ಇಂಗ್ಲೆಂಡ್ ಸರಣಿ ಗೆಲುವಿನತ್ತ ಭಾರತ ಚಿತ್ತ.. BCCIಗೆ ಆಟಗಾರರು ಮುಖ್ಯನಾ.. ಸರಣಿ ಗೆಲ್ಲೋದು ಮುಖ್ಯನಾ?

ಇಂಗ್ಲೆಂಡ್ ಸರಣಿ ಗೆಲುವಿನತ್ತ ಭಾರತ ಚಿತ್ತ.. BCCIಗೆ ಆಟಗಾರರು ಮುಖ್ಯನಾ.. ಸರಣಿ ಗೆಲ್ಲೋದು ಮುಖ್ಯನಾ?

ಕೆನ್ನಿಂಗ್ಟನ್ ಕದನ ಗೆದ್ದ ಟೀಮ್ ಇಂಡಿಯಾ ದೃಷ್ಟಿ ಈಗ, ಮ್ಯಾನ್​ಚೆಸ್ಟರ್​ ಮ್ಯಾಚ್​​ನತ್ತ ನೆಟ್ಟಿದೆ. ಸುದೀರ್ಘ ಮೂರುವರೆ ತಿಂಗಳ ಇಂಗ್ಲೆಂಡ್ ಪ್ರವಾಸ, ಅಂತ್ಯಕ್ಕೆ ಬಂದು ತಲುಪಿದೆ. ಜೂನ್ 3ರಂದು ಲಂಡನ್ ತಲುಪಿದ್ದ ಟೀಮ್ ಇಂಡಿಯಾ, ಮ್ಯಾನ್​ಚೆಸ್ಟರ್ ಟೆಸ್ಟ್ ಪಂದ್ಯದ ಬಳಿಕ ಲಂಡನ್​ನಿಂದಲೇ ಯುಎಇಗೆ ಹಾರಲಿದೆ. ಆದ್ರೆ ಸರಣಿ ಗೆಲುವಿನ ಹೊಸ್ತಿಲಿಲ್ಲಿರುವ ಟೀಮ್ ಮ್ಯಾನೇಜ್​ಮೆಂಟ್​ಗೆ ಮಾತ್ರ, ಹೊಸ ತಲೆನೋವೊಂದು ಶುರುವಾಗಿದೆ.

blank

ಸುದೀರ್ಘ ಇಂಗ್ಲೆಂಡ್​​ ಪ್ರವಾಸದಲ್ಲಿ ಪ್ರಮುಖ ಆಟಗಾರರಿಗೆ ಸಿಕ್ಕಿಲ್ಲ ವಿಶ್ರಾಂತಿ..!

ಹೌದು..! ಈ ಸುದೀರ್ಘ ಪ್ರವಾಸದಲ್ಲಿ ಬ್ಯುಸಿಯಾಗಿರುವ ಟೀಮ್ ಇಂಡಿಯಾ, ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸೇರಿದಂತೆ, ಇದುವರೆಗೆ 5 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ ಇಶಾಂತ್, ಶಾರ್ದೂಲ್, ಶಮಿ ಬಿಟ್ಟರೆ, ಉಳಿದೆಲ್ಲಾ ಆಟಗಾರರ ವಿಶ್ರಾಂತಿಯಿಲ್ಲದೇ ಸರಣಿಯಲ್ಲಿ ಮುಂದುವರಿದಿದ್ದಾರೆ. ಹೀಗಾಗಿ ಬಳಲಿರುವ ಕೆಲ ಪ್ರಮುಖ ಆಟಗಾರರಿಗೆ, ವಿಶ್ರಾಂತಿ ಅತ್ಯಗತ್ಯವಾಗಿದೆ. ಆದ್ರೆ ಅಂತಿಮ ಟೆಸ್ಟ್​, ಟೀಮ್ ಇಂಡಿಯಾಗೆ ಪ್ರತಿಷ್ಠೆಯ ಕದನವಾಗಿದೆ. ಆದ್ರೆ ಟೆಸ್ಟ್​ ಸರಣಿ ಗೆಲುವಿನ ಗುರಿ ಹೊಂದಿರುವ ಮ್ಯಾನೇಜ್​​ಮೆಂಟ್, ಪ್ರಮುಖ ಆಟಗಾರರಿಗೆ ರೆಸ್ಟ್​ ನೀಡದೆ, ಸರಣಿ ಗೆಲುವೇ ಮುಖ್ಯ ಧ್ಯೇಯವನ್ನಾಗಿಸಿಕೊಂಡಂತೆ ಕಾಡುತ್ತಿದೆ.

blank

ಆಟಗಾರರಿಗಿಂತ ಸರಣಿ ಗೆಲುವೇ ಮುಖ್ಯವಾಗುತ್ತಾ ಮ್ಯಾನೇಜ್​ಮೆಂಟ್..?

ಇಂಥದ್ದೊಂದು ಪ್ರಶ್ನೆಗೆ ಕಾರಣ ದೀರ್ಘಾವದಿಯಿಂದ ಆಟಗಾರರು ಕ್ರಿಕೆಟ್ ಆಡ್ತಿರೋದು. ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಜಸ್​ಪ್ರೀತ್​ ಬೂಮ್ರಾರಂಥ ಆಟಗಾರರಿಗೆ, ವಿಶ್ರಾಂತಿ ಬೇಕಾಗಿದೆ. ಮತ್ತೊಂದೆಡೆ ಇಂಜುರಿಗೆ ತುತ್ತಾಗಿರುವ ರೋಹಿತ್, ಪೂಜಾರ ಭವಿಷ್ಯದ ದೃಷ್ಟಿಯಿಂದಾಗಿ, ಅಂತಿಮ ಟೆಸ್ಟ್​ನಿಂದ ಕೈಬಿಡುವುದು ಒಳ್ಳೆಯದು ಕೂಡ.

ಇನ್ನೂ ಇಂಗ್ಲೆಂಡ್ ಪ್ರವಾಸದಿಂದ ಬೌಲಿಂಗ್ ವಿಭಾಗದಲ್ಲಿ ವಿಶ್ರಾಂತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಬೂಮ್ರಾಗೆ, ಮುಂದಿನ ವಿಶ್ವಕಪ್​ ದೃಷ್ಟಿಯಿಂದ ವಿಶ್ರಾಂತಿ ನೀಡಲೇಬೇಕಿದೆ ಅನ್ನೋದು ಮರೆಯುವಂತಿಲ್ಲ. ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠೆಯ ಟೆಸ್ಟ್​ ಸರಣಿ. ಬಹು ವರ್ಷಗಳ ಬಳಿಕ ಇಂಗ್ಲೆಂಡ್​ನಲ್ಲಿ ಸರಣಿ ಗೆಲ್ಲುವ ಸುವರ್ಣಾವಕಾಶ ಟೀಮ್ ಇಂಡಿಯಾಕ್ಕೆ ಸಿಕ್ಕಿದೆ. ಹೀಗಾಗಿ ಸರಣಿ ಗೆಲ್ಲುವ ನಿಟ್ಟಿನಲ್ಲಿ ಈ ಆಟಗಾರರ ಸೇವೆ ತಂಡಕ್ಕೆ ಪ್ರಮುಖವಾಗಲಿದೆ.

ಒಂದೆಡೆ ಟೀಮ್ ಇಂಡಿಯಾಕ್ಕೆ ಟೆಸ್ಟ್ ಸರಣಿ ಗೆಲುವು ಮುಖ್ಯವಾಗಿದ್ದರೂ, ಆಟಗಾರರ ಭವಿಷ್ಯದ ದೃಷ್ಟಿಯಿಂದ ಹೊಸ ಸವಾಲು ಸ್ವೀಕರಿಸಬೇಕಿದೆ. ಅತ್ತ ಸೋಲಿನ ಹೊರತಾಗಿಯೂ ಅತಿಥೇಯ ಇಂಗ್ಲೆಂಡ್, ರೋಟೇಷನ್ ಪದ್ದತಿ ಪಾಲಿಸುತ್ತಿದೆ. ಈ ಕಾರಣಕ್ಕಾಗಿಯೇ ಮ್ಯಾನೇಜ್​ಮೆಂಟ್​ಗೆ ಆಟಗಾರರು ಮುಖ್ಯನಾ..? ಸರಣಿ ಮುಖ್ಯನಾ..? ಎಂಬ ಪ್ರಶ್ನೆ ಎದ್ದಿದೆ.

Source: newsfirstlive.com Source link