ಕಾರ್ಮಿಕ ಇಲಾಖೆ ಕೇಂದ್ರ ಕಚೇರಿಯ ಮೇಲೆ ಎಸಿಬಿ ರೇಡ್; ಕಂತೆ ಕಂತೆ ಹಣ ಪತ್ತೆ

ಕಾರ್ಮಿಕ ಇಲಾಖೆ ಕೇಂದ್ರ ಕಚೇರಿಯ ಮೇಲೆ ಎಸಿಬಿ ರೇಡ್; ಕಂತೆ ಕಂತೆ ಹಣ ಪತ್ತೆ

ಕಾರ್ಮಿಕ ಇಲಾಖೆ ಕೇಂದ್ರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳಿಂದ ಮಾಮೂಲು ಸಂಗ್ರಹ ಆರೋಪ ಹಿನ್ನಲೆ 10 ಮಂದಿ ಅಧಿಕಾರಿಗಳ ‌ತಂಡದಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. 8 ಮಂದಿ ಸೀನಿಯರ್ ಇನ್ಸ್​ಪೆಕ್ಟರ್ ಸೇರಿ ಎಸಿಬಿ ಅಧಿಕಾರಿಗಳ ಪರಿಶೀಲನೆ ನಡೆದಿದೆ.

ಕಾರ್ಮಿಕ ಇಲಾಖೆ ಅಡಿ ಬರುವ ಏಜೆನ್ಸಿಗಳಿಂದ ಮಾಮೂಲಿ ಸಂಗ್ರಹ ಆರೋಪ ಕೇಳಿಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿ ಇರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಸಂಜೆ ವೇಳೆಗೆ ಹಣ ಸಂಗ್ರಹ ಮಾಹಿತಿ ಆಧರಿಸಿ ದಾಳಿ ನಡೆಸಿದ ಎಸಿಬಿ ದಾಳಿ ನಡೆಸಿದೆ.

ದಾಳಿ ವೇಳೆ ಸೀನಿಯರ್ ಲೇಬರ್ ಇನ್ಸ್ ಪೆಕ್ಟರ್ ಗಳ ಬಳಿ ಕಂತೆ-ಕಂತೆ ಹಣ ಪತ್ತೆಯಾಗಿದೆ. ಗಾರ್ಮೆಂಟ್ಸ್, ಸೆಕ್ಯುರಿಟಿ ಏಜನ್ಸಿ ಸೇರಿದಂತೆ ಸಾಕಷ್ಟು ಕಂಪೆನಿಗಳಿಂದ ಹಣ ಪೀಕ್ತಿದ್ದ ಆರೋಪ ಕೇಳಿಬಂದಿತ್ತು. ಮಂತ್ಲಿ ಸೆಟ್ಲ್‌ಮೆಂಟ್ ಹೆಸರಲ್ಲಿ ಲೇಬರ್ ಇನ್ಸ್ ಪೆಕ್ಟರ್ ಗಳು ಹಣ ವಸೂಲಿ ಮಾಡ್ತಿದ್ರು ಎನ್ನಲಾಗಿದೆ. ಕಾರ್ಮಿಕರ ಹಿತ ಕಾಪಾಡೋ ಬದಲು ಕಂಪೆನಿಯ ಮಾಲೀಕರ ಹಿತ ಕಾಪಾಡ್ತಾರೆಂಬ ಆರೋಪ ಕೇಳಿಬಂದಿತ್ತಂತೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಬಿ ಲೇಬರ್ ಇನ್ಸ್ ಪೆಕ್ಟರ್ ಗಳ ವಸೂಲಿ ದಿನವೇ ರೈಡ್ ಮಾಡಿದ್ದಾರೆ. ಇನ್ನು ಸ್ಥಳದಲ್ಲೇ ಮೊಕ್ಕಾಂ ಹೂಡಿ ಎಸಿಬಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ಎಸಿಬಿ ಡಿವೈಎಸ್ ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Source: newsfirstlive.com Source link