ಇಶಾ ಫೌಂಡೇಶನ್​ಗೆ ಬಿಗ್ ರಿಲೀಫ್.. ‘ಕಾವೇರಿ ಕೂಗು’ ಯೋಜನೆ ಪ್ರಶ್ನಿಸಿದ್ದ ಅರ್ಜಿ ವಜಾ

ಇಶಾ ಫೌಂಡೇಶನ್​ಗೆ ಬಿಗ್ ರಿಲೀಫ್.. ‘ಕಾವೇರಿ ಕೂಗು’ ಯೋಜನೆ ಪ್ರಶ್ನಿಸಿದ್ದ ಅರ್ಜಿ ವಜಾ

ಬೆಂಗಳೂರು: ಕಾವೇರಿ ಕೂಗು ಯೋಜನೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಇಶಾ ಪೌಂಡೇಷನ್​ಗೆ ಬಿಗ್ ರಿಲೀಫ್ ನೀಡಿದೆ. ಯೋಜನೆ ಪ್ರಶ್ನಿಸಿದ್ದ ಪಿಐಎಲ್​ನ್ನು ಹೈಕೋರ್ಟ್ ವಜಾಗೊಳಿಸಿದೆ.

ಕಾವೇರಿ ಕೂಗು ಯೋಜನೆ ಒಂದು ನೋಬಲ್ ಯೋಜನೆಯಾಗಿದೆ.. ಮೇಲಾಗಿ ಸರ್ಕಾರಿ ಜಾಗದಲ್ಲಿ ಸಸಿಗಳನ್ನು ನೆಡುತ್ತಿಲ್ಲ. ಇದರಿಂದ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡುವ ಅಗತ್ಯವಿಲ್ಲ.. ಅರಣ್ಯ ಬೆಳೆಸುವಂತಹ ಯೋಜನೆ ಕೈಗೊಂಡಿರುವ ಇಶಾ ಔಟ್ ರೀಚ್ ಕ್ರಮ ಶ್ಲಾಘನೀಯ ಎಂದು ಹೇಳಿ ಹೈಕೋರ್ಟ್ ಪೀಠ ಅರ್ಜಿಯನ್ನ ವಜಾಗೊಳಿಸಿದೆ.

Source: newsfirstlive.com Source link