ನೇಪಾಳದಲ್ಲಿ ಭೀಕರ ಮಳೆ; ನೀರಿನಲ್ಲಿ ಕೊಚ್ಚಿಹೋದ 50ಕ್ಕೂ ಹೆಚ್ಚು ಜನ, ನೂರಾರು ಮನಗೆಳು ಜಲಾವೃತ

ನೇಪಾಳದಲ್ಲಿ ಭೀಕರ ಮಳೆ; ನೀರಿನಲ್ಲಿ ಕೊಚ್ಚಿಹೋದ 50ಕ್ಕೂ ಹೆಚ್ಚು ಜನ, ನೂರಾರು ಮನಗೆಳು ಜಲಾವೃತ

ಕಳೆದ ಕೆಲ ದಿನಗಳಿಂದ ಜಗತ್ತಿನಾದ್ಯಂತ ಒಂದಲ್ಲ ಒಂದು ವಿಕೋಪಗಳು ಎದುರಾಗುತ್ತಲೆ ಇದೆ. ಬ್ರೆಜಿಲ್​​, ಚೀನಾ, ಅಮೇರಿಕಾ, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿತ್ತು. ಒಂದಲ್ಲ ಒಂದು ರೀತಿ ತತ್ತರಿಸಿ ಹೋಗಿತ್ತು. ಆ ಲೀಸ್ಟ್​​ಗೆ ಈಗ ನೇಪಾಳ ಕೂಡ ಸೇರ್ಪಡೆಗೊಂಡಿದೆ. ಈ ವರ್ಷದಲ್ಲಿ ಮೂರನೇ ಬಾರಿಗೆ ಪ್ರಾಕೃತಿಕ ವಿಕೋಪಕ್ಕೆ ನೇಪಾಳ ಮತ್ತೊಮ್ಮೆ ಸಾಕ್ಷಿ ಆಗಿದೆ.

ರಸ್ತೆಗಳಲ್ಲಿ ನಿಂತಿದ್ದ ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರೋದು.. ಕಟ್ಟಡಗಳ ಮಧ್ಯದಲ್ಲಿ ಕಿರಿದಾದ ರಸ್ತೆಯಲ್ಲಿ ಕಾರು ಕೊಚ್ಚಿಕೊಂಡು ಹೋಗ್ತಿರೋದು.. ಮತ್ತೊಂದು ಕಡೆ ರಸ್ತೆ ಮೇಲೆ ನೀರು ನುಗ್ಗುತ್ತಿರೋ ರಭಸಕ್ಕೆ ಬಾಕ್ಸ್​​ಗಳು, ವಸ್ತುಗಳು ತೇಲಿಕೊಂಡು ಹೋಗುತ್ತಿರೋದು.. ಟೆಂಪೋ, ಕಾರು ಹೀಗೆ ಸಾಲು ಸಾಲಾಗಿ ಗಾಡಿಗಳು ಕೊಚ್ಚಿಕೊಂಡು ಹೋಗುತ್ತಿರೋದು.. ಅಂಗಡಿ ಶಾಪ್​ಗಳಲ್ಲಿ ಸಂಪೂರ್ಣವಾಗಿ ನೀರು ನುಗ್ಗಿರೋದನ್ನ ಹೊರಕ್ಕೆ ಹಾಕುತ್ತಿರೋದು.. ಮತ್ತೊಂದು ಕಡೆ ರಸ್ತೆ ಮೇಲಿ ನಿಂತಿರೋ ಮಳೆ ನೀರಿನಲ್ಲಿ ಜನ ನಡೆದುಕೊಂಡು ಹೋಗುತ್ತಿರೋದು.. ಈ ದೃಶ್ಯಗಳು ಕಂಡು ಬಂದಿದ್ದು ನೇಪಾಳದಲ್ಲಿ..

ಇದಿಷ್ಟೆ ಅಲ್ಲಾ, ಇಡೀ ಕಟ್ಟಡವೇ ಇಲ್ಲಿ ಮಳೆ ನೀರಿನ ರಭಸಕ್ಕೆ ಹೇಗೆ ಕೊಚ್ಚಿಕೊಂಡು ಹೋಗುತ್ತಿದೆ ಅನ್ನೋದನ್ನ ನೋಡಿ. ಮತ್ತೊಂದು ಕಡೆ ಮನೆಗಳೆಲ್ಲಾ ನೀರಿನಲ್ಲಿ ಮುಳುಗಡೆ ಹೋಗಿರೋದು.. ನದಿಗಳೆಲ್ಲ ತುಂಬಿ ರಸ್ತೆ ಮೇಲೆ ಹೇಗೆ ಹರಿಯುತ್ತಿದೆ. ಇದುನ್ನ ನೋಡ್ತಾಯಿದ್ದರೆ ನಿಜಕ್ಕು ಭಯ ಆಗೇ ಆಗುತ್ತೆ.

ನೇಪಾಳದಲ್ಲಿ ಒಂದು ವಾರದ ಹಿಂದೆ ಇವತ್ತು ಹೀಗೆ ಆಗುತ್ತೆ ಅಂತಾ ಊಹೆ ಕೂಡ ನೇಪಾಳಿಗರು ಮಾಡಿರಲಿಕ್ಕಿಲ್ಲ. ಮಂದಗತಿಯಲ್ಲಿ ವಾರದ ಹಿಂದೆ ಜಿಟಿ ಜಿಟಿ ಮಳೆ ಬರೋದಕ್ಕೆ ಆರಂಭಿಸಿತ್ತು. ದಿನ ಕಳೆದಂತೆ ಮಳೆಯ ಅರ್ಭಟ ಹೆಚ್ಚಾಗ ತೊಡಗಿತ್ತು.. ಆದ್ರೆ ಭಾನವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ನೇಪಾಳವೇ ನಲಗುವಂತೆ ಮಾಡಿದ್ದು, ಈ ಕ್ಷಣಕ್ಕು ಕೂಡ ಅಲ್ಲಿ ಮುಂದೇನಾಗುತ್ತೋ ಏನೋ ಅನ್ನುವ ಆತಂಕ ಸೃಷ್ಟಿಸಿದೆ. ಆ ಭಯದಲ್ಲೇ ನೇಪಾಳಿಗರು ಕಾಲ ದೂಡುತ್ತಿದ್ದಾರೆ.

382 ಮನೆಗಳು ಜಲಾವೃತ

ನೇಪಾಳದ ರಾಜಾಧಾನಿ ಕಠ್ಮುಂಡುವಿನಲ್ಲಿ ಸುರಿದ ಮಳೆ ಪ್ರವಾಹವನ್ನ ಸೃಷ್ಠಿಸಿತ್ತು. ಅದೆಷ್ಟೆ ಮಟ್ಟಿಗೆ ಅಂದ್ರೆ ಅಲ್ಲಿನ ಸುಮಾರು 382 ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಹಲವು ವಸತಿ ಪ್ರದೇಶಗಳು ಹಾನಿಗೊಳಗಾಗಿದೆ. ಸುಮಾರು 50 ಕ್ಕೂ ಹೆಚ್ಚು ಮಂದಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ..

ಇನ್ನು ಕಠ್ಮಂಡ್​​ ಮಾತ್ರವಲ್ಲದೇ ನಂಬಲು ಅಸಾಧ್ಯವೆನ್ನುವಂತೆ ಭಾನುವಾರ ಸುರಿದ ಧಾರಾಕಾರ ಮಳೆಗೆ ನೇಪಾಳದ ಸುಮಾರು 100 ಕ್ಕು ಹೆಚ್ಚು ಪ್ರದೇಶಗಳು ಜಲಾವೃತವಾಗಿದೆ. ಅಲ್ಲದೆ ಕಠ್ಮಂಡುವಿನಲ್ಲಿ ಸತತವಾಗಿ ನಾಲ್ಕು ಗಂಟೆ ಸುಮಾರು 105 ಮಿಲಿ ಮೀಟರ್​​​ ಮಳೆಯಾಗಿದೆ. ಈಗಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಕಠ್ಮಂಡೂವಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವು ನದಿಗಳು ತುಂಬಿ ಹರಿಯುತ್ತಿದೆ. ಹೀಗೆ ನದಿಗಳು ತುಂಬಿ ಹರಿದ ಪರಿಣಾಮ ಮನೆ, ಕಟ್ಟಡಗಳೆಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಕಣ್ಮರೆಯಾಗಿದ್ದು ಹಲವು ಕಡೆ ರಕ್ಷಣಾ ಕಾರ್ಯಚರಣೆಗಳು ಮುಂದುವರೆದಿದೆ.

ನೇಪಾಳ ಪೊಲೀಸರು, ಸಶಸ್ತ್ರ ಪಡೆ, ರಕ್ಷಣಾ ಪಡೆ ಸೇರಿದಂತೆ ಸೇನೆಯೂ ಕೂಡ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಇಲ್ಲಿಯವರೆಗೆ ಅಂದ್ರೆ ನಿನ್ನೆ ರಾತ್ರಿಯಿಂದ ಸಂಕಷ್ಟಕ್ಕೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುಮಾರು 138 ಕ್ಕೂ ಅಧಿಕ ಮಂದಿಯನ್ನ ರಕ್ಷಣೆ ಮಾಡಲಾಗಿದೆ. ಇನ್ನು ಹಲವು ಕಡೆ ಸಂಪರ್ಕಕ್ಕೆ ಸಿಗದಂತೆ ಅನೇಕ ಮಂದಿ ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದು ಅವರ ರಕ್ಷಣಾ ಕಾರ್ಯಚರಣೆ ಭರದಿಂದಾ ಸಾಗುತ್ತಿದೆ. ಮನೋಹರ ನದಿ ತೀರ, ಕಡಗಾರಿ, ತೇಕು ಮತ್ತು ಬಾಲ್ಕು ಪ್ರದೇಶಗಳಲ್ಲಿ ಸದ್ಯಕ್ಕೆ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

ನೇಪಾಳದಲ್ಲಿರೋ ಹಲವು ನದಿಗಳು ಇಂದು ಉಕ್ಕಿ ಹರಿಯುತ್ತಿದೆ. ಅದ್ರಲ್ಲು ಕಠ್ಮಂಡ್​​​​ವಿನ ಸಿಂಧೂಪಾಲ್​​​ಚೋಕ್​​​​ನಲ್ಲಿ ಭಾರಿ ಮಳೆಯಿಂದಾಗಿ ಹಲವು ಮನೆಗಳು ಜಲಾವೃತಗೊಂಡ ಪರಿಣಾಮ ಮೂವರು ಭಾರತೀಯರು ಹಾಗು ಮೂವರು ಚೀನಾ ಪ್ರಜೆಗಳು ಕಣ್ಮರೆ ಆಗಿದ್ದಾರೆ ಎಂಬ ಶಂಕೆಯಿದ್ದು ಅವರಿಗಾಗಿ ಹುಡುಕಾಟ ಮುಂದುವರೆದಿದೆ. ಸದ್ಯ 6 ಮಂದಿಗಾಗಿ ರಕ್ಷಣಾ ಕಾರ್ಯಚರಣೆ ಕೂಡ ಸದ್ಯ ಭರದಿಂದ ಸಾಗುತ್ತಿದೆ ಅಂತಾ ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ..

ಈ ಮಧ್ಯೆ ಭೇತಿನಿ ಅನ್ನೋ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ಸುಮಾರು 7 ಮಂದಿ ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ. ಸಿಡಿಲಿನ ಆಘಾತಕ್ಕೆ ಸುಮಾರು 12 ಮನೆಗಳು ಹಾನಿಯಾಗಿದೆ ಎಂದು ನೇಪಾಳದ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿಯನ್ನ ಮಾಡಿದೆ. ಇನ್ನು ಈ ರೀತಿಯ ಹಲವು ಪ್ರಕೃತಿ ವಿಕೋಪಗಳಿಗೆ ನೇಪಾಳ ಇಲ್ಲಿಯರೆಗೂ ಸಾಕಷ್ಟು ಪ್ರಕೃತಿ ವಿಕೋಪಗಳಿಗೆ ಸಾಕ್ಷಿಯಾಗಿದೆ. ಅದನ್ನ ಒಮ್ಮೆ ನೋಡೋದಾದ್ರೆ.

ಪ್ರಪಂಚ ಭೂಪಟದ ಪುಟ್ಟ ದೇಶ ಈ ನೇಪಾಳದಲ್ಲಿ 2015ರ ಭೀಕರ ಭೂಕಂಪವಾಗಿತ್ತು. ಆ ಸಂದರ್ಭದಲ್ಲಿ ಸುಮಾರು 6,300ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಅದಕ್ಕು ದುಪ್ಪಟ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. 2015 ರ ಏಪ್ರಿಲ್ 25ರಂದು ಸಂಭವಿಸಿದ ಭೂಕಂಪ ವಿಶ್ವವನ್ನೇ ನಡುಗಿಸಿತ್ತು. ಇಡೀ ದೇಶವನ್ನೇ ನಾಶ ಮಾಡಿದ ಅಂದಿನ ಭೂಕಂಪ 1832ರಲ್ಲಿ ನಿರ್ಮಾಣಗೊಂಡಿದ್ದ ಕಠ್ಮಂಡುವಿನ ಧರಹರಾ ಗೋಪುರವನ್ನು ನೆಲಕ್ಕಚ್ಚುವಂತೆ ಮಾಡಿತ್ತು..

ಅಂದು ಭೂಕಂಪ ಸಂಭವಿಸಿದ ಬಳಿಕ ಕೊಂಚ ನಿಟ್ಟುಸಿರು ಬಿಡೋದಕ್ಕೆ ಶುರು ಆದ ಮೇಲು ಬರೋಬ್ಬರಿ 46 ಬಾರಿ ಕಂಪನಗಳು ಸಂಭವಿಸಿದೆ. ಆದರೂ ನೇಪಾಳ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿದ್ದ ನೇಪಾಳದಲ್ಲಿ ಕೊರೊನಾ ಕೂಡ ಕೊಂಚ ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು.

ಇದೇ ವರ್ಷ ಮೇಘಸ್ಫೋಟ ಸಂಭವಿಸಿತ್ತು

ಹೌದು.. ಇದೇ ವರ್ಷದ ಜೂನ್ ತಿಂಗಳಲ್ಲಿ ಭಾರಿ ಮಳೆ ಮತ್ತು ಮೇಘಸ್ಫೋಟದ ಹಿನ್ನಲೆಯಲ್ಲಿ ದಿಢೀರ್ ಪ್ರವಾಹ ಉಂಟಾಗಿತ್ತು. ಆಗ ಆ ದುರಂತದಲ್ಲಿ 7 ಮಂದಿ ಸಾವನ್ನಪ್ಪಿ 3 ಭಾರತೀಯರೂ ಸೇರಿ ಹಲವರು ನಾಪತ್ತೆಯಾಗಿದ್ದರು. ನೇಪಾಳದ ಸಿಂಧುಪಾಲಚೋಕ್ ಪ್ರಾಂತ್ಯದಲ್ಲಿ ಪ್ರವಾಹ ಸಂಭವಿಸಿ, ಮೇಲಮ್ಚಿ ನದಿ ಉಕ್ಕಿ ಹರಿದ ಪರಿಣಾಮ ದುರಂತದಲ್ಲಿ ಮೇಲಮ್ಚಿ ಟೌನ್ ನಲ್ಲಿ 200 ಮನೆಗಳು ಪ್ರವಾಹಕ್ಕೆ ಆಹುತಿಯಾಗಿತ್ತು.

ತಿಂಗಳ ಅಂತರದಲ್ಲಿ ಮತ್ತೆ ಮಳೆ, ಪ್ರವಾಹಕ್ಕೆ ತುತ್ತಾಗಿತ್ತು ನೇಪಾಳ

ಇನ್ನು ಜೂನ್​ ತಿಂಗಳಲ್ಲಿ ಮೇಘಸ್ಫೋಟ ಸಂಭವಿಸಿದ ನಂತರದ ತಿಂಗಳಿನಲ್ಲಿ ಮತ್ತೆ ನೇಪಾಳದಲ್ಲಿ ಮಳೆ ಆರ್ಭಟಿಸಿತ್ತು. ನೇಪಾಳದ ನದಿಗಳಾದ ಕಮ್ಲಾ, ಬಾಗ್ಮತಿ, ಗಂಡಕ್​​​ ಮತ್ತು ಕೋಸಿ ನದಿಗಳ ಸುತ್ತಮುತ್ತ ಭಾರಿ ಮಳೆಯಾಗಿ ಪ್ರವಾಹ ಉಂಟಾಗಿ ಹಲವು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಅಲ್ಲದೆ ಅಂದು ಕಾಣಿಸಿಕೊಂಡಿದ್ದ ಕಾರ್ಮೊಡ ನೇಪಾಳಿಗರ ಹಲವು ದಿನಗಳ ಕಾಲ ನಿದ್ದೆ ಗೆಡೆಸಿತ್ತು.
ನೇಪಾಳದಲ್ಲಿ ಇದೇ ವರ್ಷದ ಜೂನ್​ ಜುಲೈ ತಿಂಗಳಲ್ಲಿ ಹಾಗು ಈಗ ಸುರಿಯುತ್ತಿರುವ ಮಳೆ ಸಾಕಷ್ಟು ಹಾನಿಯನ್ನ ಉಂಟು ಮಾಡಿದೆ.

ಆದ್ರೆ ಈ ವರ್ಷದಲ್ಲಿ ಸುರಿದ ಮಳೆ ಪೈಕಿ ಈ ಬಾರಿ ಹೆಚ್ಚು ಹಾನಿಯನ್ನ ಉಂಟು ಮಾಡಿದೆ ಎಂದು ಸದ್ಯಕ್ಕೆ ಅಂದಾಜಿಸಲಾಗಿದೆ. ಆದ್ರೆ ಇದು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇನ್ನು ಕೆಲವು ದಿನಗಳ ಪರಿಸ್ಥಿತಿ ಹೀಗೆ ಇರುತ್ತೆ ಎಂದು ಅಲ್ಲಿನ ಹವಾಮಾನ ತಜ್ಞರು ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ನೇಪಾಳಿಗರಿಗೆ ಮುಂದಿನ ದಿನಗಳಲ್ಲಿ ಅಪಯ ಕಟ್ಟಿಟ್ಟ ಬುತ್ತಿ ಅಂದ್ರೆ ತಪ್ಪಾಗೋದದಿಲ್ಲಾ..

ಪ್ರಕೃತಿ ಮುನಿದರ ಮಾರಿ ಅನ್ನೋ ಮಾತಿನಂತೆ ನೇಪಾಳದಲ್ಲಿ ಪದೇ ಪದೇ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಲೆ ಇದೆ. ಸದ್ಯ ಈ ಬಾರಿ ಹಿಂದೆಂದೂ ಕಾಣದ ಅತ್ಯಂತ ಕೆಟ್ಟ ಮಳೆ ಆಗಿದ್ದು, ನೇಪಾಳವನ್ನ ನಲುಗಿ ಹೋಗುವಂತೆ ಮಹಾಮಳೆ ಮಾಡಿಬಿಟ್ಟಿರೋದಂತು ಸುಳ್ಳಲ್ಲ.

Source: newsfirstlive.com Source link