ಕೇರಳದಲ್ಲಿ ಮತ್ತೆ ಕಾಡುತ್ತಿದೆ ನಿಫಾ ವೈರಸ್: ರಾಜ್ಯದ 5 ಜಿಲ್ಲೆಗಳಿಗೆ ಅಲರ್ಟ್ ಆಗಿರುವಂತೆ ಸೂಚನೆ

ಕೇರಳದಲ್ಲಿ ಮತ್ತೆ ಕಾಡುತ್ತಿದೆ ನಿಫಾ ವೈರಸ್: ರಾಜ್ಯದ 5 ಜಿಲ್ಲೆಗಳಿಗೆ ಅಲರ್ಟ್ ಆಗಿರುವಂತೆ ಸೂಚನೆ

ಬೆಂಗಳೂರು: ಕೇರಳದಲ್ಲಿ ಮತ್ತೊಮ್ಮೆ ನಿಫಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ ರಾಜ್ಯಕ್ಕೂ ಸೋಂಕು ತಗುಲುವ ಭೀತಿ ಎದುರಾಗಿದೆ. ಈ ಹಿನ್ನೆಲೆ ನಿಫಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ಜಿಲ್ಲಾಡಳಿತಗಳಿಗೆ ಅಲರ್ಟ್​ ಆಗಿರುವಂತೆ ಹೇಳಿದೆ.

ಇದನ್ನೂ ಓದಿ: ಕೇರಳಕ್ಕೆ ಮತ್ತೆ ಎಂಟ್ರಿ ಕೊಟ್ಟ ನಿಫಾ ವೈರಸ್​.. ಕೋಯಿಕೋಡ್​​ನಲ್ಲಿ 12 ವರ್ಷದ ಬಾಲಕ ಸಾವು

ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು & ಚಾಮರಾಜನಗರ ಜಿಲ್ಲೆಗಳಿಗೆ ಅಲರ್ಟ್​ ಆಗಿರುವಂತೆ ರಾಜ್ಯ ಸರ್ಕಾರ ಹೇಳಿದ್ದು ಕೇರಳದಿಂದ ಬರುವವರ ಮೇಲೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ. ಜಿಲ್ಲಾಡಳಿತಗಳಿಗೆ ರಾಜ್ಯ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಈ ಮಹತ್ವದ ಸೂಚನೆ ನೀಡಿದ್ದಾರೆ. ಜ್ವರ, ತಲೆನೋವು, ಕಫ, ವಾಂತಿ ಸೇರಿದಂತೆ ರೋಗಲಕ್ಷಣ ಇದ್ದರೆ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕವಾಗಿ ನಿಫಾ ವೈರಸ್ ಹರಡದಂತೆ ನಿಗಾ ವಹಿಸಿ ಎಂದು ಹೇಳಲಾಗಿದೆ.

Source: newsfirstlive.com Source link