ಅನುಶ್ರೀಗೆ ಮತ್ತೆ ‘ಡ್ರಗ್​​ ಕೇಸ್​ ಸಂಕಷ್ಟ’ -ಚಾರ್ಜ್​​ಶೀಟ್​ನಲ್ಲಿ ಗಂಭೀರ ಆರೋಪ ಉಲ್ಲೇಖ

ಅನುಶ್ರೀಗೆ ಮತ್ತೆ ‘ಡ್ರಗ್​​ ಕೇಸ್​ ಸಂಕಷ್ಟ’ -ಚಾರ್ಜ್​​ಶೀಟ್​ನಲ್ಲಿ ಗಂಭೀರ ಆರೋಪ ಉಲ್ಲೇಖ

ಮಂಗಳೂರು: ಆ್ಯಂಕರ್ ಕಂ ನಟಿ ಅನುಶ್ರೀ ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಚಾರ್ಜ್​ಶೀಟ್​ನ ವಿವರ​ ಮಾಧ್ಯಮಗಳಿಗೆ ಲಭ್ಯವಾಗಿದೆ.

ಚಾರ್ಜ್​ಶೀಟ್​ನಲ್ಲಿ ಆರೋಪಿ ನಂಬರ್ 2 ಕಿಶೋರ್​ ಅಮನ್ ಶೆಟ್ಟಿ ನೀಡಿರುವ ಹೇಳಿಕೆಯನ್ನ ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಅನುಶ್ರೀ ಡ್ರಗ್ಸ್​ ಸೇವನೆ ಮಾತ್ರ ಅಲ್ಲ, ಅನುಶ್ರೀ ಡ್ರಗ್ ಸಾಗಾಟ ಕೂಡ ಮಾಡುತ್ತಿದ್ದರು. ನಮ್ಮ ರೂಮಿಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. Ecstasy ಮಾತ್ರೆಗಳನ್ನ ತರುತ್ತಿದ್ದಾಗಿ ಕಿಶೋರ್ ಶೆಟ್ಟಿ ಹೇಳಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನ ಚಾರ್ಜ್​​ಶೀಟ್​ನಲ್ಲಿ ತನಿಖಾಧಿಕಾರಿಗಳು ಉಲ್ಲೇಖ ಮಾಡಿದ್ದಾರೆ ಅಂತಾ ತಿಳಿದುಬಂದಿದೆ.

Source: newsfirstlive.com Source link