ರಾಜ್ಯದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿಲ್ಲ: ಸುಧಾಕರ್

ಬೆಂಗಳೂರು: ನಮ್ಮ ರಾಜ್ಯದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿಲ್ಲ. ನಿಫಾ ಸೋಂಕಿಗೆ ಲಸಿಕೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ರೋಗದ ಲಕ್ಷಣಗಳನ್ನು ಆಧಾರಿಸಿ ಚಿಕಿತ್ಸೆ ಕೊಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಕೇರಳದಲ್ಲಿ ನಿಫಾಗೆ ಮಗುವೊಂದು ಮೃತಪಟ್ಟಿದ್ದು, ಅಲ್ಲಿನ ಸರ್ಕಾರ ಸೋಂಕಿತರ ಮೇಲೆ ತೀವ್ರ ನಿಗಾ ಇಟ್ಟಿದೆ. ಕೇರಳ ಸರ್ಕಾರ ನಿಫಾ ತಡೆಗೆ ಕೈಗೊಂಡ ಕ್ರಮಗಳು ನಮಗೆ ಸಮಾಧಾನ ತಂದಿದೆ ಎಂದರು. ಇದನ್ನೂ ಓದಿ: ಜಮೀರ್ ಕೂಡ  ತಾಲಿಬಾನ್ ಥರಾ: ಸೊಗಡು ಶಿವಣ್ಣ

ಕೇರದಲ್ಲಿ ಮೂರನೇ ಸಲ ನಿಫಾ ಬಂದಿದ್ದು, ಕೇರಳದಲ್ಲಿ ಕಾಡು ಹೆಚ್ಚಿರೋದ್ರಿಂದ ಸೋಂಕು ಕಾಣಿಸಿಕೊಂಡಿರಬಹುದು. ಪ್ರಾಣಿಗಳು ತಿಂದು ಬಿಟ್ಟ ಹಣ್ಣನ್ನು ಮನುಷ್ಯ ತಿಂದರೆ ನಿಫಾ ಬರುತ್ತದೆ ಎಂದು ಸುಧಾಕರ್ ತಿಳಿಸಿದರು.

ನಿಫಾ ಕುರಿತು ರಾಜ್ಯದ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನಷ್ಟು ಗಂಭೀರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿಫಾ ಬಗ್ಗೆ ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡುತ್ತೇನೆ. ರಾಜ್ಯದಲ್ಲಿ ನಿಫಾ ಬರದಂತೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು  ಇದನ್ನೂ ಓದಿ: ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಕರ ಸುಲಿಗೆ – ಹಬ್ಬದ ಸೀಸನ್‍ನಲ್ಲಿ ಸಾರಿಗೆ ದಂಧೆ ಬಯಲು

ಗಣೇಶೋತ್ಸವಕ್ಕೆ ಬಿಬಿಎಂಪಿ ಮೂರು ದಿನದ ನಿಯಮ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ನಿಯಮದ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

1-5 ನೇ ತರಗತಿಗಳ ಶಾಲೆ ಆರಂಭ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಈಗಷ್ಟೇ 6-8 ತರಗತಿಗಳು ಆರಂಭವಾಗಿವೆ. ಎಷ್ಟೋ ಪೋಷಕರು ಇನ್ನೂ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿಲ್ಲ. ಇನ್ನೂ ಸ್ವಲ್ಪ ಸಮಯ ಕಾದು ನೋಡೋಣ ಎಂದರು.

Source: publictv.in Source link