ಅಫ್ಘಾನ್​​ನಲ್ಲಿ ರಕ್ತ ಮೆತ್ತಿದ ಕೈಗೆ ಅಧಿಕಾರ -ತಾಲಿಬಾನ್ ಸರ್ಕಾರದ ಸ್ಟ್ರಕ್ಚರ್ ಹೇಗಿದೆ..?

ಅಫ್ಘಾನ್​​ನಲ್ಲಿ ರಕ್ತ ಮೆತ್ತಿದ ಕೈಗೆ ಅಧಿಕಾರ -ತಾಲಿಬಾನ್ ಸರ್ಕಾರದ ಸ್ಟ್ರಕ್ಚರ್ ಹೇಗಿದೆ..?

ಅಫ್ಘಾನಿಸ್ತಾನದಲ್ಲಿ ಹೊಸ ಅಧ್ಯಾಯ ಶುರು ಮಾಡಿರುವ ತಾಲಿಬಾನಿಗಳ ಸರ್ಕಾರ ರಚನೆಯಾಗಿದ್ದು, ಪ್ರಧಾನಿ ಸೇರಿ ಸಂಪುಟ ಸಚಿವರ ಹೆಸರನ್ನ ಅನಾವರಣ ಮಾಡಿದ್ದಾರೆ. ಆದರೆ ತಾಲಿಬಾನ್​​ನ ನೂತನ ಸಂಪುಟದ ಸದಸ್ಯರ ಇತಿಹಾಸ ಬಲು ಭಯಾನಕವಾಗಿದೆ. ಅಮೆರಿಕ ಮೊಸ್ಟ್ ವಾಂಟೆಡ್​ ಲಿಸ್ಟ್​​​ನಲ್ಲಿದ್ದವನಿಗೆ ತಾಲಿಬಾನ್​​ ಸರ್ಕಾರದಲ್ಲಿ ಮಂತ್ರಿ ಪಟ್ಟ ನೀಡಲಾಗಿದೆ.

ಇದನ್ನೂ ಓದಿ: ಇಸ್ರೇಲ್​​​​ ಜೈಲಿನಿಂದ ಆರು ಉಗ್ರಗ್ರಾಮಿಗಳು ಪರಾರಿಯಾಗಿದ್ದು ಹೇಗೆ ಗೊತ್ತಾ?

ತಾಲಿಬಾನ್.. 1994 ರಲ್ಲಿ ಹುಟ್ಟಿದ ಇದೇ ಉಗ್ರ ಸಂಘಟನೆ ಮುಂದೊಂದು ದಿನ ಇತಿಹಾಸ ನಿರ್ಮಿಸುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಅಫ್ಘಾನ್​ನಲ್ಲಿ ನೆತ್ತರು ಹರಿಸಿ, ಬೀದಿ ಬೀದಿಯಲ್ಲಿ ಹೆಣಗಳನ್ನ ಉರುಳಿಸ್ತಿರೋ ತಾಲಿಬಾನ್​ ಉಗ್ರರ ಹಣೆಪಟ್ಟಿ ಪಡೀತು. ಅಲ್​​ಖೈದಾ ಜೊತೆ ಸಂಬಂಧ ಬೆಳೆಸಿಕೊಂಡು ಭಯೋತ್ಪಾದನೆಯತ್ತ ಹೆಜ್ಜೆ ಹಾಕಿತ್ತು. ಅಮೆರಿಕಾ, ಇರಾನ್, ಕುವೈತ್ ಸೇರಿ ಹಲವು ರಾಷ್ಟ್ರಗಳ ಮೇಲೆ ದಾಳಿ ಮಾಡೋಕೆ ಸಹಾಯ ಮಾಡಿದ್ದು ಇತಿಹಾಸ.. ಆದ್ರೀಗ ತಾಲಿಬಾನ್​ ಮತ್ತೊಂದು ಇತಿಹಾಸ ನಿರ್ಮಿಸೋಕೆ ಹೊರಟಿದೆ. ಅಫ್ಘಾನಿಸ್ತಾನಿದಲ್ಲಿ ಪ್ರಜಾಪ್ರಭುತ್ವವನ್ನ ಮೂಲೆ ಗುಂಪು ಮಾಡಿ ತಾಲಿಬಾನ್ ಎಂಬ ನರರಾಕ್ಷಸರ ಸರ್ಕಾರ ರಚನೆ ಮಾಡ್ತಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಹೊಸ​ ಸರ್ಕಾರ ಘೋಷಣೆ
ಮುಲ್ಲಾ ಮೊಹಮ್ಮದ್ ಹಸನ್ ಅಖುಂಡಾ​​​​ಗೆ ಪ್ರಧಾನಿ ಪಟ್ಟ

ಬೀದಿ ಬೀದಿಯಲ್ಲಿ ನೆತ್ತರು ಹರಿಸ್ತಿರೋ ತಾಲಿಬಾನಿಗಳು ಸರ್ವಾಧಿಕಾರಿ ಸರ್ಕಾರ ರಚನೆ ಮಾಡ್ತಿದ್ದಾರೆ. ಈ ಮೂಳಕ ಅಫ್ಘಾನಿಸ್ತಾನದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದ ತಾಲಿಬಾನಿಗಳು ಪ್ರಧಾನಿ ಸೇರಿ ಸಂಪುಟ ಸಚಿವರ ಹೆಸರನ್ನ ಅನಾವರಣ ಮಾಡಿದ್ದಾರೆ. ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್​.. ಇದೇ, ಇದೇ ಮುಲ್ಲಾ ಅಖುಂಡ್​​ ತಾಲಿಬಾನ್ ಸರ್ಕಾರ ಹೊಸ ನಾಯಕ. ಅಫ್ಘಾನ್ ದೇಶದ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡಾರನ್ನ ಆಯ್ಕೆ ಮಾಡಲಾಗಿದೆ. ಉಪ ಪ್ರಧಾನಿಯಾಗಿ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್​​ ಹಾಗೂ ಅಬ್ದುಲ್ಲಾ ಸಲಮ್ ಹನಫಿ ಉಪ ಪ್ರಧಾನಿಯಾಗಿ ನೇಮಕಕೊಂಡಿದ್ದಾನೆ.

Image
ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್​

ಇದನ್ನೂ ಓದಿ: ಮನ ಮಿಡಿಯುವ ಕಥೆ; 3 ದಿನ ಅರಣ್ಯದಲ್ಲಿ ಕೇವಲ ನೀರು ಕುಡಿದೇ ಬದುಕಿದ ಬಾಲಕ

ಕಳೆದ ರಾತ್ರಿ ತಾಲಿಬಾನ್ ಮುಖ್ಯ ವಕ್ತಾರ ಜಬೀಹುಲ್ಲಾ ಮುಜಾಹಿದ್ ಪತ್ರಿಕಾಗೋಷ್ಠಿ ಮಾಡಿ ತಮ್ಮ ನಾಯಕ ಹಾಗೂ ಹೊಸ ಸಂಪುಟ ಸದಸ್ಯರ ಹೆಸರನ್ನ ಘೋಷಿಸಿದ್ದಾನೆ.

ತಾಲಿಬಾನ್​ ಹೊಸ ಸಂಪುಟ!

  • ಮುಲ್ಲಾ ಯಾಕೂಬ್- ರಕ್ಷಣಾ ಸಚಿವ
  • ಅಮೀರ್ ಖಾನ್ ಮುತಾಖಿ- ವಿದೇಶಾಂಗ ಸಚಿವ
  • ಹೀದಾಯತ್​ತುಲ್ಲಾ ಬದ್ರಿ- ಹಣಕಾಸು ಸಚಿವ
  • ದಿನ್ ಮೊಹ್ಮದ್- ಆರ್ಥಿಕ ಸಚಿವ
  • ಮೊಹ್ಮದ್ ಇದ್ರಿಸ್- ಗವರ್ನರ್, ಸೆಂಟ್ರಲ್ ಬ್ಯಾಂಕ್ ಖಾತೆ
  • ಅಬಾಸ್ ಸ್ಟಾನಿಕ್​ ಜೈ- ವಿದೇಶಾಂಗ ಖಾತೆ
  • ಅಬ್ದುಲ್ಲಾ ಹಕ್ಕಿಮ್- ಕಾನೂನು ಸಚಿವ
  • ಸಿರಾಜ್ ಹಕ್ಕಿಮ್- ಒಡಾಳಿತ ಸಚಿವ
  • ಖೈರುಲ್ಲಾ ಖೈರ್​ಖ್ವಾ- ಮಾಹಿತಿ ಸಚಿವ

ಅಂದಹಾಗೇ ತಾಲಿಬಾನ್ ಸರ್ಕಾರ ರಚನೆ ವಾರದ ಹಿಂದೆಯೇ ಆಗಬೇಕಿತ್ತು. ಆದ್ರೆ ಪ್ರಧಾನಿ ಪಟ್ಟಕ್ಕಾಗಿ ತಾಲಿಬಾನ್​ ನಾಯಕರಲ್ಲೇ ಗುದ್ದಾಟ ನಡೆದಿತ್ತು, ಮೊದಲಿಗೆ ಪ್ರಧಾನಿ ಸ್ಥಾನಕ್ಕೆ ಬರಾದರ್ ಹೆಸರು ಕೇಳಿ ಬಂದಿತ್ತು. ಜೊತೆಗೆ ಇನ್ನಿಬ್ಬರು ಪ್ರಮುಖರ ಹೆಸರು ಸಹ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಇತ್ತು. ಆದ್ರೆ ಕೊನೆಯಲ್ಲಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡಾಗೆ ಪ್ರಧಾನಿ ಪಟ್ಟ ನೀಡಲಾಗಿದೆ. ಅಷ್ಟಕ್ಕೂ ತಾಲಿಬಾನ್​​ನ ಹೊಸ ಸರ್ಕಾರದಲ್ಲಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡಾಗೆ ಪ್ರಧಾನಿ ಸ್ಥಾನ ಕೊಟ್ಟಿದ್ಯಾಕೆ..? ಅನ್ನೋದ್ರ ವಿವರ ಇಲ್ಲಿದೆ.

ಮುಲ್ಲಾ ಅಖುಂಡ್ ಇತಿಹಾಸ
ತಾಲಿಬಾನ್​​ನ ಹೊಸ ಪ್ರಧಾನಿಯಾಗಿ ಆಯ್ಕೆಯಾದ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್​​​​ ಮೂಲತಃ ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ಹುಟ್ಟಿದ್ದ. ತಾಲಿಬಾನ್​ ಸಂಘಟನೆಯ ಹಿರಿಯ ಹಾಗೂ ಅನುಭವಿ ನಾಯಕ ಅಂತ ಅಖುಂಡ್​ ಖ್ಯಾತಿ ಪಡೆದಿದ್ದಾರೆ. ರೆಹಬ್ರಿ ಶೌರಾ ಮಂಡಳಿಯಲ್ಲಿ ದೀರ್ಘಕಾಲಿಕ ಮುಖ್ಯಸ್ಥನಾಗಿ ಕೆಲಸ ಮಾಡಿದ್ದಾರೆ. 1996-2001ರ ತಾಲಿಬಾನ್ ಸರ್ಕಾರದಲ್ಲಿ ಅಖೂಂಡ್​​ಗೆ ಪ್ರಮುಖ ಹುದ್ದೆ ನೀಡಲಾಗಿತ್ತು. ಮೊದಲು ವಿದೇಶಾಂಗ ಸಚಿವನಾಗಿ ನಂತರ ಉಪ ಪ್ರಧಾನಿಯಾಗಿ ಅಖುಂಡ್​ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ, 2001 ರಲ್ಲಿ ಬಮಿಯಾನ್ ಬುದ್ಧರ ಮೂರ್ತಿ ಕೆಡವಿದ್ದಾಗ ಅಖುಂಡ್​​ ಸಮರ್ಥನೆ ಮಾಡಿದ್ದ. .. ಹಾಗೆಯೇ ಅಮೆರಿಕಾ ವಿರುದ್ಧ ಸಮರ ಸಾರಿದ್ದ ನಾಯಕರಲ್ಲಿ ಅಖುಂಡ್​ ಕೂಡ ಒಬ್ಬನಾಗಿದ್ದ.

ಇದನ್ನೂ ಓದಿ: ಅಫ್ಘನ್​ನಲ್ಲಿ ತಾಲಿಬಾನಿಗಳ ಸರ್ಕಾರ ರಚನೆ; ಮುಲ್ಲಾ ಮೊಹ್ಮದ್ ಹಸನ್ ನೂತನ ಪ್ರಧಾನಿ

ಹೀಗೆ ಕರಾಳ ಹಾಗೂ ಭಯಾನಕ ಇತಿಹಾಸ ಹೊಂದಿರೋ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡಾ​ ಅಫ್ಘಾನ್​ ಪ್ರಧಾನಿ ಪಟ್ಟ ಪಡೆದಿದ್ದಾನೆ. ಮೊದಲೇ ಸರ್ವಾಧಿಕಾರಿ ಸರ್ಕಾರದ ಸ್ಯಾಂಪಲ್​ ತೋರಿಸ್ತಿರೋ ತಾಲಿಬಾನಿಗಳು ಮುಂದೆ ಭಯಾನಕ ಹಾಗೂ ಭೀಭತ್ಸ ಸರ್ಕಾರ ನಡೆಸೋದು ಗ್ಯಾರೆಂಟಿ.. ಈ ಮೂಲಕ ಅಫ್ಘಾನ್​​ನಲ್ಲಿ ಹೊಸ ಸರ್ಕಾರದ ಜೊತೆ ಜೊತೆಗೆ ಕರಾಳ ಅಧ್ಯಾಯ ಶುರುವಾಗಿದೆ ಅನ್ನೋದರಲ್ಲಿ ತಪ್ಪಿಲ್ಲ.

Source: newsfirstlive.com Source link