ಮಾಜಿ ಸಿಎಂ ಮೆಹಾಬೂಬಾ ಮುಫ್ತಿಗೆ ಮತ್ತೆ ಗೃಹ ಬಂಧನ

ಮಾಜಿ ಸಿಎಂ ಮೆಹಾಬೂಬಾ ಮುಫ್ತಿಗೆ ಮತ್ತೆ ಗೃಹ ಬಂಧನ

ಶ್ರೀನಗರ: ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಈ ಸಂಬಂಧ ಟ್ವೀಟ್​​ ಮಾಡಿರುವ ಮೆಹಬೂಬಾ ಮುಫ್ತಿ, ನನ್ನನ್ನು ಹೌಸ್​​ ಅರೆಸ್ಟ್​ ಮಾಡಲಾಗಿದೆ. ಇದು ಜಮ್ಮು-ಕಾಶ್ಮೀರದ ನೈಜ ಸ್ಥಿತಿಯನ್ನು ಬಟಾಬಯಲು ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಸಹಜ ಸ್ಥಿತಿಗೆ ಮರಳಿದೆ ಎಂಬ ನಕಲಿ ವಾದ ಬಯಲಾಗಿದೆ. ಅಫ್ಘಾನ್​​​​ ಜನರ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸುವ ಭಾರತ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಮಾತ್ರ ಉದ್ದೇಶಪೂರ್ವಕವಾಗಿ ಹತ್ತಿಕ್ಕಲಾಗುತ್ತಿದೆ. ಕಾಶ್ಮೀರಿಗಳ ಹಕ್ಕುಗಳನ್ನು ನಿರಾಕರಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮುಫ್ತಿ.

ಇಂದು ಬೆಳಗ್ಗೆಯಿಂದಲೇ ಜಮ್ಮು-ಕಾಶ್ಮೀರದ ಪೊಲೀಸರು ಇಂಟರ್​​​ನೆಟ್​ ಸೇರಿದಂತೆ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಎರಡು ಪ್ರದೇಶಗಳಲ್ಲೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಮೆಹಾಬೂಬಾ ಮುಫ್ತಿ ಅವರನ್ನು ಹೌಸ್​​ ಅರೆಸ್ಟ್​ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್​ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಕೆಂಡಕಾರುತ್ತಿವೆ.

ಇದನ್ನೂ ಓದಿ: ವಿಶ್ವದ ದಿಗ್ಗಜ ನಾಯಕರ ಹಿಂದಿಕ್ಕಿದ ಪ್ರಧಾನಿ ಮೋದಿ; ಜಾಗತಿಕ ಮಟ್ಟದ ಸಮೀಕ್ಷೆಯಲ್ಲಿ No.1

ಇದನ್ನೂ ಓದಿ: J&K ಮಾಜಿ ಸಿಎಂ ಮೆಹಬೂಬಾ ಮುಫ್ತಿ-ತಾಲಿಬಾನ್ ಸಂಪರ್ಕ ಆರೋಪ; ತನಿಖೆಗೆ ಬಿಜೆಪಿ ಆಗ್ರಹ

Source: newsfirstlive.com Source link