ಉತ್ತರ ಕನ್ನಡದಲ್ಲಿ ವರುಣನ ಅಬ್ಬರ- ಹೊನ್ನಾವರದಲ್ಲಿ ದಾಖಲೆ ಮಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸಹ ಮಳೆಯ ಆರ್ಭಟ ಮುಂದುವರಿದಿದೆ. ಬೆಳಗಿನಿಂದ ಕರಾವಳಿ ಭಾಗದಲ್ಲಿ ಅಲ್ಪ ಬಿಡುವು ಕೊಟ್ಟಿದ್ದ ಮಳೆ, ಮಧ್ಯಾಹ್ನದ ಹೊತ್ತಿಗೆ ತೀವ್ರತೆ ಹೆಚ್ಚಿಸಿಕೊಂಡಿದೆ.

ಕರಾವಳಿ ಭಾಗದ ಹೊನ್ನಾವರದಲ್ಲಿ ಕಳೆದ 24 ಘಂಟೆಯಲ್ಲಿ 90.3 ಮಿಲಿ ಮೀಟರ್ ಮಳೆಯಾದರೆ, ಭಟ್ಕಳ 66, ಹಳಿಯಾಳ 9.0, ಮುಂಡಗೋಡು 9.2, ಜೋಯಿಡಾ 11.0, ಕಾರವಾರ 40.9, ಯಲ್ಲಾಪುರ 5.2, ಕುಮಟಾ 61.8, ಅಂಕೋಲಾದಲ್ಲಿ 44.6 ಮಿಲಿ ಮೀಟರ್ ಮಳೆಯಾಗಿದೆ. ಇದನ್ನೂ ಓದಿ: ಜಮೀರ್ ಕೂಡ ಒಂಥರಾ ತಾಲಿಬಾನ್: ಸೊಗಡು ಶಿವಣ್ಣ

ಮಲೆನಾಡು ಭಾಗದ ಶಿರಸಿ, ಸಿದ್ದಾಪುರ ಹಾಗೂ ಘಟ್ಟ ಭಾಗದಲ್ಲೂ ಸಹ ಹೆಚ್ಚಿನ ಮಳೆಯಾಗುತ್ತಿದೆ. ಸಿದ್ದಾಪುರದಲ್ಲಿ 31.0, ಶಿರಸಿಯಲ್ಲಿ 27.5 ಮಿಲಿ ಮೀಟರ್ ಮಳೆಯಾಗಿದ್ದು, ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜಿಲ್ಲೆಯಾದ್ಯಂತ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

Source: publictv.in Source link