ಆ್ಯಂಕರ್​​ ಅನುಶ್ರೀ ವಿರುದ್ಧ ಡ್ರಗ್ಸ್​ ಕೇಸ್ ಆರೋಪಿ ಕಿಶೋರ್ ನೀಡಿರೋ ಹೇಳಿಕೆ ಏನು..?

ಆ್ಯಂಕರ್​​ ಅನುಶ್ರೀ ವಿರುದ್ಧ ಡ್ರಗ್ಸ್​ ಕೇಸ್ ಆರೋಪಿ ಕಿಶೋರ್ ನೀಡಿರೋ ಹೇಳಿಕೆ ಏನು..?

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀಗೆ ಮತ್ತೆ ಡ್ರಗ್​ ಸಂಕಷ್ಟ ಎದುರಾಗಿದ್ದು, ಪ್ರಕರಣ ಎ2 ಆರೋಪಿಯಾಗಿರುವ ಕಿಶೋರ್ ಅನುಶ್ರೀ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಕಿಶೋರ್ ಹೇಳಿಕೆಯನ್ನು ಪೊಲೀಸರು ಚಾರ್ಜ್​​ ಶೀಟ್​ನಲ್ಲಿ ಉಲ್ಲೇಖ ಮಾಡಿದ್ದು, ಅನುಶ್ರೀ ಪರಿಚಯ ಆಗಿದ್ದು ಹೇಗೆ..? ಎಲ್ಲಿ ಡ್ರಗ್ಸ್​ ಸೇವನೆ ಮಾಡುತ್ತಿದ್ದೇವು..? ಡ್ರಗ್ಸ್​ ತಂದುಕೊಡುತ್ತಿದ್ದು ಯಾರು? ಎಂಬ ಬಗ್ಗೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.

ಚಾರ್ಜ್​​ ಶೀಟ್​​ನಲ್ಲಿ ಏನಿದೆ.. ಕಿಶೋರ್ ಹೇಳಿರೋದೇನು..?
ಪ್ರಕರಣದಲ್ಲಿ ಅನುಶ್ರೀ ಡ್ರಗ್ ಸೇವಿಸಿರೋದು ನಿಜ. ಡ್ರಗ್ ಸೇವನೆ ಮಾತ್ರ ಅಲ್ಲದೇ ಅನುಶ್ರೀ ಡ್ರಗ್ ಸಾಗಾಟ ಕೂಡ ಮಾಡುತ್ತಿದ್ದರು. ನಮ್ಮ ರೂಂ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. Ecstasy ಪಿಲ್ಸ್ ತರುತ್ತಿದ್ದರು.. ಕಿಶೋರ್, ತರುಣ್ ಜೊತೆ ಸಾಕಷ್ಟು ಭಾರೀ ಮಾದಕ ವಸ್ತು ಸೇವಿಸಿರೋದಾಗಿ ಮಂಗಳೂರು ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್​ ಶೀಟ್​​ನಲ್ಲಿ ಮಾಡಲಾಗಿದೆ.

blank

2007-08 ರ ಸಮಯದಲ್ಲಿ ಬೆಂಗಳೂರಿನ ಸಂಜಯ್ ಅವರ ಮಾಲೀಕತ್ವದ ಎಕ್ಸಿಲೆಸ್ಸಿ ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಟಿವಿ ಆ್ಯಂಕರ್ ಅನುಶ್ರೀ ಅವರಿಗೆ ಕುಣಿಯೋಣಾ ಬಾರ ಡ್ಯಾನ್ಸ್ ನಲ್ಲಿ ಕೊರಿಯೋಗ್ರಫಿ ಮಾಡುತ್ತಿದ್ದ ನನ್ನ ಸ್ನೇಹಿತ ತರುಣ್, ಅನುಶ್ರೀ ರವರಿಗೆ ಪರಿಚಯ ಮಾಡಿಕೊಟ್ಟಿದ್ದ. ನಾನು ತರುಣ್ ಅನುಶ್ರೀಗೆ ಕೊರಿಯೋಗ್ರಫಿ ಮಾಡಿದ್ವಿ. ಈ ಪ್ರೋಗ್ರಾಂ ನಲ್ಲಿ ಅನುಶ್ರೀ ಜಯಗಳಿಸಿದ್ದರು.

ಅನುಶ್ರೀ ಡ್ಯಾನ್ಸ್ ಪ್ರಾಕ್ಟಿಸ್ ಮಾಡುವ ಸಂದರ್ಭದಲ್ಲಿ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಡ್ಯಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದರು. ಕೆಲವೊಂದು ದಿನಗಳ ಕಾಲ ನಾನು ಅವರ ಜೊತೆ ಹೋಗಿದ್ದೆ. ಆ ದಿನ ಮೂರು ಜನ ಅಡುಗೆ ಮಾಡಿ ಊಟ ಮಾಡುವ ಸಮಯದಲ್ಲಿ Ecstasy ಪಿಲ್ಸ್ ಸೇವನೆ ಮಾಡುತ್ತಿದ್ದೇವು. ಆ ಬಳಿಕ ವಿಜೇತರಾದ ಬಳಿಕ ವಿಜೇತರಾಗಿದಕ್ಕೆ ನಾನು, ತರುಣ್​​ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಸೇವಿಸಿ ಡ್ರಿಂಕ್ಸ್​ ಪಾರ್ಟಿ ಮಾಡಿರುತ್ತೇವೆ. ಮಾಧಕ ವಸ್ತು ಸೇವನೆ ಖರೀದಿಯಲ್ಲಿ ಅನುಶ್ರೀ ಭಾಗಿಯಾಗಿದ್ದರು.

ಡ್ಯಾನ್ಸ್​ ಮಾಡಲು ಇದು ಹೆಚ್ಚು ತಾಕತ್ತು ಕೊಡುತ್ತದೆ.. ಇದರಿಂದ ಡ್ಯಾನ್ಸ್​ ಮಾಡಲು ಖುಷಿ ಸಿಗುತ್ತದೆ. ಪ್ರಾಕ್ಟೀಸ್​ ಮಾಡಲು ಸುಲಭವಾಗುತ್ತದೆ ಎಂದು ಕೂಡ ನಾವೆಲ್ಲರೂ ಮಾತನಾಡಿಕೊಳ್ಳುತ್ತಿದ್ದೇವು. ಡ್ರಗ್ಸ್​ ಯಾರು ನೀಡುತ್ತಾರೆ ಎಂದು ಅನುಶ್ರೀ ರವರಿಗೆ ನಮಗಿಂತ ಹೆಚ್ಚು ತಿಳಿದಿದೆ.. ಅವರಿಗೆ ಡ್ರಗ್ಸ್ ಪೆಡ್ಲರ್​​ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾಧಕ ವಸ್ತುಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾಗಿ ಚಾರ್ಜ್​ ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: ಅನುಶ್ರೀಗೆ ಮತ್ತೆ ‘ಡ್ರಗ್​​ ಕೇಸ್​ ಸಂಕಷ್ಟ’ -ಚಾರ್ಜ್​​ಶೀಟ್​ನಲ್ಲಿ ಗಂಭೀರ ಆರೋಪ ಉಲ್ಲೇಖ

Source: newsfirstlive.com Source link