ಕಲಬುರಗಿಯಲ್ಲಿ ಕಾಂಗ್ರೆಸ್​​​ಗೆ ಧರ್ಮ ಸಂಕಟ! ಖರ್ಗೆಗೆ ಸ್ವಾಭಿಮಾನ, ಸಿದ್ದರಾಮಯ್ಯಗೆ ಆತ್ಮಾಭಿಮಾನ.. ದಳವೇ ಕಿಂಗ್​​!

ಕಲಬುರಗಿಯಲ್ಲಿ ಕಾಂಗ್ರೆಸ್​​​ಗೆ ಧರ್ಮ ಸಂಕಟ! ಖರ್ಗೆಗೆ ಸ್ವಾಭಿಮಾನ, ಸಿದ್ದರಾಮಯ್ಯಗೆ ಆತ್ಮಾಭಿಮಾನ.. ದಳವೇ ಕಿಂಗ್​​!

ಕಲಬುರಗಿ: ವಿಧಾನಸಭೆಯಲ್ಲೂ ಈ ಹಿಂದೆ ಕಿಂಗ್ ಮೇಕರ್ ಆಗಿದ್ದ ದಳಪತಿಗಳು, ಅಸ್ಥಿತ್ವವೇ ಇಲ್ಲದ ಕಲ್ಯಾಣ..,,ಕರ್ನಾಟಕದಲ್ಲಿ ಅತಂತ್ರವನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ. ಖರ್ಗೆಗೆ ಸ್ವಾಭಿಮಾನವಾದ್ರೆ ಸಿದ್ದರಾಮಯ್ಯಗೆ ಆತ್ಮಾಭಿಮಾನದ ಧಕ್ಕೆ. ಇವೆರಡರ ನಡುವೆ ಕಾಂಗ್ರೆಸ್ ಇಕ್ಕಟ್ಟಿನಲ್ಲಿ ಸಿಲುಕಿದೆ.

ಕಾಂಗ್ರೆಸ್​​ ಪಾಲಿಗೆ ಕಲಬುರಗಿ ಒಂದೇ ಆಶಾದಾಯಕ. ಫಲಿತಾಂಶ ಅತಂತ್ರ ಬಂದು ಹಸ್ತದ ಮಾನ ಕಾಪಾಡಿದೆ. ಇದೇ ಮಾನ ದಳಪತಿಗಳಿಗೆ ಹಿಗ್ಗು ತಂದಿದೆ. ಮೈಸೂರಲ್ಲಿ ಮೈತ್ರಿ ಚಿವುಟಿದ ಸಿದ್ದುಗೆ ಖೆಡ್ಡಾ ತೋಡ್ತಿದೆ. ಕಲಬುರಗಿಯಲ್ಲಿ ಕಮಲ ಅರಳದಂತೆ ನೋಡಿಕೊಳ್ಳಲು ಸಿದ್ದು ಆತ್ಮಾಭಿಮಾನಕ್ಕೆ ಧಕ್ಕೆ ಆದ್ರೂ ಪರವಾಗಿಲ್ಲ ಅಂತ ಖರ್ಗೆ ಪ್ಲಾನ್​​​ ಮಾಡಿದ್ದಾರೆ.

blank

ಕಲಬುರಗಿ ಪಾಲಿಕೆಯ ಅತಂತ್ರ ಫಲಿತಾಂಶದಲ್ಲಿ ದಳವೇ ಕಿಂಗ್​​​​

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ. ಮೈಸೂರಿನಲ್ಲಾದ ಮೈತ್ರಿ ರಗಳೆ ಕಲಬುರಗಿಯಲ್ಲೂ ರಿಪೀಟ್​​ ಆಗುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ. ಸದ್ಯ ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್​ನ ವಿಶ್ವಾಸ ಗಳಿಸೋಕೆ ಕಾಂಗ್ರೆಸ್, ಬಿಜೆಪಿ ಕಸರತ್ತು ನಡೆಸ್ತಿವೆ.

ಈ ಕುರಿತು ಮಾತನಾಡಿರುವ ಬಸವರಾಜ್ ಬೊಮ್ಮಾಯಿ ಅವರು, ಬಿಜೆಪಿ ಹಾಗೂ ಜೆಡಿಎಸ್​​ ಮೈತ್ರಿ ಬಗ್ಗೆ ಇನ್ನು ಚರ್ಚೆ ಆಗಿಲ್ಲ. ಆದರೆ ಎಲ್ಲರೂ ಚರ್ಚೆ ಮಾಡಿ ಒಟ್ಟಿಗೆ ಹೋಗೋಣ ಅಂತಾ ಹೇಳಿದ್ದೇನೆ. ಒಟ್ಟಾಗಿ ಹೋಗೋಣ ಅಂತಾ ಅವರು ಹೇಳಿದ್ದಾರೆ ಎಂದರು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್​​ಡಿಡಿ.. ಸಿದ್ದರಾಮಯ್ಯ. ಡಿಕೆ ಶಿವಕುಮಾರ್ ಹಾಗೂ ಇತ್ತ ಬಿಜೆಪಿ ಅವರು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದ್ದೇನೆ. ಸಂಪರ್ಕಿಸಲಿ ನೋಡೋಣ ಎಂದಿದ್ದಾರೆ.

ಇನ್ನು ಕಲಬುರಗಿ ಮಲ್ಲಿಕಾರ್ಜುನ ಖರ್ಗೆ ಅವರ ತವರಾಗಿದ್ದು, ತವರಿನಲ್ಲಿ ಕಮಲ ಅರಳದಂತೆ ನೋಡಿಕೊಳ್ಳಲು ಖರ್ಗೆ ಕೂಡ ದಾಳ ಉರುಳಿಸಿದ್ದಾರೆ.

blank

ಮಲ್ಲಿಕಾರ್ಜುನ ಖರ್ಗೆ ಮನ‘ದಾಳ’!

3 ಪಾಲಿಕೆ ಪೈಕಿ ಕಲಬುರಗಿಯಲ್ಲಿ ಗದ್ದುಗೆ ಹಿಡಿಯುವ ಅವಕಾಶ ಕಾಂಗ್ರೆಸ್​​​ಗೆ ಇದ್ದು, ಭದ್ರ ಕೋಟೆಯನ್ನ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಭದ್ರ ಕೋಟೆ ಕಲಬುರಗಿ ರಕ್ಷಣೆಗಾಗಿ ದಳದ ಜೊತೆ ಕೈ ಮೈತ್ರಿ ಸಾಧ್ಯತೆ ಹೆಚ್ಚಾಗಿದೆ. ಅದ್ರಂತೆ ತಮ್ಮ ತವರಲ್ಲಿ ಕಮಲ ಅರಳದಂತೆ ತಡೆಯಲು ಖರ್ಗೆ ಪ್ಲಾನ್ ಮಾಡಿದ್ದು, ಮೈತ್ರಿ ಮಾಡಿಕೊಳ್ಳಲು ಗೌಡರ ಜೊತೆ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಡೆಸಿದ್ದಾರೆ. ದಳಪತಿಗಳ ಜೊತೆ ವಿಶ್ವಾಸ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಇದ್ರಲ್ಲಿ ಸಕ್ಸಸ್ ಆಗಲೂಬಹುದು.

ಇತ್ತ ಮಲ್ಲಿಕಾರ್ಜುನ ಖರ್ಗೆ ತವರಿನ ಅಭಿಮಾನದಲ್ಲಿ ಜೆಡಿಎಸ್​ ಜೊತೆ ಮೈತ್ರಿಗೆ ಮುಂದಾಗಿರೋದು ಅತ್ತ ಸಿದ್ದರಾಮಯ್ಯಗೆ ಮೈಸೂರಿನಲ್ಲಾದ ಬೆಳವಣಿಗೆಯಿಂದ ಆತ್ಮಾಭಿಮಾನದ ಪ್ರಶ್ನೆಗೆ ಕಾರಣವಾಗಿದೆ.

blank

ಸಿದ್ದರಾಮಯ್ಯಗೆ ಮೈತ್ರಿ ಸಂಕಟ!

ಈ ಹಿಂದೆ ಮೈಸೂರು ಮೇಯರ್ ಎಲೆಕ್ಷನ್​ನಲ್ಲಿ ಸಿದ್ದರಾಮಯ್ಯಗೆ ಮುಖಭಂಗವಾಗಿದೆ. ಕಳೆದ ಸಲ ಮೇಯರ್​​​​ ಚುನಾವಣೆಯಲ್ಲಿ ಜೆಡಿಎಸ್​ ಮೈತ್ರಿ ಕಡಿದುಕೊಂಡಿದ್ದರಿಂದ ದಳ ಜೊತೆ ಮೈತ್ರಿ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಸಾಧ್ಯವಿಲ್ಲ ಅಂತ ಸಂದೇಶ ನೀಡಿದ್ದಾರೆ. ಆದ್ರೆ ಈಗ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ಜೊತೆ ಮೈತ್ರಿಗೆ ಮುಂದಾದ್ರೆ ಸಿದ್ದರಾಮಯ್ಯಗೆ ಮುಜುಗರಕ್ಕೊಳಗಾಗಬೇಕಾಗುತ್ತದೆ. ಅತ್ತ ಬಿಜೆಪಿ ಇತ್ತ ಕಾಂಗ್ರೆಸ್​​​​ನ ಅಭಿಮಾನ ಆತ್ಮಾಭಿಮಾನದ ಮೈತ್ರಿ ಮಂತ್ರದ ನಡುವೆ ದಳಪತಿಗಳ ನಡೆ ಕುತೂಹಲ ಮೂಡಿಸಿದೆ.

ದಳಪತಿಗಳ ಸ್ಕೆಚ್​​!

ಸದ್ಯ ಕಿಂಗ್​​ ಮೇಕರ್​​ ಆಗಿರುವ ದಳಪತಿಗಳು ಸಿದ್ದರಾಮಯ್ಯಗೆ ಠಕ್ಕರ್ ಕೊಡಲು ಖರ್ಗೆ ಕೈ ಹಿಡಿಯಬಹುದು. ಸಿದ್ದರಾಮಯ್ಯ ಹೊರತು, ಉಳಿದ ನಾಯಕರ ಜೊತೆ ಮೈತ್ರಿಯ ಸಂದೇಶ ಸಾರಬಹುದು. ಹಾಗಾದಲ್ಲಿ ಕಲ್ಯಾಣ ಕರ್ನಾಟಕದ ಪಾಲಿಕೆಯಲ್ಲಿ ಪಾಲುದಾರಿಕೆ ಸಿಗಲಿದೆ. ಪಕ್ಷದ ಭವಿಷ್ಯ ಮತ್ತು ಸಂಘಟನೆ ದೃಷ್ಟಿಯಿಂದ ಮೈತ್ರಿ ಮುಖ್ಯವಾಗುವ ಜೊತೆಗೆ ಮೈಸೂರಲ್ಲಿ ತಪ್ಪಿದ್ರೂ ಕಲಬುರಗಿಯಲ್ಲಿ ಅಧಿಕಾರ ಹಿಡಿದ ತೃಪ್ತಿ ಸಿಗಲಿದೆ. ಇನ್ನು ಇತ್ತ ಬಿಜೆಪಿ ಜೊತೆ ಹೋದರೆ ಅಲ್ಪಸಂಖ್ಯಾತ ಮತ ಕೈತಪ್ಪಬಹುದು ಎಂಬ ಆತಂಕ ದಳಪತಿಗಳಿಗಿದೆ. ಆದ್ರೆ ಬಿಜೆಪಿ ಜೊತೆ ಮೈತ್ರಿ ಆದ್ರೆ ಸರ್ಕಾರದಿಂದ ಅನುದಾನ ಸಿಗಲಿದೆ ಅನ್ನೋ ಲೆಕ್ಕಾಚಾರ ಕೂಡ ಜೆಡಿಎಸ್​ ಹಾಕುತ್ತಿದೆ.

ಒಟ್ಟಿನಲ್ಲಿ ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ, ತಮ್ಮ ಜೊತೆ ಜೆಡಿಎಸ್ ಮೈತ್ರಿ ಅಂತಿದ್ರೆ, ಇತ್ತ ಕಾಂಗ್ರೆಸ್​, ನಮ್ಮ ಜೊತೆ ಜೆಡಿಎಸ್​ ಮೈತ್ರಿ ಅಂತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ನಾಲ್ವರು ನೂತನ ಪಾಲಿಕೆ ಸದಸ್ಯರನ್ನು ಉಪಹಾರಕ್ಕೆ ಬೆಂಗಳೂರಿಗೆ ಆಹ್ವಾನಿಸಿದ್ದಾರೆ. ಸದ್ಯ ಕಿಂಗ್ ಮೇಕರ್ ಆಗಿರುವ ಜೆಡಿಎಸ್​​​​​​​​ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಬರಹ; ಹರೀಶ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​

Source: newsfirstlive.com Source link