ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಮದುವೆ; ಲೈವ್​​ನಲ್ಲೇ ಇದೇನು ಮಾಡಿಕೊಂಡ ಹುಚ್ಚು ಹುಡುಗ

ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಮದುವೆ; ಲೈವ್​​ನಲ್ಲೇ ಇದೇನು ಮಾಡಿಕೊಂಡ ಹುಚ್ಚು ಹುಡುಗ

ರಾಯಚೂರು: ಡೆತ್​​ ನೋಟ್​​ ಬರೆದಿಟ್ಟು ಯುವ ಪ್ರೇಮಿಯೋರ್ವ ಫೇಸ್​​​​ಬುಕ್​​ ಲೈವ್​​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಭೀಮೇಶ್ ನಾಯಕ (26) ನೇಣಿಗೆ ಶರಣಾದ ಯುವಕ.

ಭೀಮೇಶ್​​ ನಾಯಕ್​​​​ ಹುಡುಗಿಯೋರ್ವಳನ್ನು ಪ್ರೀತಿಸುತ್ತಿದ್ದ. ಕೆಲವು ದಿನಗಳ ಹಿಂದೆ ಪ್ರೇಯಸಿಯೊಂದಿಗೆ ಭೀಮೇಶ್​​ ನಾಯಕ ಊರು ಬಿಟ್ಟಿದ್ದನಂತೆ. ಈ ಸಂಬಂಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.

ಇಬ್ಬರೂ ಮದುವೆ ಆಗಿದ್ದೇವೆ, ಯುವತಿ ಮನೆಯವರಿಂದ ರಕ್ಷಣೆ ಕೊಡಿಸಿ ಎಂದು ಯುವಕ ಎಸ್​​ಪಿ ಕಚೇರಿಗೆ ಬಂದಿದ್ದನಂತೆ. ಈ ವೇಳೆ ಇಬ್ಬರನ್ನು ಠಾಣೆಗೆ ಕರೆ ತಂದ ಪೊಲೀಸ್​​​​​ ಸಬ್​​ ಇನ್ಸ್​​ಪೆಕ್ಟರ್​​​​ ಪ್ರೇಮಿಗಳನ್ನು ಬೇರೆ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಒಂಟಿ ಮಹಿಳೆಯರನ್ನೇ ಟಾರ್ಗೆಟ್​​ ಮಾಡುತ್ತಿದ್ದ ಸರಗಳ್ಳರ ಬಂಧನ; 6.2 ಲಕ್ಷ ಮೌಲ್ಯದ ಚಿನ್ನ ವಶ

ಇನ್ನು, ಆತ ಪ್ರೀತಿಸಿದ ಯುವತಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಇದರಿಂದ ಮನನೊಂದ ಯುವ ಪ್ರೇಮಿ ನನ್ನ ಸಾವಿಗೆ ಪಿಎಸ್​ಐ ಗಂಗಪ್ಪ ಮತ್ತು ಯುವತಿಯ ಸಂಬಂಧಿಕರು ಕಾರಣ ಎಂದು ಡೆತ್​​ ನೋಟ್​​ ಬರೆದು ತಮ್ಮ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Source: newsfirstlive.com Source link