ಒಂಟಿ ಮಹಿಳೆಯರನ್ನೇ ಟಾರ್ಗೆಟ್​​ ಮಾಡುತ್ತಿದ್ದ ಸರಗಳ್ಳರ ಬಂಧನ; 6.2 ಲಕ್ಷ ಮೌಲ್ಯದ ಚಿನ್ನ ವಶ

ಒಂಟಿ ಮಹಿಳೆಯರನ್ನೇ ಟಾರ್ಗೆಟ್​​ ಮಾಡುತ್ತಿದ್ದ ಸರಗಳ್ಳರ ಬಂಧನ; 6.2 ಲಕ್ಷ ಮೌಲ್ಯದ ಚಿನ್ನ ವಶ

ಬೆಂಗಳೂರು: ಒಂಟಿ ಮಹಿಳೆಯರ ಟಾರ್ಗೆಟ್​ ಮಾಡಿದ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 6.2 ಲಕ್ಷ ಮೌಲ್ಯದ 139 ಗ್ರಾಂ ಚಿನ್ನ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತರು ಮಂಬೈ ಮತ್ತು ಲಕ್ನೋ ಮೂಲದವರು. ಇನ್ನು, A1 ಆರೋಪಿ ವಿರುದ್ದ ಮುಂಬೈನ ವಿವಿಧ ಠಾಣೆಯಲ್ಲಿ 18 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. A2 ಆರೋಪಿ‌ ವಿರುದ್ಧವೂ ಸುಮಾರು ಕಳ್ಳತನ ಪ್ರಕರಣಗಳು ಇವೆ ಎಂದು ತಿಳಿದು ಬಂದಿದೆ.

2019ರಲ್ಲಿ ಆರ್.ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್ ನಂಬರ್ ಪ್ಲೇಟ್ ಮಾಡಿ ಕೃತ್ಯಕ್ಕೆ ಉಪಯೋಗಿಸುತ್ತಿದ್ದರು ಆರೋಪಿಗಳು. ಇವರ ವಿರುದ್ಧ ಸಂಜಯನಗರ 2, ಅಮೃತಹಳ್ಳಿ 1 ಸೇರಿ ಮೈಕೋ ಲೇಔಟ್​​ ಪೊಲೀಸ್​ ಠಾಣೆಯಲ್ಲಿ 1 ಅಂದರೆ ನಾಲ್ಕು ಕೇಸುಗಳು ಇವೆ. ಸದ್ಯ ಸಂಜಯನಗರ ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ನಿತ್ಯಾ ರಾಮ್ ತವರಿಗೆ ವಾಪಸ್​.. ಥ್ರಿಲ್​ ಆದ ರಚ್ಚು..!

Source: newsfirstlive.com Source link