22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಬಳಿಕ ಕೊಂಚ ಬ್ರೇಕ್ ಪಡೆದ ನಿಧಿ ಸುಬ್ಬಯ್ಯ ಹಿಮಾಚಲ ಪ್ರದೇಶಕ್ಕೆ ಹಾರಿದ್ದರು. ಸದ್ಯ ಇದೀಗ ನಿಧಿ ಪ್ರವಾಸದಿಂದ ಹಿಂದಿರುಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಬಿಗ್‍ಬಾಸ್ ಸೀಸನ್-8ರಲ್ಲಿ ತಮ್ಮ ಚೇಷ್ಟೆ ಮತ್ತು ತಮಾಷೆ ಮೂಲಕವೇ ಮನೆ ಮಾತಾಗಿದ್ದ ನಿಧಿ ಸುಬ್ಬಯ್ಯ, ಬಿಗ್‍ಬಾಸ್ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಬೆಳೆಸಿದ್ದ ಅವರು, ಅಲ್ಲಿನ ಮಂಜು ಗಟ್ಟಿದ ಖಾಲಿ ರಸ್ತೆಗಳಲ್ಲಿ, ಬೆಟ್ಟ, ಗುಡ್ಡ, ನದಿ ಹೀಗೆ ಪ್ರಕೃತಿಯ ಮಧ್ಯೆ ಸುಂದರವಾಗಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದನ್ನೂ ಓದಿ: ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

nidhi

ಇದೀಗ ನಿಧಿ ಪ್ರವಾಸದಿಂದ ಮರಳಿ ಮತ್ತೆ ತವರಿನತ್ತ ಮುಖ ಮಾಡಿದ್ದು, ಈ ಕುರಿತಂತೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತೆಗೆ 22 ದಿನಗಳ ನಡಿಗೆ, ಲುಡೋ ಆಟ ಆಡುವುದು, ಓದುವುದು, ಸ್ಕೇಚ್ಚಿಂಗ್ ಮಾಡುವುದು, ಲೈವ್ ಮ್ಯೂಸಿಕ್‍ಗಳನ್ನು ಕೇಳುವುದು, ಮೋಡಗಳನ್ನು ಏರುವ ಪರ್ವತಗಳನ್ನು ಏರುವುದು ಮತ್ತು ಆಕಾಶದಲ್ಲಿ ಬದಲಾಗುತ್ತಿರುವ ಬಣ್ಣಗಳನ್ನು ನೋಡುತ್ತಿರುವುದು. ಮರೆಯಲಾಗದಂತಹ ನೆನಪುಗಳು ಎಂದು ಪ್ರವಾಸಿದಲ್ಲಿ ತಾವು ಕಳೆದ ಸುಂದರವಾದ ಕ್ಷಣದ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: ನಿಧಿ ಸುಬ್ಬಯ್ಯ ಸಾಂಗ್‍ಗೆ ಮನೆ ಮಂದಿ ಫಿದಾ

 

View this post on Instagram

 

A post shared by Nidhi Subbaiah (@nidhisubbaiah)

ಇತ್ತೀಚೆಗಷ್ಟೇ ನಿಧಿ ಕಿಚ್ಚನ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ ಅವರ ಸುದೀಪ್‍ಗೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದರು. ಪಂಚರಂಗಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಿಧಿ ಸುಬ್ಬಯ್ಯ ನಂತರ ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾಬಾಂಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಬಾಲಿವುಡ್‍ನಲ್ಲಿ ಕೂಡ ನಾಯಕಿಯಾಗಿ ಮಿಂಚಿದ್ದಾರೆ.

 

Source: publictv.in Source link