ಬೆಂಗಳೂರಿನಲ್ಲಿ ಕೋಳಿ ಪಂದ್ಯ ಪ್ರಕರಣ – ಜೂಜಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಹಿಂದೇಟು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋಳಿ ಪಂದ್ಯ ನಡೆಯುತ್ತಿದ್ದು, ಈ ಜೂಜಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರಿನಲ್ಲೇ ಕೋಟ್ಯಂತರ ರೂ. ಬಾಜಿ ದರ್ಬಾರ್ ನಡಿತಿರೋದನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ನಡೆಸಿ ಬಯಲಿಗೆ ಎಳೆದಿತ್ತು. ಕಳೆದ ಶನಿವಾರ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸೇರಿದಂತೆ ಹಿರಿಯ ಅಧಿಕಾರಿಗಳು, ತಕ್ಷಣ ವರದಿ ತರಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಕೇಸ್ ದಾಖಲಿಸಿಕೊಳ್ಳುವಂತೆ ಸೂಚನೆಯನ್ನು ನೀಡಿದ್ದರು. ಇದನ್ನೂ ಓದಿ:  ಬ್ರಾಹ್ಮಣ ವಿರೋಧಿ ಅಂತ ಛತ್ತಿಸ್‍ಗಢದ ಸಿಎಂ ತಂದೆ ಅರೆಸ್ಟ್

ಅಧಿಕಾರಿಗಳು ಕರ್ತವ್ಯ ಲೋಪ ಮಾಡಿದ್ದರೆ ಅವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿತ್ತು. ಆದರೆ ಭರವಸೆ ನೀಡಿ ನಾಲ್ಕು ದಿನಗಳು ಕಳೆದರು ಕೂಡ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಣ್ಣು ಮುಂದೆ ಏನೇನು ನಡೆಯುತ್ತಿದೆ ಅನ್ನೋದನ್ನು ವೀಡಿಯೋ ಸಮೇತ ಜನರ ಮುಂದಿಟ್ಟಿದ್ರು, ನೋಡೋಣ, ಮಾಡೋಣ ಎಂದು ಹಿರಿಯ ಅಧಿಕಾರಿಗಳೇ ಕಾಲಹರಣ ಮಾಡುತ್ತಿದ್ದಾರೆ.

ಕರ್ತವ್ಯ ಲೋಪವೆಸಗೋ ಅಧಿಕಾರಿಗಳಿಗೆ ಬ್ರೇಕ್ ಹಾಕೋರು ಯಾರು ಅನ್ನೋ ಪ್ರಶ್ನೆ ಈಗ ಎದುರಾಗಿದೆ. ನಗರದ ಬಾಗಲೂರು ಪೆÇಲೀಸ್ ಠಾಣಾ ವ್ಯಾಪ್ತಿಯ ಮಾರಸಂದ್ರ ಎನ್ನುವ ಗ್ರಾಮದ ಬಳಿ ಕೋಳಿ ಪಂದ್ಯ, ಮಟ್ಕಾ ನಡೀತಿತ್ತು. ಅಲ್ಲಿ ದಿನಕ್ಕೆ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದರು. ಈ ಪಂದ್ಯದ ಜಾಗಕ್ಕೆ ಹೋಗೋಕೆ ಒಬ್ಬ ವ್ಯಕ್ತಿಗೆ ಐನೂರು ರೂ. ಎಂಟ್ರಿ ಫೀಜ್, ಒಂದು ಕೋಳಿ ಎಂಟ್ರಿಯಾಗೋಕೆ ಐದು ಸಾವಿರ ರೂ. ಫಿಕ್ಸ್ ಮಾಡಲಾಗಿತ್ತು. ಇದನ್ನೂ ಓದಿ:  ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡ್ಡಿ – ಕ್ರೀಡಾಪಟುಗಳ ಮೇಲೆ ಮಾಧುಸ್ವಾಮಿ ಗರಂ

blank

ಈ ಜಾಗದಲ್ಲಿ ಬಾಜಿ ಕಟ್ಟೋಕೆ ತಮಿಳುನಾಡು, ಆಂಧ್ರಪ್ರದೇಶ, ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಜನ ಬರುತ್ತಿದ್ದರು. ಪ್ರತಿ ಪಂದ್ಯಕ್ಕೂ ಕನಿಷ್ಠ ಐದು ಲಕ್ಷದಿಂದ ಹದಿನೈದು ಲಕ್ಷದವರೆಗೆ ಬೆಟ್ಟಿಂಗ್ ನಡೆಯುತ್ತಿತ್ತು. ದಿನಕ್ಕೆ ಒಂದೂವರೆ ಕೋಟಿ ರೂ. ವ್ಯವಹಾರವಾಗುತ್ತಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ನಡೆಸಿ ಈ ಅಕ್ರಮವನ್ನು ವೀಡಿಯೋ ಸಾಕ್ಷಿ ಸಮೇತ ಬಯಲಿಗೆ ಎಳೆದಿತ್ತು.

Source: publictv.in Source link