ನೀರಿನ ರಭಸಕ್ಕೆ ಕೊಚ್ಚಿಹೋದ ಸೇತುವೆ- ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತ

– ತೀವ್ರ ಸಂಕಷ್ಟದಲ್ಲಿ ಗ್ರಾಮಸ್ಥರು

ಯಾದಗಿರಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಸತತ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಭಾರೀ ಮಳೆಗೆ ಸಂಪರ್ಕ ಸೇತುವೆ ಕೊಚ್ಚಿಹೋಗಿದೆ.

ಹತ್ತಿಕುಣಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟ ಹಿನ್ನೆಲೆ, ನೀರಿನ ರಭಸಕ್ಕೆ ಯಡ್ಡಳ್ಳಿ ಗ್ರಾಮದ ಸೇತುವೆ ಕೊಚ್ಚಿಹೋಗಿದೆ. ಯಾದಗಿರಿ ತಾಲೂಕಿನಲ್ಲಿ ಹತ್ತಿಕುಣಿ ಜಲಾಶಯ ಮತ್ತು ಯಡ್ಡಳ್ಳಿಗ್ರಾಮ ಬರುತ್ತವೆ. ಸೇತುವೆ ನಾಶ ಹಿನ್ನೆಲೆ ಯಡ್ಡಳ್ಳಿ ಗ್ರಾಮಕ್ಕೆ ತೆರಳಲು ಜನರು ಹರಸಾಹಸಪಡುವಂತಾಗಿದೆ. ಇದನ್ನೂ ಓದಿ:  ಉತ್ತರ ಕನ್ನಡದಲ್ಲಿ ವರುಣನ ಅಬ್ಬರ- ಹೊನ್ನಾವರದಲ್ಲಿ ದಾಖಲೆ ಮಳೆ

ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು, ಜನ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಷ್ಟಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇನ್ನೂ ಭೇಟಿ ನೀಡಿಲ್ಲ. ಹೊರುಂಚಾ, ಅಜ್ಜೊಲ ಸೇರಿದಂತೆ ಇತರೆ ಗ್ರಾಮಗಳ ಗ್ರಾಮಸ್ಥರು, ರೈತರು ಮತ್ತು ವಿದ್ಯಾರ್ಥಿಗಳು ಅದೇ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುತ್ತಿದ್ದು, ಜೀವ ಕೈಯ್ಯಲ್ಲಿ ಹಿಡಿದು ಹಳ್ಳದ ಸೇತುವೆ ದಾಟುತ್ತಿದ್ದಾರೆ.

Source: publictv.in Source link