10 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಿದ ‘ಶಿಖರ್ ಧವನ್, ಆಯೆಶಾ’ ಜೋಡಿ

10 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಿದ ‘ಶಿಖರ್ ಧವನ್, ಆಯೆಶಾ’ ಜೋಡಿ

ಟಿ20 ವಿಶ್ವಕಪ್​ ಕ್ರಿಕೆಟ್​​ ಟೂರ್ನಿಗೆ ತಂಡ ಪ್ರಕಟಣೆಗೆ ಕ್ಷಣಗಣನೆ ಅರಂಭವಾಗಿರುವ ಬೆನ್ನಲ್ಲೇ ಟೀಮ್​ ಇಂಡಿಯಾ ಆರಂಭಿಕ ಆಟಗಾರ ಶಿಖರ್​ ಧವನ್​ಗೆ ವೈಯಕ್ತಿಕ ಆಘಾತ ಎದುರಾಗಿದೆ.

ವಿಚ್ಚೇದನ ಪಡೆದಿರುವುದಾಗಿ ಧವನ್​ ಪತ್ನಿ ಆಯೆಶಾ ಮುಖರ್ಜಿ ತಮ್ಮ ಇನ್ಸ್​​ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ತಮ್ಮ ಖಾತೆಯಲ್ಲಿ ಸುದೀರ್ಘ ಪತ್ರ ಬರೆದಿರುವ ಆಯೆಶಾ ಸುಮಾರು 10 ವರ್ಷಗಳ ದಾಂಪತ್ಯ ಜೀವನವನ್ನ ತೊರೆಯುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಆದ್ರೆ, ಈ ಬಗ್ಗೆ ಶಿಖರ್​ ಧವನ್​ ಯಾವುದೇ ಪ್ರತಿಕ್ರಿಯೆಯನ್ನ ಈವರೆಗೆ ನೀಡಿಲ್ಲ. 2012 ರಲ್ಲಿ ಶಿಖರ್​​ ಧವನ್​, ಅದಾಗಲೇ ಮೊದಲ ಮದುವೆಯನ್ನ ಮುರಿದುಕೊಂಡಿದ್ದ ಮೆಲ್ಬರ್ನ್​ ಮೂಲದ ಬಾಕ್ಸರ್​​ ಆಯೆಶಾ ಮುಖರ್ಜಿಯನ್ನ ಮದುವೆಯಾಗಿದ್ರು.

 

 

View this post on Instagram

 

A post shared by Aesha Mukerji (@apwithaesha)

Source: newsfirstlive.com Source link