ಡ್ರಗ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

ಮಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ಆ್ಯಂಕರ್ ಕಮ್ ನಟಿ ಅನುಶ್ರೀ ವಿರುದ್ಧ ಸ್ಯಾಂಡಲ್‍ವುಡ್ ಡ್ರಗ್ ಲಿಂಕ್ ಪ್ರಕರಣ ಮತ್ತೆ ಅಂಟಿಕೊಂಡಿದೆ. ಇದೀಗ ಮಂಗಳೂರು ಪೊಲೀಸರು ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಲಾಗಿದೆ.

ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ಅನುಶ್ರೀ ಮಾದಕ ದ್ರವ್ಯ ಮಾರಾಟ ಮತ್ತು ರೂಂಗೆ ತರುತ್ತಿದ್ದರು ಎಂದು ಅವರ ಸ್ನೇಹಿತ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ 

ಅನುಶ್ರೀ ಮಾದಕ ದ್ರವ್ಯ ಸಾಗಾಟದೊಂದಿಗೆ ಸ್ನೇಹಿತರೊಂದಿಗೆ ಡ್ರಗ್ ಪಾರ್ಟಿ ಮತ್ತು ಪಾರ್ಟಿಗೆ ಡ್ರಗ್ಸ್ ತರುತ್ತಿದ್ದರು. ತರುಣ್, ನಾನು ಹಾಗೂ ಅನುಶ್ರೀ ಡ್ರಗ್ ಪಾರ್ಟಿ ಮಾಡುತ್ತಿದ್ದೆವು. ಆಗ ಅನುಶ್ರೀ ನಮ್ಮ ರೂಂಗೆ ಎಕ್ಟಸಿ ಡ್ರಗ್ಸ್ ತರುತ್ತಿದ್ದರು ಎಂದು ಅಮನ್ ಶೆಟ್ಟಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಆರೋಪ ಪಟ್ಟಿಯಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಿದ್ದಾರೆ. ಈ ಮೂಲಕ ಅನುಶ್ರೀ ಮತ್ತೆ ಡ್ರಗ್ ಶಾಕ್ ಎದುರಾಗಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ನಿರೂಪಕಿ ಅನುಶ್ರೀಗೆ ಕ್ಲೀನ್ ಚಿಟ್ ಸಾಧ್ಯತೆ

Source: publictv.in Source link