ನಾಯಕ ಕೊಹ್ಲಿ -ಕೋಚ್ ರವಿಶಾಸ್ತ್ರಿ ವಿರುದ್ಧ ಬಿಸಿಸಿಐ ಬಾಸ್​​ಗಳು ಗರಂ

ನಾಯಕ ಕೊಹ್ಲಿ -ಕೋಚ್ ರವಿಶಾಸ್ತ್ರಿ ವಿರುದ್ಧ ಬಿಸಿಸಿಐ ಬಾಸ್​​ಗಳು ಗರಂ

ಆಸ್ಟ್ರೇಲಿಯಾದ ಗಾಬಾ, ಇಂಗ್ಲೆಂಡ್​​ನ ಲಾರ್ಡ್ಸ್​​​ ಜಯದ ನಂತರ ಭಾರತಕ್ಕೆ ಮತ್ತೊಂದು ಐತಿಹಾಸಿಕ ಗೆಲುವು ದಕ್ಕಿದ್ದು, ಕೆನ್ನಿಂಗ್ಟನ್​ ಓವಲ್​​ನಲ್ಲಿ. ಈ ಪಿಚ್​​​ನಲ್ಲಿ ಭಾರತ, 50 ವರ್ಷಗಳ ನಂತರ ಗೆದ್ದು, ಚರಿತ್ರೆ ಸೃಷ್ಟಿಸಿದೆ. ಆದ್ರೆ ಪಂದ್ಯದ ಮಧ್ಯೆ ಹೆಡ್​​ ​ಕೋಚ್​​ ರವಿ ಶಾಸ್ತ್ರಿ ಬೆನ್ನಲ್ಲೆ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್​​​ಗೆ ಕೊರೊನಾ ದೃಢಪಟ್ಟಿದೆ. ಇದರಿಂದ ಮುಜುಗರಕ್ಕೆ ಒಳಗಾದ BCCI, ಕೋಚ್​ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್​ ಕೊಹ್ಲಿ ಮೇಲೆ ಫುಲ್​ ಗರಂ ಆಗಿದೆ.

ಹೌದು.. ಕೋಚ್ ರವಿ ಶಾಸ್ತ್ರಿ ಹಾಗೂ ಕ್ಯಾಪ್ಟನ್ ಕೊಹ್ಲಿ, ಇತ್ತೀಚಿಗೆ ಬಯೋಬಬಲ್​​ ನಿಯಮಗಳನ್ನ ಉಲ್ಲಂಘಿಸಿ, ಪುಸ್ತಕ ಅನಾವರಣ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಇಲ್ಲಿ ಸೋಂಕು ಅಂಟಿಸಿಕೊಂಡು ಬಂದಿದ್ದ ರವಿ ಶಾಸ್ತ್ರಿಯಿಂದ, ಇತರ ಸಹಾಯಕ ಸಿಬ್ಬಂದಿಗಳಿಗೂ ಸೋಂಕು ಹರಡಿದೆ ಎನ್ನಲಾಗಿದೆ. ಜೊತೆಗೆ ಆಟಗಾರರಿಗೂ ಆತಂಕ ಹೆಚ್ಚಿಸಿದ ಪರಿಣಾಮ, ಕೊಹ್ಲಿ-ಶಾಸ್ತ್ರಿ ಮೇಲೆ ವಿರುದ್ಧ ಮಂಡಳಿ ಕಿಡಿಕಾರಿದೆ.

blank

ಕಾರ್ಯಕ್ರಮಕ್ಕೆ ಕೊಹ್ಲಿ-ಶಾಸ್ತ್ರಿ – ಅಭಿಮಾನಿಗಳು ಬೇಸರ..!

ಟೀಮ್​ ಇಂಡಿಯಾ ಆಟಗಾರರು ಮತ್ತು ಸಿಬ್ಬಂದಿ, ಬಂಧನವೆಂಬ ಬಯೋಬಬಲ್​​​ನಲ್ಲಿದ್ದಾರೆ. ಅದರಿಂದ ಹೊರಬೇಕಾದರೆ, ಬಿಸಿಸಿಐ ಅನುಮತಿ ಕಡ್ಡಾಯ. ಆದರೆ ಬಿಸಿಸಿಐ ಆದೇಶವನ್ನ ಲೆಕ್ಕಿಸದ ವಿರಾಟ್​​ – ರವಿ ಶಾಸ್ತ್ರಿ, ಬಬಲ್​​​ ನಿಯಮ ಮುರಿದಿದ್ದಾರೆ. ರವಿ ಶಾಸ್ತ್ರಿ ಬರೆದ ‘ರವಿ ಶಾಸ್ತ್ರಿ, ದಿ ಪ್ಲೇಯರ್ಸ್ ಇನ್​​​​ ಮೈ ಲೈಫ್​​’ ಪುಸ್ತಕವನ್ನ ಲಂಡನ್​​​ನ ತಾಜ್​ ಹೋಟೆಲ್​​ನಲ್ಲಿ ಬಿಡುಗಡೆ ಮಾಡಲಾಯ್ತು. ಆದರೆ ಕ್ರಿಕೆಟ್ ಹೊರತಾದ ಕಾರ್ಯಕ್ರಮಕ್ಕೆ ತೆರಳಿದ ಇಬ್ಬರೂ, ನಿಮಯ ಉಲ್ಲಂಘಿಸಿ ನಿರ್ಲಕ್ಷ್ಯ ತೋರಿದ್ದಾರೆ. ಕೊರೊನಾ ಹರಡುವ ಕುರಿತು ಮೊದಲೇ ತಿಳಿದಿದ್ದರೂ, ಕೊಹ್ಲಿ-ಶಾಸ್ತ್ರಿ ಹೋಗಿದ್ಯಾಕೆ ಎಂದು ಅಭಿಮಾನಿಗಳು, ಕಿಡಿಕಾರಿದ್ದಾರೆ.

‘ಇದೊಂದು ಆಘಾತಕಾರಿ ಘಟನೆ’’

‘ನಿಮಯ ಉಲ್ಲಂಘಿಸಿ ಕಾರ್ಯಕ್ರಮಕ್ಕೆ ಹೋದ ಘಟನೆಯು ಹೆಚ್ಚು ಆತಂಕಕಾರಿಯಾಗಿದೆ. ಏಕೆಂದರೆ ಎಲ್ಲರೂ ಜಾಗರೂಕರಾಗಿರುವಂತೆ ಬಿಸಿಸಿಐ ಕಾರ್ಯದರ್ಶಿ ಸರಣಿಗೂ ಮುನ್ನ ತಂಡದ ಸದಸ್ಯರಿಗೆ ಪತ್ರ ಬರೆದಿದ್ರು. ಆದರೆ ಆಟಗಾರರು ಮಂಡಳಿ ಅನುಮತಿ ಪಡೆಯದೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ’.

-ಬಿಸಿಸಿಐ ಅಧಿಕಾರಿ

blank

ನಿಮಯ ಉಲ್ಲಂಘಿಸಿದವರ ವಿರುದ್ಧ ತನಿಖೆ ಆರಂಭಿಸಿದ ಬಿಸಿಸಿಐ.!

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಲು ಟೀಮ್​ ಇಂಡಿಯಾ, ಬಿಸಿಸಿಐನಿಂದ ಅನುಮತಿ ಪಡೆಯಲಿಲ್ಲ. ಹಾಗಾಗಿ ಈ ಬಗ್ಗೆ ತನಿಖೆ ಕೈಗೊಂಡಿರುವ ಮಂಡಳಿ, ಶಾಸ್ತ್ರಿ ಮತ್ತು ಕೊಹ್ಲಿಯಿಂದ ವಿವರಣೆ ಕೇಳಿದೆ ಎನ್ನಲಾಗಿದೆ. ತನಿಖೆಯಲ್ಲಿ ಸತ್ಯಾಂಶ ಗೊತ್ತಾದ ಬಳಿಕ, ಕ್ರಮ ಕೈಗೊಳ್ಳಲಾಗುವುದು ಅನ್ನೋದು ಬಿಸಿಸಿಐ ಅಧಿಕಾರಿಗಳ ಮಾತಾಗಿದೆ.

ಒಟ್ಟಿನಲ್ಲಿ ಸದ್ಯ ಟೀಮ್​ ಇಂಡಿಯಾ ಆಟಗಾರರ ವರದಿಯೇನೋ, ನೆಗೆಟಿವ್​ ಬಂದಿದೆ. ಒಂದು ವೇಳೆ ಆಟಗಾರರಿಗೂ ಕೊರೊನಾ ಸೋಂಕು ಹರಡಿದ್ದಿದ್ರೆ, ಕೋಚ್-ಕ್ಯಾಪ್ಟನ್ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳುವ ಸಾಧ್ಯತೆ ಇತ್ತು.

Source: newsfirstlive.com Source link