ಧವನ್​ ಬಾಳಿನಲ್ಲಿ ವಿಚ್ಛೇದನ ಶಾಕ್​​.. ಆಯೆಶಾ ಮುಖರ್ಜಿ ಮೊದಲ ಪತಿ ಯಾರು ಗೊತ್ತಾ?

ಧವನ್​ ಬಾಳಿನಲ್ಲಿ ವಿಚ್ಛೇದನ ಶಾಕ್​​.. ಆಯೆಶಾ ಮುಖರ್ಜಿ ಮೊದಲ ಪತಿ ಯಾರು ಗೊತ್ತಾ?

ಟೀಂ ಇಂಡಿಯಾ ಅನುಭವಿ ಆಟಗಾರ ಶಿಖರ್ ಧವನ್​​​ ತಮ್ಮ ಪತ್ನಿಯಿಂದ ದೂರವಾಗಿದ್ದಾರೆ. ಈ ವಿಚಾರವನ್ನು ಧವನ್ ಪತ್ನಿ 46 ವರ್ಷದ ಆಯೆಶಾ ಮುಖರ್ಜಿ ಅವರೇ ತಮ್ಮ ಇನ್​​​ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ 10 ವರ್ಷಗಳ ಧವನ್​, ಆಯೆಶಾ ದಾಂಪತ್ಯ ಜೀವನ ಅಂತ್ಯವಾಗಿದೆ. ಇಬ್ಬರು ದಂಪತಿಗಳಿಗೆ 8 ವರ್ಷಗಳ ಮಗ ಕೂಡ ಇದ್ದಾನೆ..

blank

ಅಂದಹಾಗೆ, ಮೆಲ್ಬರ್ನ್ ಮೂಲದ ಆಯೆಶಾ ಅವರಿಗೆ ಧವನ್​ರನ್ನು ಮದುವೆಯಾಗುವ ಮುನ್ನ ಆಸ್ಟ್ರೇಲಿಯಾ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದರು. ಈ ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಆ ಬಳಿಕ ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಆಯೆಶಾ, 2009ರಲ್ಲಿ ಧವನ್​ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

blank

ಇನ್ನು ಧವನ್​, ಆಯೆಶಾ ಇಬ್ಬರು ಮೊದಲ ಬಾರಿಗೆ ಫೇಸ್​​ಬುಕ್​​ ಮೂಲಕ ಪರಿಚಯವಾಗಿದ್ದರು. ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್​ ಇಬ್ಬರಿಗೂ ಸ್ನೇಹಿತರಾಗಿದ್ದ ಕಾರಣ ಇಬ್ಬರ ಪರಿಚಯವಾಗಿತ್ತು. ಆಯೆಶಾ ಮುಖರ್ಜಿ, ಮೆಲ್ಬರ್ನ್​ ಮೂಲದವರಾಗಿದ್ದು, ಮಾಜಿ ಕಿಕ್​ ಬಾಕ್ಸರ್​ ಕೂಡ ಹೌದು.. ಕಿಕ್​ ಬಾಕ್ಸಿಂಗ್​​ನಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿ ಉತ್ತಮ ಹೆಸರು ಪಡೆದುಕೊಂಡಿದ್ದರು.

blank

ಆಸ್ಟ್ರೇಲಿಯಾ ಮೂಲದ ಉದ್ಯಮಿಯನ್ನು ಮದುವೆಯಾಗಿದ್ದ ಆಯೆಶಾ ಅವರು 2000ರಲ್ಲಿ ಆಲಿಯಾ ಎಂಬ ಮಗಳಿಗೆ ಜನ್ಮ ನೀಡಿದ್ದರು. ಆ ಬಳಿಕ 2005ರಲ್ಲಿ ರಿಯಾ ಎಂಬ ಎಡರನೇ ಮಗು ದಂಪತಿಗೆ ಜನಿಸಿತ್ತು.

ಇನ್ನು ಆಯೆಶಾ ಮೂಲತಃ ಆಂಗ್ಲೋ ಇಂಡಿಯನ್​ ಆಗಿದ್ದು, ಅವರ ತಾಯಿ ಬ್ರಿಟಿಷ್​ ಹಾಗೂ ತಂದೆ ಭಾರತದ ಮೂಲದವರು. ಆಯೆಶಾ ಜನಿಸಿದ ಬಳಿಕ ಅವರ ತಂದೆ-ತಾಯಿ ಕುಟುಂಬ ಸಮೇತ ಆಸ್ಟ್ರೇಲಿಯಾಗೆ ಶಿಫ್ಟ್​ ಆಗಿದ್ದರು. ಸದ್ಯ ಆಯೆಶಾ, ಮೆಲ್ಬರ್ನ್ ​ನಲ್ಲೇ ನೆಲೆಸಿದ್ದಾರೆ.

blank

Source: newsfirstlive.com Source link