ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿ – ವಿಎಚ್‍ಪಿ ಆಗ್ರಹ

ಬೆಂಗಳೂರು: ಹಿಂದೂ ಬಾಂಧವರು ಹಾಗೂ ಗಣಪತಿ ಸಮಿತಿಯವರು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಬೇಕೆಂದು ವಿಶ್ವ ಹಿಂದೂ ಪರಿಷದ್ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಆಚರಣೆ ಆದೇಶಕ್ಕೆ ಸುಧಾಕರ್ ವಿರೋಧ 

 

ಹೇಳಿಕೆಯಲ್ಲಿ ಏನಿದೆ?
ಸೆ.10 ಶುಕ್ರವಾರದಂದು ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಹಬ್ಬವು ನಡೆಯುತ್ತಿದ್ದು, ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಶ್ರೀ ಗಣೇಶೋತ್ಸವವನ್ನು ಆಚರಿಸಲು ಹಾಗೂ ಗಣಪತಿ ಪ್ರತಿಷ್ಠಾಪನೆಯನ್ನು ಕೇವಲ ದೇವಸ್ಥಾನ ಸಭಾ ಮಂದಿರಗಳಿಗೆ ಸೀಮಿತ ಮಾಡದೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸಾರ್ವಜನಿಕ ಪೆಂಡಾಲುಗಳಲ್ಲಿ ಗಣೇಶೋತ್ಸವ ನಡೆಸಲು ಕಳೆದ ವರ್ಷ ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿರುವುದಕ್ಕೆ ಖುಷಿ ಇಲ್ಲ: ಮುತಾಲಿಕ್

ಈ ವರ್ಷವೂ ಸಹ ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಕೊರೊನಾ ಮಹಾಮಾರಿ ಸ್ವಲ್ಪ ಮಟ್ಟಿಗೆ ತನ್ನ ಅಟ್ಟಹಾಸವನ್ನು ಕಡಿಮೆ ಮಾಡಿಕೊಂಡಿರುವುದರಿಂದ ಈ ವರ್ಷವೂ ಸಹ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ವಿಘ್ನ ವಿನಾಶಕನಾದ ಶ್ರೀಗಣೇಶನ ಪರಂಪರಾಗತ ಉತ್ಸವವನ್ನು (ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು) ಸಾರ್ವಜನಿಕವಾಗಿ ಪೆಂಡಾಲುಗಳಲ್ಲಿ ಪ್ರತಿಷ್ಠಾಪನೆ ಮಾಡಲು ಮುಕ್ತ ಅವಕಾಶ ನೀಡಿ, ಹಿಂದೂ ಭಾಂದವರ ಮನಸ್ಸಿಗೆ ನೋವನ್ನುಂಟು ಮಾಡದೆ ಸಹಕರಿಸಿ ಕರ್ನಾಟಕ ಸರ್ಕಾರದ ಮೇಲೆ ವಿಶ್ವಾಸ ಬರುವಂತೆ ನಡೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಆಗ್ರಹ ಮಾಡುತ್ತದೆ.

Source: publictv.in Source link