ಬಂದಿದ್ದಾರೆ. ಇವರು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಆದ್ದರಿಂದ ಜನರಿಗೆ ಜಾಗೃತಿ ಮೂಡಿಸುತ್ತಾ ಕಳ್ಳರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ನಿತ್ಯಾ ರಾಮ್ ತವರಿಗೆ ವಾಪಸ್​.. ಥ್ರಿಲ್​ ಆದ ರಚ್ಚು..!

Source: newsfirstlive.com Source link