ಕಾಡುಪ್ರಾಣಿಗಳ ಬೇಟೆಗೆ ಹೊಂಚುಹಾಕಿದ್ದ ಮೂವರು ಆರೋಪಿಗಳು ಅರೆಸ್ಟ್

ಕಾಡುಪ್ರಾಣಿಗಳ ಬೇಟೆಗೆ ಹೊಂಚುಹಾಕಿದ್ದ ಮೂವರು ಆರೋಪಿಗಳು ಅರೆಸ್ಟ್

ಚಾಮರಾಜನಗರ: ಅಕ್ರಮವಾಗಿ ಬಂದೂಕು ಪಡೆದು ಕಾಡು ಪ್ರಾಣಿಗಳ ಬೇಟೆಗೆ ಹೊಂಚುಹಾಕಿದ್ದ ಮೂವರು ಅರೋಪಿಗಳನ್ನು ಕೊಳ್ಳೇಗಾಲ ವಿಭಾಗದ ಡಿವೈಎಸ್​ಪಿ ನಾಗರಾಜು ತಂಡ ಬಂಧಿಸಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಸಮೀಪದ ಸಿ.ಆರ್ ನಗರದ ಶೇಷುರಾಜು(32), ಹಳೇ ಕೊಟೇ ಗೋವಿಂದ ರಾಜು( 42), ಶಿಲುವೈಪುರ ಗ್ರಾಮದ ಜಪಮಾಲೆ (42)ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳೆಲ್ಲ ಜಾಗೇರಿ ಸಮೀಪದ ಜಪಮಾಲೈ ಮಾದಗುಡ್ಡ ಅರಣ್ಯ ಪ್ರದೇಶ ಅಂಚಿನ ಜಮೀನುಗಳ ಕಡೆ ಶಿಕಾರಿ ಮಾಡಲು ಸಜ್ಜಾಗಿದ್ದರು.

blank

ಖಚಿತ ಮಾಹಿತಿ ತಿಳಿದ ಡಿವೈಎಸ್ಪಿ ನಾಗರಾಜು ಅವರು ಸಿಪಿಐ ಶಿವರಾಜ್ ಬಿ.ಮುದೋಳ್, ಪಿಎಸ್ಐ ವಿ.ಸಿ ಅಶೋಕ್ ಹಾಗೂ ವಿ.ಚೇತನ್ ಮೂರು ತಂಡಗಳಾಗಿ ಸ್ಥಳಕ್ಕೆ ತೆರಳಿ ದಾಳಿ ಮಾಡಿದ್ದು ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಬಂಧಿತರಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 3 ನಾಡ ಬಂದೂಕು, ತಲೆ ಬ್ಯಾಟರಿ, ಮದ್ದಿನ ಪುಡಿ, ಲೋಹದ ತುಂಡುಗಳು ಇನ್ನಿತರ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ.

ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಹಾಗೂ ಅಪರ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್ ಸುಂದರ್ ರಾಜ್ ಪ್ರಶಂಸಿದ್ದು, ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..

Source: newsfirstlive.com Source link