ಮನೆಗಿಲ್ಲ ರಸ್ತೆ ಸಂಪರ್ಕ.. ಮಂಚಕ್ಕೆ ಕಟ್ಟಿ ಹೊತ್ತೊಯ್ದರೂ ಬದುಕಲಿಲ್ಲ ಅನಾರೋಗ್ಯ ಮಹಿಳೆಯ ಜೀವ

ಮನೆಗಿಲ್ಲ ರಸ್ತೆ ಸಂಪರ್ಕ.. ಮಂಚಕ್ಕೆ ಕಟ್ಟಿ ಹೊತ್ತೊಯ್ದರೂ ಬದುಕಲಿಲ್ಲ ಅನಾರೋಗ್ಯ ಮಹಿಳೆಯ ಜೀವ

ಮಂಗಳೂರು: ತಮ್ಮ ಮನೆಗೆ ರಸ್ತೆ ಸಂಪರ್ಕವಿಲ್ಲದಿದ್ದರಿಂದ ಅನಾರೋಗ್ಯಕ್ಕೊಳಗಾದ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಿಯ್ಯೂರು ಗ್ರಾಮದಲ್ಲಿ ನಡೆದಿದೆ. ಆಗಸ್ಟ್ 17 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಹಿಳೆಗೆ ರಾತ್ರಿ ಆರೋಗ್ಯ ಹದಗೆಟ್ಟ ಹಿನ್ನೆಲೆ ತಂದೆ ಮಗ ಬೆಳಗ್ಗಿನವರೆಗೂ ಕಾದಿದ್ದಾರೆ. ಬೆಳಗ್ಗೆ ಬೆಂಚಿಗೆ ಅನಾರೋಗ್ಯ ಮಹಿಳೆಯನ್ನ ಕಟ್ಟಿಕೊಂಡು ಖಾಸಗಿ ತೋಟದಲ್ಲಿ ನಡೆದುಕೊಂಡು ಹೊತ್ತೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿಯೇ ತಾಯಿ ಸಾವನ್ನಪ್ಪಿದ್ದಾರೆ. ಕೆರೆಹಿತ್ತಿಲು ನಿವಾಸಿ ಪೂವಣಿ ಗೌಡ ಎಂಬುವವರ ಪತ್ನಿ ಕಮಲ ಸಾವನ್ನಪ್ಪಿದ ಮಹಿಳೆ.

ಪೂವಣಿಗೌಡರ ಪತ್ನಿ ಕಮಲ ಹಲವು ಖಾಯಿಲೆಗಳಿಂದ ಬಳಲುತ್ತಿದ್ದರು.. ನಡೆದುಕೊಂಡು ಹೋಗಲಾರದೇ ತಂದೆ-ಮಗ ಬೆಂಚಿಗೆ ಕಟ್ಟಿ ಎತ್ತಿಕೊಂಡು ಹೋಗುತ್ತಿದ್ದರು.. ಬೆಳಗ್ಗಿನ ವೇಳೆ ಆಸ್ಪತ್ರೆಗೆ ಸೇರಿಸುವಾಗ ಬಹುಅಗಾಂಗ ವೈಫಲ್ಯದಿಂದ ಕಮಲ ಸಾವನ್ನಪ್ಪಿದ್ದಾರೆ.

ಇನ್ನು ಕೇವಲ 200 ಮೀಟರ್ ರಸ್ತೆಗಾಗಿ ಕುಟುಂಬ ಪರದಾಟ ನಡೆಸಿದೆ ಎನ್ನಲಾಗಿದೆ. ತಾಯಿಯನ್ನು ಎತ್ತಿಕೊಂಡು ಹೋಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಸ್ತೆಗಾಗಿ ಹಲವು ಬಾರಿ ಪಂಚಾಯತ್ ಗೆ ಮನವಿ ಮಾಡಿದರೂ ಬೇಡಿಕೆ ಈಡೇರಿರಲಿಲ್ಲ. ಸ್ಥಳೀಯ ಐದಕ್ಕೂ ಹೆಚ್ಚು ಮನೆಯವರಿಗೂ ಇದೇ ಪರಿಸ್ಥಿತಿ ಎನ್ನಲಾಗಿದೆ.

Source: newsfirstlive.com Source link