ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರಿಂದ ದಾಳಿ ಆರೋಪ.. ನಡೆದಿದ್ದೇನು..?

ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರಿಂದ ದಾಳಿ ಆರೋಪ.. ನಡೆದಿದ್ದೇನು..?

ಬೆಂಗಳೂರು: ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ರಾತ್ರಿ 9 ಗಂಟೆಗೆ ಜಿಮ್ ಮುಗಿಸಿ ಮನೆಗೆ ವಾಪಸ್ ಅಗ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.

ಹೆಬ್ಬಾಳ ಪ್ಲೈ ಓವರ್ ಬಳಿ ಮಂಗಳಮುಖಿಯರು ರಕ್ಷಕ್ ಬ್ಯಾಗ್ ಇಡಿದು ಎಳೆದಿದ್ದಾರೆ ಎನ್ನಲಾಗಿದ್ದು.. ಇದರಿಂದ ಗಾಡಿಯಿಂದ ಕೆಳಗೆ ಬಿದ್ದಿರುವ ರಕ್ಷಕ್ ಕಾಲಿಗೆ ತರಚಿದ ಗಾಯಗಳಿದ್ದು, ಗಾಡಿಯೂ ಡ್ಯಾಮೇಜ್ ಆಗಿದೆ. ಮಂಗಳ ಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ಫ್ಲೈ ಓವರ್ ಮೇಲೆ ಗಾಡಿ ಬಿಟ್ಟು ಅಲ್ಲಿಂದ ರಕ್ಷಕ್ ತಪ್ಪಿಸಿಕೊಂಡಿದ್ದಾರಂತೆ. ಹೆಬ್ಬಾಳ ಪೊಲೀಸರ ನೆರವಿನಲ್ಲಿ ಗಾಡಿಯನ್ನು ತೆಗೆದುಕೊಂಡು ಮನೆಗೆ ವಾಪಸ್ ಆಗಿದ್ದಾರೆ ಎನ್ನಲಾಗಿದೆ.

Source: newsfirstlive.com Source link