ಬಿ.ಸಿ. ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ.. ಕೃಷಿ ಇಲಾಖೆಯಲ್ಲಿ ₹210 ಕೋಟಿ ಅವ್ಯವಹಾರ ಎಂದು ದೂರು

ಬಿ.ಸಿ. ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ.. ಕೃಷಿ ಇಲಾಖೆಯಲ್ಲಿ ₹210 ಕೋಟಿ ಅವ್ಯವಹಾರ ಎಂದು ದೂರು

ಬೆಂಗಳೂರು: ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಹಾಗ ಕೃಷಿ ಇಲಾಖೆ ಅಪರ ನಿರ್ದೇಶಕ ದಿವಾಕರ್ ವಿರುದ್ಧ ಎಸಿಎಫ್ ಕರ್ನಾಟಕದ ಕೃಷ್ಣಮೂರ್ತಿ ಎಂಬುವವರು ಗಂಭೀರ ಆರೋಪ ಮಾಡಿ ಎಸಿಬಿಗೆ ದೂರು ನೀಡಿದ್ದಾರೆ.

ಕೃಷಿ ಇಲಾಖೆಯಲ್ಲಿ ಬಹುಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಭ್ರಷ್ಟಾಚಾರದ ದಾಖಲೆಗಳ ಸಮೇತ ಎಸಿಬಿಗೆ ದೂರು ನೀಡಿದ್ದಾರೆ. ಇಲಾಖೆಯಲ್ಲಿ 210 ಕೋಟಿ ಭ್ರಷ್ಟಾಚಾರ ನಡೆದಿದೆ. ರೈತರಿಗೆ ಕೊಡುವ ಯಂತ್ರಗಳಲ್ಲಿ ಗೋಲ್ಮಾಲ್ ಆಗಿದೆ ಎಂದು ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.

ತಕ್ಷಣ ಕೃಷಿ ಸಚಿವರ ವಿರುದ್ದ ಕ್ತಮ ತೆಗೆದುಕೊಳ್ಳಬೇಕು.. ಕರ್ನಾಟಕ ರಾಜ್ಯ ಭ್ರಷ್ಟಚಾರದಲ್ಲಿ ನಂಬರ್ 1 ಆಗಿದೆ. ಕೃಷಿ ಇಲಾಖೆಯಲ್ಲಿ ನೀರಾವರಿಗೆ ಪಂಪ್ ಸೆಟ್ ಕೊಡಲಾಗ್ತಿದೆ. ಆ ಮಷಿನ್ ಖರೀದಿಯಲ್ಲಿ ಭ್ರಷ್ಟ ಚಾರ ಆಗಿದೆ. ಔಷಧಿ ಹೊಡೆಯುವ ಮಷಿನ್ ಖರೀದಿಯಲ್ಲಿ ಹಗರಣ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Source: newsfirstlive.com Source link