ಯಡಿಯೂರಪ್ಪ ಸ್ಟಾರ್ ನಿರ್ದೇಶಕ.. ಬಸವರಾಜ್ ಬೊಮ್ಮಾಯಿ ಹೀರೊ ಇದ್ದಂತೆ ಎಂದ ಶ್ರೀರಾಮುಲು

ಯಡಿಯೂರಪ್ಪ ಸ್ಟಾರ್ ನಿರ್ದೇಶಕ.. ಬಸವರಾಜ್ ಬೊಮ್ಮಾಯಿ ಹೀರೊ ಇದ್ದಂತೆ ಎಂದ ಶ್ರೀರಾಮುಲು

ತುಮಕೂರು: ಸರ್ಕಾರದಲ್ಲಿ ಯಡಿಯೂರಪ್ಪನವರು ಸ್ಟಾರ್ ನಿರ್ದೇಶಕರಿದ್ದಂತೆ.. ಬಸವರಾಜ್ ಬೊಮ್ಮಾಯಿ ಹೀರೊ ಇದ್ದಂತೆ ಎಂದು ಸಚಿವ ಶ್ರೀರಾಮುಲು ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಮುಂದಿನ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯುತ್ತದೆ. ಇದನ್ನು ನಮ್ಮ ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಗಂತ ಯಡಿಯೂರಪ್ಪ ನವರನ್ನು ಸೈಡ್ ಲೈನ್ ಮಾಡಿದ್ದಾರೆ ಅಂತಲ್ಲ. ಸಿನಿಮಾದಲ್ಲಿ ಹೀರೋ ಎಷ್ಟೇ ಒಳ್ಳೆ ಆಕ್ಟ್ ಮಾಡಿ ಜನರನ್ನು ಆಕರ್ಷಣೆ ಮಾಡಿದರೂ ಅದರಲ್ಲಿ ನಿರ್ದೇಶಕರ ಪಾತ್ರ ಮುಖ್ಯ. ಹಾಗಾಗಿ ಯಡಿಯೂರಪ್ಪನವರು ಪಾರ್ಟಿಗೆ ದೊಡ್ಡ ಶಕ್ತಿ ಇದ್ದಹಾಗೆ. ಅವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯುತ್ತದೆ. ಸಿನಿಮಾದಲ್ಲಿ ಹೀರೋಗಿಂತ ದೊಡ್ಡ ಶಕ್ತಿ ನಿರ್ದೇಶಕರಿಗೆ ಇರುತ್ತದೆ. ಹಾಗಾಗಿ ನಮ್ಮ ಪಾರ್ಟಿಯಲ್ಲಿ ಯಡಿಯೂರಪ್ಪನವರಿಗೆ ದೊಡ್ಡ ಶಕ್ತಿ ಇದೆ.

ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಸಾರಿಗೆ ನೌಕರರಿಗೆ ಪರಿಹಾರ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ.. ಕೋವಿಡ್ ವೇಳೆ ಕಾರ್ಯನಿರತರಾಗಿ ಸೋಂಕಿಗೆ ತುತ್ತಾಗಿ ಮೃತಪಟ್ಟ ಸಾರಿಗೆ ನೌಕರರಿಗೆ ಪರಿಹಾರ ಒದಗಿಸಲಾಗುವುದು. ಸಾರಿಗೆ ನೌಕರರ ಮುಷ್ಕರ ವೇಳೆ ವಜಾಗೊಂಡವರನ್ನು ಪುನಃ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ವರ್ಗಾವಣೆಗೊಂಡವರನ್ನೂ ಪುನಃ ಮೂಲ ಡಿಪೋಗೆ ನಿಯೋಜನೆ ಮಾಡುವ ಕುರಿತೂ ಮಾತುಕತೆ ನಡೆದಿದೆ. ಕೆ.ಎಸ್.ಅರ್.ಟಿ.ಸಿ ಅಧ್ಯಕ್ಷರ ಬಳಿ ಈ ಬಗ್ಗೆ ಚರ್ಚಿಸಿ ಶೀಘ್ರಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Source: newsfirstlive.com Source link