‘ಅನುಶ್ರೀ ಜೊತೆ ಮಾದಕ ವಸ್ತು ಸೇವಿಸಿ ಡಿಂಕ್ಸ್​ ಪಾರ್ಟಿ ಮಾಡಿರ್ತೇನೆ’ -ಚಾರ್ಜ್​ಶೀಟ್​ನಲ್ಲಿ ಕಿಶೋರ್​ ಶೆಟ್ಟಿ ಹೇಳಿಕೆ ಉಲ್ಲೇಖ

‘ಅನುಶ್ರೀ ಜೊತೆ ಮಾದಕ ವಸ್ತು ಸೇವಿಸಿ ಡಿಂಕ್ಸ್​ ಪಾರ್ಟಿ ಮಾಡಿರ್ತೇನೆ’ -ಚಾರ್ಜ್​ಶೀಟ್​ನಲ್ಲಿ ಕಿಶೋರ್​ ಶೆಟ್ಟಿ ಹೇಳಿಕೆ ಉಲ್ಲೇಖ

ಬೆಂಗಳೂರು: ಆ್ಯಂಕರ್ ಅನುಶ್ರೀ ವಿರುದ್ಧದ ಡ್ರಗ್​​ ಕೇಸ್​​ಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಸಿಬಿ ಅಧಿಕಾರಿಗಳು ತಯಾರಿ ಮಾಡಿರುವ ಚಾರ್ಜ್​ಶೀಟ್​ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಅನುಶ್ರೀ ಆರೋಪಿ‌ ಅಲ್ಲ. ಮಂಗಳೂರು ಡ್ರಗ್​​ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಿಶೋರ್ ಕೊಟ್ಟ ಹೇಳಿಕೆಯಲ್ಲಿ ಅನುಶ್ರೀ ಹೆಸರು ಬಂದಿದೆ. ಅನುಶ್ರೀ ಜೊತೆ ಸೇರಿ ಡ್ರಗ್ ಸೇವನೆ ಮಾಡಿರೋದಾಗಿ ಕಿಶೋರ್​ ಶೆಟ್ಟಿ ಹೇಳಿದ್ದಾನೆ. ಆತನ ಹೇಳಿಕೆಯನ್ನ ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ.

blank

ಇದನ್ನೂ ಓದಿ: ಆ್ಯಂಕರ್​​ ಅನುಶ್ರೀ ವಿರುದ್ಧ ಡ್ರಗ್ಸ್​ ಕೇಸ್ ಆರೋಪಿ ಕಿಶೋರ್ ನೀಡಿರೋ ಹೇಳಿಕೆ ಏನು..?

ಚಾರ್ಜ್​ಶೀಟ್​ನಲ್ಲಿ ಏನಿದೆ..?
ನಾನು ಸುಮಾರು 2007 – 08ರ ಸಮಯದಲ್ಲಿ ಬೆಂಗಳೂರಿನ ಸಂಜಯ್​ರವರ ಮಾಲೀಕತ್ವದ ಎಕ್ಸಿಬಿಸಿ ಡ್ಯಾನ್ಸ್​ ಅಕಾಡೆಮಿಯಲ್ಲಿದ್ದಾಗ ಟಿವಿ ಆಂಕರ್​ ಆಗಿರುವ ಅನುಶ್ರೀ ಅವರಿಗೆ ‘ಕುಣಿಯೋಣಾ ಬಾರಾ’ ಡ್ಯಾನ್ಸ್​ ನಲ್ಲಿ ಕೊರಿಯೋಗ್ರಫಿ ಮಾಡುತ್ತಿದ್ದ ನನ್ನ ಸ್ನೇಹಿತ ತರುಣ್​ ಈತನು ನನ್ನನ್ನು ಅನುಶ್ರೀ ರವರಿಗೆ ಪರಿಚಯ ಮಾಡಿಸಿ ಅವರಿಗೆ ಕುಣಿಯೋಣಾ ಬಾರಾ ಡ್ಯಾನ್ಸ್​ನ ಫೈನಲ್​ನಲ್ಲಿ ನನಗೂ ಸಹ ಕೊರಿಯೋಗ್ರಫಿ ಮಾಡುವಂತೆ ತಿಳಿಸಿದ್ದರಿಂದ ನಾನು ಮತ್ತು ತರುಣ್​ ಇಬ್ಬರೂ ಕೂಡಿ ಅನುಶ್ರೀ ರವರಿಗೆ ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿರುತ್ತೇವೆ. ಈ ಪ್ರೊಗ್ರಾಂನಲ್ಲಿ ಅನುಶ್ರೀ ರವರು ವಿನ್​ ಆಗಿರುತ್ತಾರೆ. ಅನುಶ್ರೀ ರವರು ಈ ಡ್ಯಾನ್ಸ್​ ಕಾಂಪಿಟೇಶನ್​ ಪ್ರಾಕ್ಟೀಸ್​ ಆಡುವ ಸಮಯದಲ್ಲಿ ತರುಣ್​ ಬಾಡಿಗೆ ಮನೆಯಲ್ಲಿ ತಡರಾತ್ರಿತನಕ ಪ್ರಾಕ್ಟೀಸ್​ ಮಾಡುತ್ತಾ ಕೆಲವು ದಿನಗಳು ಅಲ್ಲೇ ಇದ್ದರು. ಕೆಲವೊಂದು ದಿನದಲ್ಲಿ ನಾನೂ ಕೂಡ ತರುಣ್​ನ ಜೊತೆ ಹೋಗಿದ್ದೆ. ಆ ದಿನಗಳಲ್ಲಿ ನಾವು ಮೂರು ಜನ ತನ ತರುಣ್​​ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುವ ಸಮಯ ಮಾದಕ ವಸ್ತುಗಳಾದ ಎಕ್ಸ್​ಟೆಸಿ ಪಿಲ್ಸ್​ಗಳನ್ನ ಸೇವನೆ ಮಾಡಿರುತ್ತೇವೆ.

ಅನುಶ್ರೀರವರು ವಿಜೇತವಾಗಿದ್ದಕ್ಕೆ ನಾನು ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಎಕ್ಸ್​ಟೆಸಿ ಪಿಲ್ಸ್​ಗಳನ್ನ ಸೇವಿಸಿ ಡಿಂಕ್ಸ್​ ಪಾರ್ಟಿ ಮಾಡಿರುತ್ತೇವೆ. ಮಾಕದ ವಸ್ತು ಸೇವನೆ ಖರೀದಿಯಲ್ಲಿ ಅನುಶ್ರೀ ಅವರು ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್​ ಪ್ರಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀ ರವರಿಗೆ ಕೊರಿಯೋಗ್ರಾಫಿ ಪ್ರಾಕ್ಟೀಸ್​ ಮಾಡುವ ಸಮಯದಲ್ಲಿ ಹಲವು ಬಾರಿ ಮಾದಕವಸ್ತು ಎಕ್ಸ್​ಟೆಸಿ ಪಿಲ್ಸ್​ಗಳನ್ನು ಸೇವಿಸಿರುತ್ತೇವೆ. ಮತ್ತು ಅನುಶ್ರೀರವರು ಪ್ರಾಕ್ಟೀಸ್​ ಮಾಡಲು ನಮ್ಮ ರೂಮ್​ಗೆ ಬರುವಾಗ ಅವರು ಎಕ್ಸ್​​ಟೆಸಿ ಪಿಲ್ಸ್​​​ಗಳನ್ನು ಖರೀದಿಸಿ ತಂದು ನಮಗೆ ನೀಡಿ, ನಮ್ಮ ಜೊತೆ ಸೇವನೆಯನ್ನೂ ಕೂಡ ಮಾಡಿರುತ್ತಾರೆ. ಮತ್ತು ಡ್ಯಾನ್ಸ್ ಮಾಡಲು ಇದು ತಾಕತ್ತು ಕೊಡುತ್ತದೆ ಎಂದು, ಇದರಿಂದ ಡ್ಯಾನ್ಸ್​ ಮಾಡಲು ಖುಷಿ ಸಿಗುತ್ತದೆ. ಪ್ರಾಕ್ಟಿಸ್ ಮಾಡಲು ಸುಲಭವಾಗುತ್ತದೆ ಎಂದು ಕೂಡ ನಾವೆಲ್ಲರೂ ಮಾತನಾಡಿಕೊಳ್ಳುತ್ತಿದ್ದೆವು ಡ್ರಗ್ಸ್ ಯಾರು ನೀಡ್ತಾರೆ ಎಂದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್​ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತು ಡ್ರಗ್ಸ್​​ಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ.

ಕಳೆದ 2 ವರ್ಷಗಳ ಹಿಂದೆ ನನ್ನ ಡ್ಯಾನ್ಸ್ ಪಾರ್ಟನ್​​ ತರುಣ್​ ಮಂಗಳೂರಿನ ಬಿಜೈಯಲ್ಲಿ ಕ್ರೂಸ್​ ಇನ್ ಕ್ರೂ ಎಂಬ ಡ್ಯಾನ್ಸ್​ ಕ್ಲಾಸ್​ ಓಪನ್ ಮಾಡಿದ್ದ ಸಮಯದಲ್ಲಿ ಟಿವಿ ಌಂಕರ್ ಅನುಶ್ರೀಯವರು​ ಅದರ ಉದ್ಘಾಟನೆಗೆ ಮಂಗಳೂರಿಗೆ ಬಂದಿರುತ್ತಾರೆ. ನಾನೂ ಕೂಡ ಆ ಸಮಯ ಹೋಗಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ಯಾವುದೇ ಪಾರ್ಟಿ ಫಂಕ್ಷನ್ ನಡೆದಿರುವುದಿಲ್ಲ. ಅನುಶ್ರೀರವರು ಉದ್ಘಾಟನೆ ಮುಗಿಸಿ ವಾಪಸ್ ಹೋಗಿರುತ್ತಾರೆ ಅಂತಾ ಹೇಳಿಕೆ ನೀಡಿರೋದನ್ನ ಪೊಲೀಸರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಅನುಶ್ರೀಗೆ ಮತ್ತೆ ‘ಡ್ರಗ್​​ ಕೇಸ್​ ಸಂಕಷ್ಟ’ -ಚಾರ್ಜ್​​ಶೀಟ್​ನಲ್ಲಿ ಗಂಭೀರ ಆರೋಪ ಉಲ್ಲೇಖ

Source: newsfirstlive.com Source link