ಮಂಡಿಯುದ್ದ ಗುಂಡಿ ಬಿದ್ದರೂ ಸರಿಪಡಿಸದ ಅಧಿಕಾರಿಗಳು.. ರಸ್ತೆ ಮಧ್ಯೆಯೇ ನಾಟಿ ಮಾಡಿದ ಯೂತ್ ಕಾಂಗ್ರೆಸ್

ಮಂಡಿಯುದ್ದ ಗುಂಡಿ ಬಿದ್ದರೂ ಸರಿಪಡಿಸದ ಅಧಿಕಾರಿಗಳು.. ರಸ್ತೆ ಮಧ್ಯೆಯೇ ನಾಟಿ ಮಾಡಿದ ಯೂತ್ ಕಾಂಗ್ರೆಸ್

ರಾಮನಗರ: ಜಿಲ್ಲೆಯ ಹುಣಸನಹಳ್ಳಿ ಗ್ರಾಮದ ರಸ್ತೆ ಅವ್ಯವಸ್ಥೆಯನ್ನ ಖಂಡಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ. ಗುಂಡಿಬಿದ್ದಿರುವ ರಸ್ತೆಯಲ್ಲಿ ಕಾರ್ಯಕರ್ತರು ಭತ್ತದ ನಾಟಿ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ರಾಮನಗರದಿಂದ ಹುಣಸನಹಳ್ಳಿ, ಕುಣಿಗಲ್ ಸೇರಿದಂತೆ 15 ಕ್ಕೂ ಹೆಚ್ಚು ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸಲಿದ್ದು ಗುಂಡಿಬಿದ್ದಿರುವ ರಸ್ತೆಯನ್ನ ಸರಿಪಡಿಸಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದ್ದಾರೆ.
ರಸ್ತೆಯಲ್ಲಿ ಮಂಡಿ ಉದ್ದ ಗುಂಡಿ ಬಿದ್ದಿದ್ದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Source: newsfirstlive.com Source link