ಸೂಪರ್ ಮ್ಯಾನ್ ಆದ ರಾಯನ್

ಬೆಂಗಳೂರು: ಮೇಘನಾ ರಾಜ್ ಸರ್ಜಾ ಪುತ್ರ, ಜೂನಿಯರ್ ಚಿರು ಎಂದೇ ಜನಪ್ರಿಯವಾಗಿರುವ ರಾಯನ್ ರಾಜ್ ಸರ್ಜಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಅಪ್‍ಡೇಟ್ಸ್ ನೀಡುತ್ತಿರುತ್ತಾರೆ. ಅದೇ ರೀತಿ ಇದೀಗ ಸೂಪರ್ ಮ್ಯಾನ್ ಬ್ಯಾಂಡ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, ದಿಸ್ ಈಸ್ ಫನ್, ವೇರಿಂಗ್ ಮೈ ಫುಲ್ ಟೈಮ್ ಜಾಬ್ ಟ್ಯಾಗ್. ಮಾಮ್ ಆ್ಯಂಡ್ ಮೈ ಲಿಟಲ್ ಸೂಪರ್ ಮ್ಯಾನ್ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ನಾಮಕರಣ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸೂಪರ್ ಮ್ಯಾನ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನು ಮೇಘನಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ

 

View this post on Instagram

 

A post shared by Meghana Raj Sarja (@megsraj)

ಇತ್ತೀಚೆಗಷ್ಟೇ ರಾಯನ್ ರಾಜ್ ನಾಮಕರಣವನ್ನು ಅದ್ಧೂರಿಯಾಗಿ ಮಾಡಲಾಗಿದ್ದು, ಸಿನಿ ತಾರೆಯರು, ಗಣ್ಯರು, ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ಅಲ್ಲದೆ ಈ ಹಿಂದೆ ಸಂಸದೆ ಸುಮಲತಾ, ಅಭಿಷೇಕ್ ಅಂಬರೀಶ್, ಸುಂದರ್ ರಾಜ್, ಧ್ರುವ ಸರ್ಜಾ ಭಾಗಿಯಾಗಿದ್ದರು. ಅಲ್ಲದೆ ಪುಟ್ಟ ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ ಎಂದು ಬರೆದುಕೊಂಡಿದ್ದರು.

ಹೀಗೆ ಮೇಘನಾ ರಾಜ್ ಸರ್ಜಾ ಮಗನ ನಾಮಕರಣ ಕಾರ್ಯಕ್ರಮ ಇತ್ತೀಚೆಗೆ ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ- ನಟಿಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕೆ ಖುದ್ದು ಮೇಘನಾ ಸ್ಪಷ್ಟನೆ ನೀಡಿದ್ದರು.

Source: publictv.in Source link