ಬ್ರಾಹ್ಮಣರ ವಿರುದ್ಧ ಅವಹೇಳನ; ಛತ್ತೀಸ್​ಘಡ್ ಸಿಎಂ ಭೂಪೇಶ್​​​ ಬಘೇಲ್​​​​ ತಂದೆ ಅರೆಸ್ಟ್​

ಬ್ರಾಹ್ಮಣರ ವಿರುದ್ಧ ಅವಹೇಳನ; ಛತ್ತೀಸ್​ಘಡ್ ಸಿಎಂ ಭೂಪೇಶ್​​​ ಬಘೇಲ್​​​​ ತಂದೆ ಅರೆಸ್ಟ್​

ನವದೆಹಲಿ: ಛತ್ತೀಸ್​ಘಡ್​ ಮುಖ್ಯಮಂತ್ರಿ ಭೂಪೇಶ್​​ ಬಘೇಲ್ ಅವರ​​​ ತಂದೆಯವರನ್ನು ಬಂಧಿಸಿ ರೈಪುರ ಪೊಲೀಸರು ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ನಂದ್​​ ಕುಮಾರ್​​ ಬಘೇಲ್​​ ವಿರುದ್ಧ ಐಪಿಸಿ ಸೆಕ್ಷನ್​​​ 153-ಎ ಅಡಿ ಎಫ್​​ಐಆರ್​​ ದಾಖಲಾಗಿದೆ. ಈ ದೂರಿನ ಆಧಾರದ ಮೇರೆಗೆ ನಂದ್​​​ ಕುಮಾರ್​​ ಬಘೆಲ್​​ ಬಂಧನ ಮಾಡಿ ಪೊಲೀಸರು ಕೋರ್ಟ್​ಗೆ ಒಪ್ಪಿಸಿದ್ದಾರೆ. ಈಗ ರೈಪುರ ಕೋರ್ಟ್​​ ಭೂಪೇಶ್​​​ ಬಘೆಲ್​​ ಅವರ ತಂದೆಯವರನ್ನು 15 ದಿನಗಳ ಕಾಲ ಪೊಲೀಸ್​​ ಕಸ್ಟಡಿಗೆ ನೀಡಿ ಆದೇಶಿಸಿದೆ.

ಸೋಮವಾರ ಸರ್ವ ಬ್ರಾಹ್ಮಣ ಸಮಾಜ ಸಂಘ ನಂದ್​​ ಕುಮಾರ್​​ ಬಘೆಲ್​​ ವಿರುದ್ಧ ಡಿಡಿ ನಗರ ಪೊಲೀಸ್​​ ಠಾಣೆಯಲ್ಲಿ ಕೇಸ್​​ ದಾಖಲಿಸಿತ್ತು. ಈ ದೂರಿನಲ್ಲಿ ನಂದ್​​ ಕುಮಾರ್​​​​ ಬ್ರಾಹ್ಮಣರನ್ನು ವಿದೇಶಿಗರಿಗೆ ಹೋಲಿಸಿ ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಅಲ್ಲದೇ ಬ್ರಾಹ್ಮಣರನ್ನು ಗ್ರಾಮಗಳಿಗೆ ಸೇರಿಸಬೇಡಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಹಿಂದುಳಿದ ವರ್ಗಗಳ ಪರ ರಾಜಕೀಯ ಮಾಡಲು ಬ್ರಾಹ್ಮಣರನ್ನು ನಿಂದಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದರು.

ಇನ್ನು, ಬ್ರಾಹ್ಮಣ ಸಮಾಜದ ದೂರಿನ ಆಧಾರದ ಮೇರೆಗೆ ನಂದ್​​ ಕುಮಾರ್​​​​ ಬಘೆಲ್​​ ವಿರುದ್ಧ ಐಪಿಸಿ ಸೆಕ್ಷನ್ 153-ಎ ಮತ್ತು 505(1)(ಬಿ) ಅಡಿಯಲ್ಲಿ ಎಫ್​​ಐಆರ್​​ ದಾಖಲಿಸಲಾಗಿದೆ. ತನ್ನ ತಂದೆಯ ಬಂಧನದ ಬಗ್ಗೆ ಮಾತಾಡಿರುವ ಭೂಪೇಶ್​​ ಬಘೆಲ್​​​​, ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ನನ್ನ ತಂದೆಯ ಮಾತುಗಳು ಒಂದು ಸಮುದಾಯಕ್ಕೆ ನೋವುಂಟು ಮಾಡಿದೆ. ನಾನು ಇದಕ್ಕೆ ಕ್ಷಮೆ ಕೇಳುತ್ತೇನೆ. ಇವರ ವಿರುದ್ಧ ಅಗತ್ಯ ಕಾನೂನುಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಮೆಹಾಬೂಬಾ ಮುಫ್ತಿಗೆ ಮತ್ತೆ ಗೃಹ ಬಂಧನ

Source: newsfirstlive.com Source link