‘ಬೂಟಿಂದಲ್ಲ ಬಂದೂಕಿನಿಂದ ಹೊಡೆದ್ರೂ ನಾನು ಕನ್ನಡಕ್ಕಾಗಿ ಬದುಕುತ್ತೇನೆ’- ಜನ್ಮದಿನದಂದು ವಾಟಾಳ್​​​​​​ ಶಪಥ

‘ಬೂಟಿಂದಲ್ಲ ಬಂದೂಕಿನಿಂದ ಹೊಡೆದ್ರೂ ನಾನು ಕನ್ನಡಕ್ಕಾಗಿ ಬದುಕುತ್ತೇನೆ’- ಜನ್ಮದಿನದಂದು ವಾಟಾಳ್​​​​​​ ಶಪಥ

ರಾಮನಗರ: ಕಡಲೆ ಕಾಯಿ ಹಂಚುವ ಮೂಲಕ ಸರಳವಾಗಿ ಕನ್ನಡಪರ ಹೋರಾಟಗಾರ ವಾಟಾಳ್​​ ನಾಗರಾಜ್​​ ತಮ್ಮ ಬರ್ತಡೇ ಆಚರಿಸಿಕೊಂಡರು. ರಾಮನಗರದ KSRTC ಬಸ್​​ ನಿಲ್ದಾಣದಲ್ಲಿ ಕೇಕ್​​ ಕತ್ತರಿಸಿದ ವಾಟಾಳ್​​ ನಾಗರಾಜ್​​ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬಡವರಿಗೆ ಬಾದಾಮಿ ಹಂಚಿದರು. ಈ ಸಂದರ್ಭದಲ್ಲಿ ಮಾತಾಡಿದ ವಾಟಾಳ್​​ ನಾಗರಾಜ್​​​, 1962ರಲ್ಲಿ ಬೆಂಗಳೂರಿನಲ್ಲಿ ಹಿಂದಿ ಚಲನಚಿತ್ರ ಹೇರಿಕೆ ವಿರೋಧಿಸಿದ್ದ ವೇಳೆ ನನ್ನ ಬಂಧಿಸಿ ಬೂಟಿನ ಏಟು ಕೊಟ್ಟರು ಎಂದರು.

ಇನ್ನು, ಬೂಟಿನ ಏಟು ತಿಂದ ದಿನವೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ. ನನಗೆ ಬೂಟಿನ ಏಟಲ್ಲ, ಬಂದೂಕಿನಿಂದ ಹೊಡೆದರೂ ನಾನು ಕನ್ನಡಕ್ಕಾಗಿ ಹೋರಾಡುತ್ತೇನೆ ಎಂದ ವಾಟಾಳ್​​ ನಾಗರಾಜ್​​ ಮೇಕೆದಾಟು ಯೋಜನೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಸಕ್ತಿ ಇಲ್ಲ. ಸಚಿವ ಮುನಿರತ್ನ ಮೂಲತಃ ಆಂಧ್ರ ಪ್ರದೇಶ. ಅಣ್ಣಾಮಲೈ ಪರವಾಗಿ ಚುನಾವಣಾ ಪ್ರಚಾರ ಮಾಡಿದವರು. ಇಂಥವರಿಗೆ ನಮ್ಮ ರಾಜ್ಯದಲ್ಲಿ ಮಂತ್ರಿ ಸ್ಥಾನ ಕೊಟ್ಟಿದ್ದಾರೆ, ಇದು ಆಗಬಾರದಿತ್ತು. ಕೂಡಲೇ ಮುನಿರತ್ನ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ‘ಕನಸು ನನಸು’: ದುಬಾರಿ ಕಾರು ಖರೀದಿಸಿದ ಖುಷಿಯಲ್ಲಿ ಮಾನ್ಸಿ ಜೋಶಿ

ಕೇರಳದ ರಾಜೀವ್ ಚಂದ್ರಶೇಖರ್‌‌ಗೆ ರಾಜ್ಯಸಭಾ ಸ್ಥಾನ ಕೊಟ್ಟಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ನಮ್ಮ ರಾಜ್ಯದಿಂದ ರಾಜ್ಯ ಸಭೆಗೆ ಅವಕಾಶ ಕೊಟ್ಟಿದ್ದಾರೆ. ಈ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು.

Source: newsfirstlive.com Source link