ಇಸ್ರೇಲ್​​​​ ಜೈಲಿನಿಂದ ಆರು ಉಗ್ರಗ್ರಾಮಿಗಳು ಪರಾರಿಯಾಗಿದ್ದು ಹೇಗೆ ಗೊತ್ತಾ?

ಇಸ್ರೇಲ್​​​​ ಜೈಲಿನಿಂದ ಆರು ಉಗ್ರಗ್ರಾಮಿಗಳು ಪರಾರಿಯಾಗಿದ್ದು ಹೇಗೆ ಗೊತ್ತಾ?

ಇಸ್ರೇಲ್‌ನ ಅತ್ಯಂತ ಬಿಗಿ ಭದ್ರತೆಯ ಜೈಲಿನಿಂದ ಆರು ಜನ ಉಗ್ರಗಾಮಿಗಳು ಪರಾರಿಯಾಗಿದ್ದಾರೆ. ಅವರು ಪರಾರಿಯಾಗಲು ಬಳಸಿರೋ ಮಾರ್ಗ ಯಾವ ಹಾಲಿವುಡ್‌ ಸಿನಿಮಾಗೂ ಕಮ್ಮಿಯಿಲ್ಲ. ಸುರಂಗ ತೋಡಲು ಬಳಸಿರೋ ಆಯುಧ ಕೇಳಿದ್ರೇ ಬೆಚ್ಚಿ ಬೀಡ್ತೀರಿ. ಹಾಲಿವುಡ್‌, ಬಾಲಿವುಡ್‌ ಸಿನಿಮಾಗಳಲ್ಲಿ ಜೈಲಿನಲ್ಲಿರೋ ಖೈದಿಗಳು ಎಸ್ಕೇಪ್‌ ಆಗಲು ನಾನಾ ಮಾರ್ಗಗಳನ್ನು ಬಳಸುವುದನ್ನು ನೋಡಿದ್ದೇವೆ. ಅದರಲ್ಲಿ ಜೈಲಿನ ಕಂಬಿ ಮುರಿದು ಪರಾರಿಯಾಗುವುದು, ಜೈಲಿನ ಅಧಿಕಾರಿಗಳಿಗೆ ಹೊಡೆದು ಪರಾರಿಯಾಗುವುದು, ಜೈಲಿನ ಕಾಂಪೌಂಡ್‌ ಹಾರಿ ಪರಾರಿಯಾಗುವುದು, ಗೋಡೆ ಕೊರೆದು ಪರಾರಿಯಾಗುವುದು. ಇಂತಹ ಹತ್ತಾರು ತಂತ್ರಗಳನ್ನು ನೋಡಿದ್ದೇವೆ. ಆದ್ರೆ, ಹಾಲಿವುಡ್‌ ಸಿನಿಮಾವನ್ನು ಮೀರಿಸುವ ರೀತಿಯಲ್ಲಿ ಇಸ್ರೇಲ್‌ ಜೈಲಿನಲ್ಲಿರೋ ಖೈದಿಗಳು ಪರಾರಿಯಾಗಿದ್ದಾರೆ. ಅವರು ಪರಾರಿ ಆಗಲು ಬಳಸಿರೋ ಮಾರ್ಗ ನೋಡಿದ್ರೆ ಎಂಥವರಾದ್ರೂ ಬೆಚ್ಚಿ ಬೀಳ್ತಾರೆ. ಹೀಗೂ ಸಾಧ್ಯನಾ ಅನಿಸಿ ಬಿಡುತ್ತೆ. ಅಷ್ಟಕ್ಕೂ ಇಸ್ರೇಲ್‌ನ ಗಿಲ್ಬೋವಾ ಜೈಲಿನಲ್ಲಿ ಆಗಿದ್ದೇನು ಅನ್ನೋದನ್ನು ಹೇಳ್ತೀವಿ, ಅದಕ್ಕೂ ಮುನ್ನ ಈ ಸುರಂಗವನ್ನು ಒಮ್ಮೆ ನೋಡಿಕೊಂಡು ಬಿಡಿ.

ಈ ವಿಡಿಯೋವನ್ನು ನೋಡಿದ್ರೆ, ಹೆಗ್ಗಣವೊಂದು ಸುರಂಗ ಕೊರೆದಂತೆ ಕಾಣಿಸುತ್ತಿದೆ ಅಲ್ವ? ಅದನ್ನು ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಒಮ್ಮೆ ಹೆಗ್ಗಣ್ಣ ಇಷ್ಟು ದೊಡ್ಡ ಸುರಂಗ ತೋಡಿದ್ರೆ, ಇಂದು ಪೊಲೀಸ್‌ ಉನ್ನತ ಅಧಿಕಾರಿಗಳು ಬಂದು ಪರಿಶೀಲಿಸುವ ಅಗತ್ಯವೇ ಬೀಳುತ್ತಿರಲಿಲ್ಲ. ಯಾವುದಾದ್ರೂ ಗಾವಡಿ ಕೆಲಸಗಾರನನ್ನು ಕರೆಯಿಸಿ ಸುರಂಗ ಮುಚ್ಚಿಸೋ ಕೆಲಸ ಮಾಡ್ತಾ ಇದ್ರು. ಆದ್ರೆ, ಇಲ್ಲಿ ಆಗಿದ್ದು ಏನು ಗೊತ್ತಾ?

ಇಸ್ರೇಲ್‌ ಜೈಲಿನಲ್ಲಿದ್ದ 6 ಉಗ್ರಗಾಮಿಗಳು ಪರಾರಿ

ಅದು ಇಸ್ರೇನ್‌ನ ಗಿಲ್ಬೋವಾ ಜೈಲ್‌. ಇಸ್ರೇನ್‌ನಲ್ಲಿಯೇ ಅತ್ಯಂತ ಬಿಗಿ ಭದ್ರತೆಹೊಂದಿರೋ ಜೈಲಿನಲ್ಲಿ ಇದು ಒಂದಾಗಿದೆ. ಇಲ್ಲಿ 360 ಖೈದಿಗಳು ಇದ್ದಾರೆ. ಇಸ್ರೇನ್‌ ನಲ್ಲಿ ಭಯೋತ್ಪಾದಕ ಚಟುವಟಿಕೆಗೆ ಕಾರಣವಾಗಿದ್ದ ಪ್ಯಾಲೇಸ್ಟೇನಿ ಉಗ್ರಗಾಮಿಗಳು ಈ ಜೈಲಿನಲ್ಲಿ ಇದ್ರು. ಆದ್ರೆ, ಹೆಚ್ಚಿನ ಭದ್ರತೆ ಇರೋದ್ರಿಂದ ಇಲ್ಲಿನ ಜೈಲಾಧಿಕಾರಿಗಳು ನಿಶ್ಚಿಂತೆಯಲ್ಲಿಯೇ ಇದ್ರು. ಆದ್ರೆ, ಸೋಮವಾರ ಜೈಲಾಧಿಕಾರಿಗಳಿಗೆ ಭರ್ಜರಿ ಆಘಾತ ಕಾದಿತ್ತು. ಯಾಕಂದ್ರೆ, ಜೈಲಿನಲ್ಲಿದ್ದ 6 ಜನ ಖೈದಿಗಳು ಪರಾರಿಯಾಗಿ ಬಿಟ್ಟಿದ್ರು. ಅವರೇನು ಸಾಮಾನ್ಯ ಖೈದಿಗಳು ಆಗಿರಲಿಲ್ಲ. ಪ್ಯಾಲೇಸ್ಟೇನಿ ಉಗ್ರರು ಆಗಿದ್ರು. ಅನೇಕ ಭಯೋತ್ಪಾದಕ ಚಟುವಟಿಯೆಲ್ಲಿ ಭಾಗಿಯಾಗಿದ್ರು. ಆದ್ರೆ, ಅವರು ಪರಾರಿಯಾಗಿರೋ ಮಾರ್ಗ ಮಾತ್ರ ಹಾಲಿವುಡ್‌ ಸಿನಿಮಾವನ್ನೂ ಮೀರಿಸುವಂತೆ ಇತ್ತು.

ಜೈಲಿನಿಂದಲೇ ಸುರಂಗ ತೋಡಿ ಪರಾರಿಯಾದ್ರು

ಜೈಲಿನಿಂದ ಪರಾರಿಯಾಗಿರೋ 6 ಜನ ಖೈದಿಗಳಲ್ಲಿ ಆರು ಜನವೂ ಪ್ಯಾಲೇಸ್ಟೇನಿ ಉಗ್ರರಾಗಿದ್ದಾರೆ. ಇವರನ್ನು ಜೈಲಿನ ಒಂದೇ ಕೊಟ್ಟಡಿಯಲ್ಲಿ ಹಾಕಲಾಗಿತ್ತು. ಎಲ್ಲಾ ಖೈದಿಗಳಂತೆ ಯಾವುದೇ ಸಂದೇಹ ಬರದಂತೆ ಇದ್ರು. ಊಟದ ಸಮಯಕ್ಕೆ ಊಟ, ಉಪಾಹಾರ ಸಮಯಕ್ಕೆ ಉಪಹಾರಕ್ಕೆ ಬರ್ತಾ ಇದ್ರು. ಹೀಗಾಗಿ ಇವರ ಮೇಲೆ ಯಾವುದೇ ಜೈಲಾಧಿಕಾರಿಗಳಿಗೆ ಸಂದೇಹ ಇರಲಿಲ್ಲ. ಆದ್ರೆ, ಇವರು ಜೈಲಿನ ಕೊಣೆಯ ಒಳಗೆ ಮಾಡ್ತಾ ಇರೋದೇ ಬೇರೆಯಾಗಿತ್ತು. ಆರು ಜನ ಜೈಲಿನಿಂದ ಪರಾರಿಯಾಗಲು ಪ್ಲಾನ್‌ ರೂಪಿಸಿದ್ರು. ಅದೇ ಪ್ಲಾನ್‌ ಅಂತೆಯೇ ಸುರಂಗ ಕೊರೆಯಲು ಆರಂಭಿಸುತ್ತಾರೆ. ಅದೆಷ್ಟು ದಿನ ಪ್ಲಾನ್‌ ಆಗಿತ್ತೋ ಏನು ಅಂತೂ ಸೋಮವಾರ ಆ ಪ್ಲಾನ್‌ ಸಕ್ಸಸ್‌ ಆಗಿ ಬಿಟ್ಟಿದೆ. ಅಂದ್ರೆ, ಸುರಂಗ ಕೊರೆದು 6 ಜನ ಖೈದಿಗಳು ಪರಾರಿಯಾಗಿ ಬಿಟ್ಟಿದ್ದಾರೆ. ಈ ಸುರಂಗ ಮಾರ್ಗ ಕೊರೆಯಲು ಬಳಸಿದ ಆಯುಧ ಯಾವುದು ಅಂತ ಕೇಳಿದ್ರೆ ಆಶ್ಚರ್ಯಗೊಂಡು ಬಿಡ್ತೀರಿ.

ಸುರಂಗ ಕೊರೆಯಲು ಖೈದಿಗಳು ಬಳಸಿದ ಆಯುಧ ಯಾವುದು?

ಜೈಲಿನಲ್ಲಿ ಖೈದಿಗಳಿಗೆ ಯಾವುದೇ ಆಯುಧ ಸಿಗದಂತೆ ನೋಡಿಕೊಳ್ಳಲಾಗುತ್ತೆ. ಯಾಕಂದ್ರೆ, ಆಯುಧವೇನಾದ್ರೂ ಖೈದಿಗಳಿಗೆ ಸಿಕ್ಕರೇ ಅದೇ ಆಯುಧ ಬಳಸಿ ಪರಾರಿಯಾಲು ಯತ್ನಿಸುತ್ತಾರೆ. ಹೊಡೆದಾಟಕ್ಕೂ ಬಳಸಿಕೊಳ್ಳುತ್ತಾರೆ, ಅಷ್ಟೇ ಅಲ್ಲ, ಅದೇ ಆಯುಧದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹೀಗಾಗಿಯೇ ಜೈಲಾಧಿಕಾರಿಗಳು ಯಾವುದೇ ಕಾರಣಕ್ಕೂ ಆಯುಧಗಳು ಖೈದಿಗಳ ಕೈಗೆ ಸಿಗದಂತೆ ನೋಡಿಕೊಳ್ಳುತ್ತಾರೆ. ಹಾಗಾದ್ರೆ, ಈ 6 ಜನ ಖೈದಿಗಳು ಸುರಂಗ ತೋಡಲು ಬಳಸಿದ ಆಯುಧ ಕೇಳಿದ್ರೆ ಎಂಥವರಾದ್ರೂ ಅಚ್ಚರಿಗೊಂಡು ಬಿಡ್ತಾರೆ. ಹೌದು, ಇವರು ಬಳಸಿರೋ ಆಯುದ್ಧ ತುಕ್ಕು ಹಿಡಿದ ಚಮಚ, ಅದೇ ಚಮಚದಲ್ಲಿಯೇ ಸುರಂಗ ತೋಡಿ ಪರಾರಿಯಾಗಿದ್ದಾರೆ.

ಸಿಂಕ್‌ ಹಿಂಭಾಗದಲ್ಲಿಯೇ ಸುರಂಗ ಆರಂಭ
ಜೈಲಿನ ಹೊರಗೆ ಸುರಂಗ ಪಾಸಿಂಗ್‌

ಪರಾರಿಯಾದವರೇನು ಸಾಮಾನ್ಯ ಖೈದಿಗಳಲ್ಲ. ಪರಾರಿಯಾಗುವ ಮುನ್ನ ಹತ್ತಾರು ಬಾರಿ ಯೋಚಿಸಿದ್ದಾರೆ. ಎಲ್ಲಿ ಸುರಂಗ ತೋಡಬೇಕು, ಹೇಗೆ ತೋಡಬೇಕು, ಎಲ್ಲಿ ಸುರಂಗ ತೋಡಿದರೆ ಜೈಲಾಧಿಕಾರಿಗಳಿಗೆ ಕಾಣಿಸುವುದಿಲ್ಲ ಅನ್ನೋದನೆಲ್ಲಾ ಪಕ್ಕಾ ಪ್ಲಾನ್‌ ಮಾಡಿಕೊಂಡಿದ್ದಾರೆ. ಆ ಪ್ಲಾನ್‌ ಅಂತಯೇ ಕೊಣೆಗೆ ಅಳವಡಿಸಿಕೋ ಸಿಂಕ್‌ ಬಳಿ ಸುರಂಗ ತೋಡಲು ಆರಂಭಿಸಿದ್ದಾರೆ. ಯಾಕಂದ್ರೆ ಅಲ್ಲಿ ಜೈಲಿನ ಅಧಿಕಾರಿಗಳಿಗೆ ಕಾಣಿಸುವುದಿಲ್ಲ ಅನ್ನೋದು ಖೈದಿಗಳಿಗೆ ಪಕ್ಕಾ ಆಗಿತ್ತು. ಅದೇನು ಒಂದೆರಡು ದಿನದ ಕೆಲಸವೂ ಅಲ್ಲ. ಯಾವುದಾದ್ರೂ ದೊಡ್ಡ ಆಯುಧ ಸಿಕ್ಕರೇ ಬೇಗ ಸುರಂಗ ತೋಡಿ ಪರಾರಿಯಾಗಿ ಬಿಡ್ತಾ ಇದ್ರು. ಅದ್ರೆ, ಅವರಿಗೆ ಸಿಕ್ಕಿರೋ ಆಯುಧ ತುಕ್ಕು ಹಿಡಿದ ಚಮಚ ಆಗಿತ್ತು. ಅದರಿಂದಲೇ ಸುರಂಗ ತೋಡಿ ಜೈಲಿನ ಹೊರಗೆ ಸುರಂಗ ಪಾಸ್‌ ಆಗುವಂತೆ ಮಾಡಿದ್ದಾರೆ. ಅಂತಿವಾಗಿ ಸೋಮವಾರ ಇದೇ ಸುರಂಗದ ಮೂಲಕ ಪರಾರಿಯಾಗಿದ್ದಾರೆ.

ಖೈದಿಗಳ ಬಗ್ಗೆ ಜೈಲಾಧಿಕಾರಿಗಳು ಹೇಳಿದ್ದೇನು?

ಜೈಲಿನಲ್ಲಿದ್ದ ಖೈದಿಗಳು ಅಚ್ಚರಿಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಇಸ್ರೇಲ್​ನ ಸಾರ್ವಜನಿಕ ಭದ್ರತಾ ಅಧಿಕಾರಿ ಒಮೆರ್​ ಬರ್ಲೇವ್​ ಮಾತನಾಡಿ, ಖೈದಿಗಳು ಪರಾರಿಯಾಗಿರುವ ವಿಷಯ ಸೋಮವಾರ ಮುಂಜಾನೆ 3 ಗಂಟೆ ಬೆಳಕಿಗೆ ಬಂದಿದೆ. ಪಶ್ಚಿಮ ಭಾಗದತ್ತ ಓಡಿಹೋಗಿದ್ದಾರೆ ಎಂಬ ಸುಳಿವು ಸಿಕ್ಕಿದೆ. ವಿವಿಧ ಆಯಾಮದಲ್ಲಿ ತನಿಖೆ ಸಾಗುತ್ತಿದೆ. ಅದೇನೇ ಇದ್ದರೂ ಖೈದಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖೈದಿಗಳಿಗಾಗಿ ತೀವ್ರ ಹುಡುಕಾಟ

ಅತ್ಯಂತ ಬಿಗಿ ಭದ್ರತೆಯ ಜೈಲಿಲಿಂದಲೇ ಖೈದಿಗಳು ಪರಾರಿಯಾಗಿರುವುದು ಅಚ್ಚರಿ ಮೂಡಿಸಿದೆ. ಹೀಗಾಗಿಯೇ ಖೈದಿಗಳಿಗೆ ಪೊಲೀಸರಿಂದ ತೀವ್ರ ಹುಡುಕಾಟ ಆರಂಭವಾಗಿದೆ. ಅದೇ ರೀತಿ ಖೈದಿಗಳು ಪರಾರಿಯಾಗಲು ಬೇರೆ ಯಾರಾದ್ರೂ ಸಹಾಯ ಮಾಡಿದ್ದಾರಾ ಅನ್ನುವ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. ಇಂತಹ ಘಟನೆ ಇಸ್ರೇಲ್‌ನಲ್ಲಿ ನಡೆದಿರುವುದು ಇದೇ ಪ್ರಥಮ ಎನ್ನಲಾಗುತ್ತಿದೆ.

ಅತ್ಯಂತ ಬಿಗಿ ಭದ್ರತೆ ಇದ್ರೂ ಜೈಲಿನಿಂದ ಪಕ್ಕಾ ಹಾಲಿವುಡ್‌ ಸ್ಟೈಲ್‌ನಲ್ಲಿ ಖೈದಿಗಳು ಪರಾರಿಯಾಗಿದ್ದಾರೆ. ಆದ್ರೆ, ಒಂದು ತುಕ್ಕು ಹಿಡಿದ ಚಮಚದಿಂದ ಅಷ್ಟೊಂದು ಸುರಂಗ ತೋಡಲು ಸಾಧ್ಯನಾ ಅನ್ನೋ ಪ್ರಶ್ನೆಯನ್ನು ಹುಟ್ಟುಹಾಕಿದೆ. ಒಟ್ಟಾರೆ, ತನಿಖೆಯಿಂದ ಮಾತ್ರ ಖೈದಿಗಳು ಹೇಗೆ ಪರಾರಿಯಾದಿದ್ದಾರೆ ಅನ್ನೋದು ತಿಳಿದುಬರಲು ಸಾಧ್ಯ.

Source: newsfirstlive.com Source link