ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿ 38 ಸೆಲಿಬ್ರಿಟಿಗಳ ವಿರುದ್ಧ ಕೇಸ್.. ಏನಿದು ಪ್ರಕರಣ..?

ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿ 38 ಸೆಲಿಬ್ರಿಟಿಗಳ ವಿರುದ್ಧ ಕೇಸ್.. ಏನಿದು ಪ್ರಕರಣ..?

2019ರಲ್ಲಿ ಹೈದರಾಬಾದ್​ ಹೊರವಲಯದಲ್ಲಿ ವೈದ್ಯೆ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಇದೀಗ ಮತ್ತೆ ಸದ್ದು ಮಾಡ್ತಿದೆ. ದಿಶಾ ಪ್ರಕರಣ ಅಂತಾ ಗುರ್ತಿಸಲಾಗಿದ್ದ ಈ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ ಹೆಸರು ಬಹಿರಂಗಪಡಿಸಿ, ಬಾಲಿವುಡ್​ & ಟಾಲಿವುಡ್​ನ 38 ಸೆಲೆಬ್ರಿಟಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

2019 ರಲ್ಲಿ ಹೈದರಾಬಾದ್​ ಹೊರವಲಯದಲ್ಲಿ ವೈದ್ಯೆ ಮೇಲೆ ನಡೆದಿದ್ದ ಕೃತ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ನ್ಯಾಯಾಲಯ ವ್ಯವಸ್ಥೆ ಅತ್ಯಾಚಾರ ಸಂತ್ರಸ್ಥೆ ಹೆಸರನ್ನ ಗೌಪ್ಯವಾಗಿರಿಸಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ಥೆಯ ನಿಜವಾದ ಹೆಸರು ಬಹಿರಂಗವಾಗಿತ್ತು. ಸಂತ್ರಸ್ಥೆಯ ನಿಜವಾದ ಹೆಸರು & ಊರು ಬಹಿರಂಗಪಡಿಸಿದ ಆರೋಪದ ಮೇಲೆ ದೆಹಲಿ ಮೂಲದ ಗೌರವ್​ ಗುಲಾಟಿ ಎಂಬ ವಕೀಲರು ದೂರು ನೀಡಿದ್ದರು.

ದೆಹಲಿಯ ಸಬ್ಜಿಮಂಡಿ ಪೊಲೀಸ್ ​ಠಾಣೆಯಲ್ಲಿ ಗೌರವ್​ ಗುಲಾಟಿ ದೂರು ನೀಡಿದ್ದರು. ಬಾಲಿವುಡ್​& ಟಾಲಿವುಡ್​ನ 38 ಸೆಲೆಬ್ರಿಟಿಗಳ ಮೇಲೆ ವಕೀಲರು ದೂರು ನೀಡಿದ್ದರು. ಐಪಿಸಿ ಸೆಕ್ಷನ್​ 222(ಎ) ಅಡಿಯಲ್ಲಿ ಸೆಲೆಬ್ರಿಟಿಗಳ ಮೇಲೆ ದೂರು ದಾಖಲು ಮಾಡಲಾಗಿದೆ.
ಅನುಪಮ್​ ಖೇರ್​, ಫರ್ಹಾನ್​ ಅಕ್ತರ್​, ಅಜಯ್ ​ದೇವಗನ್​, ಅಕ್ಷಯ್​ ಕುಮಾರ್​, ಸಲ್ಮಾನ್​ಖಾನ್​, ರವಿತೇಜ, ರಾಕುಲ್​ ಪ್ರೀತ್​ಸಿಂಗ್​, ಅಲ್ಲು ಸೀರಿಶ್​, ಚಾರ್ಮಿ ಕೌರ್​ ಸೇರಿದಂತೆ ಇನ್ನೂ ಹಲವು ಖ್ಯಾತ ತಾರೆಯ ವಿರುದ್ಧ ಕೇಸದ ದಾಖಲಾಗಿದೆ.

Source: newsfirstlive.com Source link