‘ಜೆಡಿಎಸ್​​​​ ಮುಳುಗುವ ಹಡಗು’ ಎಂದ ಬಿಜೆಪಿಗೆ.. ಮತ್ತೆ ಎದ್ದು ಕೆಲಸ ಮಾಡುತ್ತೇವೆ ಎಂದು ಟಾಂಗ್ ಕೊಟ್ಟ ರೇವಣ್ಣ

‘ಜೆಡಿಎಸ್​​​​ ಮುಳುಗುವ ಹಡಗು’ ಎಂದ ಬಿಜೆಪಿಗೆ.. ಮತ್ತೆ ಎದ್ದು ಕೆಲಸ ಮಾಡುತ್ತೇವೆ ಎಂದು ಟಾಂಗ್ ಕೊಟ್ಟ ರೇವಣ್ಣ

ಬೆಂಗಳೂರು: ಜೆಡಿಎಸ್​​ ಮುಳುಗುವ ಹಡಗು ಎಂದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್​​ಗೆ ಮಾಜಿ ಸಚಿವ ಎಚ್​.ಡಿ ರೇವಣ್ಣ ಖಡಕ್​​ ಉತ್ತರ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತಾಡಿದ ಎಚ್​.ಡಿ ರೇವಣ್ಣ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಜೆಡಿಎಸ್​ ಮುಳುಗುವ ಹಡಗು ಎಂದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ಮುಳುಗುತ್ತಾರೋ ನೋಡೋಣ ಎಂದು ಸವಾಲ್​​ ಹಾಕಿದರು.

2023ರ ವಿಧಾನಸಭಾ ಚುನಾವಣೆವರೆಗೂ ಅರುಣ್​​ ಸಿಂಗ್​​ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಮುಂದುವರಿಯಲಿ. ಅರುಣ ಸಿಂಗ್​​ ಅವರನ್ನೇ ರಾಜ್ಯ ಬಿಜೆಪಿ ಉಸ್ತುವಾರಿಯನ್ನಾಗಿ ಮುಂದುವರಿಸಿ ಎಂದು ಕೇಸರಿ ನಾಯಕರಿಗೆ ಮನವಿ ಮಾಡುತ್ತೇನೆ ಎಂದರು.

ಯಾವ ಪಕ್ಷ ಅಧಿಕಾರದಲ್ಲಿದ್ದಾಗ ಯಾರು ದ್ವೇಷದ ರಾಜಕಾರಣ ಮಾಡಿದರು ಎಂದು ಸದನದಲ್ಲಿ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತೇನೆ. ನಾವು ಯಾವ ಪಕ್ಷಕ್ಕೂ ಅರ್ಜಿ ಹಾಕಿಲ್ಲ, ಅಂತಹ ದುಸ್ಥಿತಿ ಜೆಡಿಎಸ್​ಗೆ ಬಂದಿಲ್ಲ. ಹಡಗು ಮುಳುಗಿದ್ರು ಜೆಡಿಎಸ್​ ಮತ್ತೆ ಮೇಲಕ್ಕೆ ಎದ್ದು ಕೆಲಸ ಮಾಡಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ.. ಪೊಲೀಸರಿಂದ ಲಾಠಿಚಾರ್ಜ್

Source: newsfirstlive.com Source link