ಪೊಲೀಸ್ ಸಿಬ್ಬಂದಿಯಿಂದ ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ತೊಂದರೆ.. ಗೃಹ ಸಚಿವರಿಗೆ ಶರವಣ ದೂರು

ಪೊಲೀಸ್ ಸಿಬ್ಬಂದಿಯಿಂದ ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ತೊಂದರೆ.. ಗೃಹ ಸಚಿವರಿಗೆ ಶರವಣ ದೂರು

ಬೆಂಗಳೂರು: ಇಂದು ಕುಮಾರಕೃಪಾ ಗೆಸ್ಟ್ ಹೌಸ್​ನಲ್ಲಿ ಸನ್ಮಾನ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರರವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಚಿನ್ನ ಬೆಳ್ಳಿ ವ್ಯಾಪಾರಸ್ಥರು ಹಾಗೂ ತಯಾರಿಕರಿಗೆ, ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿ ವರ್ಗದವರಿಂದ ಆಗುತ್ತಿರುವ ತೊಂದರೆ ಕುರಿತಂತೆ ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ನೇತೃತ್ವದಲ್ಲಿ ಲಿಖಿತ ದೂರು ನೀಡಲಾಗಿದೆ.

blank

ಚಿನ್ನ ತಯಾರಕರಿಗೆ ಪೋಲಿಸರಿಂದ ಆಗುತ್ತಿರುವ ತೊಂದರೆಗಳ ಕುರಿತು ವಿವರಗಳನ್ನು ನೀಡಲಾಗಿದೆ. ಹಾಗೇ ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲಾಗಿದೆ, ಸ್ವಲ್ಪ ದಿನಗಳಲ್ಲಿ ಲಿಖಿತ ದೂರನ್ನು ಕೂಡ ಸಲ್ಲಿಸಲಾಗುವುದು ಎಂದು ಶರವಣ ಹೇಳಿದ್ದಾರೆ.

blank

ಅಮಾಯಕರ ಮೇಲಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಗೃಹ ಸಚಿವರಲ್ಲಿ, ಮಾನ್ಯ ಮುಖ್ಯಮಂತ್ರಿಗಳಲ್ಲಿ ಹಾಗೇ ಪೊಲೀಸ್ ಉನ್ನತ ಅಧಿಕಾರಿಗಳಲ್ಲಿ ಶರವಣ ಮನವಿ ಮಾಡಿದ್ದಾರೆ.

Source: newsfirstlive.com Source link