‘ಬೆಳಗಾವಿಯಲ್ಲಿ MES ಸೋಲಿನಿಂದ ಮರಾಠಿಗರಿಗೆ ಅವಮಾನ’ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡಪ್​

01. ಕಾರ್ಮಿಕ ಇಲಾಖೆ ಕೇಂದ್ರ ಕಚೇರಿ ಮೇಲೆ ಎಸಿಬಿ ರೇಡ್

ಮಾಮೂಲು ಸಂಗ್ರಹ ಆರೋಪದ ಮೇಲೆ ಬೆಂಗಳೂರಿನ ಕಾರ್ಮಿಕ ಭವನದಲ್ಲಿರುವ 8 ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು. ಲೇಬರ್​ ಇನ್​ಸ್ಪೆಕ್ಟರ್​ಗಳು, ಕಾರ್ಮಿಕರ ಪಿಎಫ್, ಗ್ರ್ಯಾಚ್ಯುವಿಟಿ ಸೇರಿದಂತೆ ನಾನಾ‌ ಸೌಲಭ್ಯದ ಬಗ್ಗೆ ಸ್ಪಾಟ್ ವಿಸಿಟ್ ಮಾಡಿದೇ ಜೇಬಿಗೆ ಹಣ ಇಳಿಸಿಕೊಳ್ತಿದ್ರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಡಿವೈಎಸ್​ಪಿ. ಪ್ರತಾಪ್ ರೆಡ್ಡಿ ಹಾಗೂ ಟೀಮ್​ ಡೈರಿ ಸರ್ಕಲ್​ನಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ದಾಳಿ ನಡೆಸಿ ರೆಡ್​ ಆ್ಯಂಡ್​ ಆಗಿ ಲೇಬರ್ ಇನ್ಸ್​ಪೆಕ್ಟರ್​​ಗಳನ್ನ ಹಿಡಿದ್ರು. ದಾಳಿಯಲ್ಲಿ 8 ಮಂದಿ ಇನ್ಸ್​ಪೆಕ್ಟರ್ ಸೇರಿ 30 ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ರು.

02 . ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ

‘ಬೆಳಗಾವಿಯಲ್ಲಿ MES ಸೋಲಿನಿಂದ ಮರಾಠಿಗರಿಗೆ ಅವಮಾನ’ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡಪ್​

ದಿವಂಗತ ನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿರು ದಾಳಿ ಮಾಡಿದ್ದಾರೆ. ರಾತ್ರಿ 9 ಗಂಟೆಗೆ ಬುಲೆಟ್​ ಪ್ರಕಾಶ್​ ಮಗ ರಕ್ಷಕ್​ ಜಿಮ್ ಮುಗಿಸಿ ಮನೆಗೆ ವಾಪಾಸ್​ ಆಗ್ತಿದ್ದಾಗ ಹೆಬ್ಬಾಳ ಫ್ಲೈ ಓವರ್​ ಬಳಿ ಮಂಗಳ ಮುಖಿಯರು ದಾಳಿ ನಡೆಸಿದ್ದಾರೆ. ಅವರ ಬ್ಯಾಗ್​ ಇಡಿದು ಎಳೆದಾಡಿದ ಕಾರಣ ರಕ್ಷಕ್ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ. ಇವರಿಂದ ತಪ್ಪಿಸಿಕೊಳ್ಳಲು ಗಾಡಿಯನ್ನು ಫ್ಲೈ ಓವರ್​ ಮೇಲೆ ಬಿಟ್ಟಿದ್ದಾರೆ. ಇನ್ನು ಘಟನೆಯಿಂದ ರಕ್ಷಕ್​ ಕಾಲಿಗೆ ಗಾಯಗಳಾಗಿದ್ದು, ಗಾಡಿ ಕೂಡ ಡ್ಯಾಮೇಜ್​ ಆಗಿದೆ.

03. ಅಗ್ಗ ದರದಲ್ಲಿ ವೆರೈಟಿ ವೆರೈಟಿ ಮೀನುಗಳು ಲಭ್ಯ

ಮೀನೂಟ ಪ್ರಿಯರಿಗೆ ಇದು ಸಂತಸದ ಸುದ್ದಿ. ಇಷ್ಟು ದಿನ ಗಗನಕ್ಕೆರಿದ್ದ ತಾಜಾ ಮೀನಿನ ದರದಲ್ಲಿ ಇಳಿಕೆಯಾಗಿದೆ. ಉಡುಪಿಯಲ್ಲಿ ಸದ್ಯ ಮತ್ಸ್ಯ ಬೇಟೆ ಭರ್ಜರಿಯಾಗೇ ನಡೆಯುತ್ತಿದ್ದು, ಫಿಶಿಂಗ್ ಚೆನ್ನಾಗಿ ನಡೆದು ಕಡಲ ಕುವರರು ಸಂತಸಗೊಂಡಿದ್ದಾರೆ. ರಾಶಿ ರಾಶಿ ಮೀನು ಹೆಚ್ಚಾಗಿ ಸಿಗುವ ಕಾರಣ ದರದಲ್ಲಿ ಇಳಿಮುಖವಾಗಿದೆ. ಇನ್ನೊಂದೆಡೆ ಶ್ರಾವಣ ಮಾಸ ಅಂತ ಕೆಲವರು ಮಾಂಸ ಸೇವನೆ ಮಾಡೋದಿಲ್ಲ, ಅಲ್ಲದೇ ಕೇರಳಕ್ಕೆ ಸದ್ಯ ಮೀನು ಸಾಗಾಟ ಆಗ್ತಾ ಇಲ್ಲ, ಹೀಗಾಗಿ ಸಹಜವಾಗಿಯೇ ಮೀನಿನ ದರದಲ್ಲಿ ಇಳಿಕೆಯಾಗಿದೆ.

04. ‘ಎಂಇಎಸ್​ ಸೋಲಿನಿಂದ ಮರಾಠಿಗರಿಗೆ ಅವಮಾನ’

blank

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್​ ಸೋತಿರುವ ಬಗ್ಗೆ ಶಿವಸೇನಾ ಮುಖಂಡ ಹಾಗೂ ಸಂಸದ ಸಂಜಯ್​ ರಾವತ್​ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್​ ಸೋತಿರೋದು ದುರಾದೃಷ್ಟಕರ. ಜೊತೆಗೆ ಇದು ಮರಾಠಿಗರಿಗೆ ಮಾಡಿರುವ ಅವಮಾನ ಅಂತ​ ರಾವತ್​ ಆಕ್ರೋಶ ವ್ಯಕ್ತಪಡಿಸಿದ್ರು. ಕರ್ನಾಟಕ ಸರ್ಕಾರ ಮರಾಠಿ ಅಭ್ಯರ್ಥಿಗಳನ್ನ ಸೋಲಿಸಲು ರಣ ತಂತ್ರ ಹೆಣೆದಿತ್ತು. ಹಾಗಾಗಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ವಿಫಲಾಯಿತು ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ರು.

05. ವಾಹನಗಳ ಮಾರಾಟದಲ್ಲಿ ಶೇ.39% ರಷ್ಟು ಏರಿಕೆ

ಕೊರೊನಾ ಕಾರಣದಿಂದ ದೇಶದಲ್ಲಿ ಕಡಿಮೆಯಾಗಿದ್ದ ವಾಹನ ಮಾರಾಟದ ಪ್ರಮಾಣ ಮತ್ತೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಗಸ್ಟ್​ನಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ ಶೇಕಡಾ 39% ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ 1 ಲಕ್ಷ 82 ಸಾವಿರ 651ವಾಹನಗಳು ಮಾರಾಟ ವಾಗಿತ್ತು, ಆದ್ರೆ ಈ ವರ್ಷದ ಆಗಸ್ಟ್​ನಲ್ಲಿ 2 ಲಕ್ಷದ 53 ಸಾವಿರ 363 ಕ್ಕೆ ಸಂಖ್ಯೆ ಏರಿಕೆಯಾಗಿದೆ. ಇದ್ರಿಂದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇಕಡಾ 98% ರಷ್ಟು ಏರಿಕೆಯಾಗಿದೆ ಅಂತ ಆಟೋಮೊಬೈಲ್ ವಿತರಕರ ಸಂಘಗಳ ಒಕ್ಕೂಟ ಮಾಹಿತಿ ನೀಡಿದೆ.

06. ಅಮೆರಿಕಾದಲ್ಲಿ ಉಗ್ರ.. ತಾಲಿಬಾನ್​​ ಸರ್ಕಾರದಲ್ಲಿ ಮಂತ್ರಿ!

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಅಧ್ಯಾಯ ಶುರು ಆಗಿದೆ. ಬೀದಿ ಬೀದಿಯಲ್ಲಿ ನೆತ್ತರು ಹರಿಸ್ತಿರೋ ತಾಲಿಬಾನಿಗಳು, ಸರ್ವಾಧಿಕಾರಿ ಸರ್ಕಾರ ರಚನೆ ಮಾಡ್ತಿದ್ದಾರೆ. ಕಳೆದ ರಾತ್ರಿ ತಾಲಿಬಾನಿಗಳು, ಹೊಸ ಸರ್ಕಾರದಲ್ಲಿ ಪ್ರಧಾನಿ ಸೇರಿ ಸಂಪುಟ ಸಚಿವರ ಹೆಸರನ್ನ ಅನಾವರಣ ಮಾಡಿದ್ದಾರೆ. ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್​ ಆಯ್ಕೆಯಾಗಿದ್ದಾರೆ. ಉಪ ಪ್ರಧಾನಿಯಾಗಿ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್​​ ಹಾಗೂ ಅಬ್ದುಲ್ಲಾ ಸಲಮ್ ಹನಫಿ ನೇಮಕಕೊಂಡಿದ್ದಾರೆ.. ವಿಶೇಷವೆಂದ್ರೆ ಅಮೆರಿಕಾ ಮೋಸ್ಟ್ ವಾಂಟೆಡ್​ ಉಗ್ರರ ಲಿಸ್ಟ್​​ನಲ್ಲಿದ್ದ ಸಿರಾಜುದ್ದೀನಿ ಹಕ್ಕೀಮ್ ಒಡಾಳಿತ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

07. ಕಾಶ್ಮೀರದ ಬಗ್ಗೆ ಪಾಕ್​ ಅಧ್ಯಕ್ಷ ಮಾತು

ನೆರೆ ರಾಷ್ಟ್ರಗಳಲ್ಲಿ ಉಂಟಾಗುತ್ತಿರುವ ಗಡಿ ಬೆಳವಣಿಗೆಗಳ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಅಂತ ಪಾಕಿಸ್ತಾನ ಅಧ್ಯಕ್ಷ ಆರೀಫ್​ ಆಲ್ವಿ ತಿಳಿಸಿದ್ದಾರೆ. ಗಡಿ ಭಾಗದಲ್ಲಿ ಶಾಂತಿ ಕದಡಲು ಯತ್ನಿಸಿದ್ರೆ ಅವರನ್ನು ಮಟ್ಟ ಹಾಕಲು ನಾವು ಎಲ್ಲಾ ರೀತಿಯಲ್ಲೂ ಸಿದ್ಧವಾಗಿದ್ದೇವೆ ಅಂತ ಎಚ್ಚರಿಕೆಯನ್ನೂ ನೀಡಿದ್ರು. ಜೊತೆಗೆ ಕಾಶ್ಮೀರದ ಜನರಿಗೆ ಪಾಕಿಸ್ತಾನದ ಬೆಂಬಲ ಇರುವುದಾಗಿ ಘೋಷಿಸಿರುವ ಅಧ್ಯಕ್ಷ, ಕಣಿವೆ ರಾಜ್ಯದ ಸಮಸ್ಯೆಗಳನ್ನ ಭಾರತ ಸರ್ಕಾರ ಪರಿಹಾರ ಮಾಡಿದ್ರೆ ಮಾತ್ರ, ಗಡಿಯಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದಿದ್ದಾರೆ.

08. ಹೊಸ ಸೇನಾ ಮುಖ್ಯಸ್ಥನನ್ನ ನೇಮಿಸಿದ ಚೀನಾ

blank

ಭಾರತದ ಗಡಿಯಲ್ಲಿ ಚೀನಾ ಸೇನಾ ಮುಖ್ಯಸ್ಥ ವಾಂಗ್ ಹೈಜಿಯಾಂಗ್ ನನ್ನ ನೇಮಕ ಮಾಡಿದೆ. ಗಡಿಯಲ್ಲಿರುವ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್​ನ ಹೊಸ ಕಮಾಂಡರ್ ಆಗಿ ಜನರಲ್ ವಾಂಗ್ ಹೈಜಾಂಗ್​ ನೇಮಕಗೊಂಡಿದ್ದಾರೆ. ನಿನ್ನೆಯಷ್ಟೇ ಗಡಿಯಲ್ಲಿ ಸೇನಾ ಶಿಬಿರಗಳನ್ನ ನೇಮಿಸಿದ್ದ ಚೀನಾ, ಇದೀಗ ಹೊಸ ಸೇನಾ ಮುಖ್ಯಸ್ಥನನ್ನ ಆಯ್ಕೆ ಮಾಡಿದೆ. ಇದು ಭಾರತದ ಗಡಿಯಲ್ಲಿ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

09. ಇಂದು ಟಿ-20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ

blank

ಇಂದು ಟಿ-20 ವಿಶ್ವಕಪ್​ಗೆ ಬಿಸಿಸಿಐ ತನ್ನ 15 ಆಟಗಾರರ ಪಟ್ಟಿಯನ್ನು ಪ್ರಕಟಗೊಳಿಸಲಿದೆ. ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ತಂಡವನ್ನು ಸಿದ್ಧಪಡಿಸಿದ್ದಾರೆ. ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ತಂಡವನ್ನು ಪ್ರಕಟಗೊಳಿಸಲಿದ್ದಾರೆ. ಆರಂಭಿಕರ ಸ್ಥಾನಕ್ಕೆ ರೋಹಿತ್ ಶರ್ಮಾ ಹಾಗೂ ಕೆ.ಎಲ್​.ರಾಹುಲ್ ಹೆಸರು ಮುಂಚೂಣಿಯಲ್ಲಿರುವುದರಿಂದ ಶಿಖರ್ ಧವನ್​ಗೆ ​ ಸ್ಥಾನ ಸಿಗೋ ಸಾಧ್ಯತೆ ಕಡಿಮೆ ಇದೆ.

10. ಸೆ.9ಕ್ಕೆ ‘ಮ್ಯಾಟ್ರಿಕ್ಸ್​-4’ರ ಟ್ರೇಲರ್​ ಬಿಡುಗಡೆ

blank

ಬಾಲಿವುಡ್​ನ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್​ಡೇಟ್ಸ್​ ನೀಡಿದ್ದಾರೆ. ಮ್ಯಾಟ್ರೀಕ್ಸ್​- 4 ಎಂಬ ಹಾಲಿವುಡ್​ ಚಿತ್ರದಲ್ಲಿ ಪಿಗ್ಗಿ ನಟಿಸುತ್ತಿದ್ದು, ಚಿತ್ರದ ಟ್ರೇಲರ್ ಅನ್ನು ನಾಳೆ ಬಿಡುಗಡೆ ಮಾಡೋದಾಗಿ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಲಿಂಕ್ ಒಂದನ್ನು ಶೇರ್​ ಮಾಡಿರುವ ನಟಿ, ಲಿಂಕ್​ನಲ್ಲಿ ಚಿತ್ರದ ಬಗ್ಗೆ ಕೆಲವು ಕೌತುಕವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Source: newsfirstlive.com Source link