ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ

ಮಂಗಳೂರು: ಡ್ರಗ್ಸ್ ಸೇವನೆಯಿಂದ ಡ್ಯಾನ್ಸ್ ಪ್ರಾಕ್ಟೀಸ್ ಸುಲಭ. ಡ್ರಗ್ಸ್ ಸೇವಿಸಿ ಡ್ಯಾನ್ ಮಾಡಿದ್ರೆ ಖುಷಿ ಆಗುತ್ತೆ. ಡ್ರಗ್ಸ್ ಸೇವಿಸಿದ್ರೆ ಡ್ಯಾನ್ಸ್ ಗೆ ತಾಕತ್ತು ಅನುಶ್ರೀ ಹೀಗೆ ನಮಗೆ ಹೇಳುತ್ತಿದ್ದರು ಎಂದು ಸ್ಫೋಟಕ ಹೇಳಿಕೆಯನ್ನು ಕಿಶೋರ್ ಅಮನ್ ಶೆಟ್ಟಿ ಮಂಗಳೂರು ಪೊಲೀಸರ ತನಿಖೆ ವೇಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕಿಶೋರ್ ಅಮನ್ ಶೆಟ್ಟಿ ಆರೋಪ:
ಬೆಂಗಳೂರಿನಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ನಾವು ಡ್ರಗ್ಸ್ ಸೇವನೆ ಮಾಡುತ್ತಿದ್ದೆವು. ಅನುಶ್ರೀಗೆ ದಂಧೆಕೋರರ ಪರಿಚಯವಿದೆ. ಅವರು ನಮಗೆ ಡ್ರಗ್ಸ್ ತಂದು ಕೊಡುತ್ತಿದ್ದರು ಕಿಶೋರ್ ಅಮನ್ ಶೆಟ್ಟಿ ಅನುಶ್ರೀ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಡ್ರಗ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

ಪೊಲೀಸರ ತನಿಖೆ ವೇಳೆ ತರುಣ್ ಅನುಶ್ರೀ ರಿಯಾಲಿಟಿ ಶೋ ಅಲ್ಲಿ ಗೆದ್ದಿದ್ದಕ್ಕೆ ಡ್ರಗ್ಸ್ ಪಾರ್ಟಿ ಮಾಡಿದ್ರು. ಖಾಸಗಿ ವಾಹಿನಿ ರಿಯಾಲಿಟಿ ಶೋವನ್ನು ಅನುಶ್ರೀ ಗೆದ್ದಿದ್ದರು. ಇದಕ್ಕಾಗಿ ಡ್ರಗ್ಸ್ ಪಾರ್ಟಿ ಮಾಡಿದ್ವಿ. ಡ್ರಗ್ಸ್ ಪಾರ್ಟಿ ಮಾಡೋದು ಅವರಿಗೂ ಕೂಡ ಗೊತ್ತಿತ್ತು. ಡ್ರಗ್ಸ್ ಪಾರ್ಟಿಯಲ್ಲಿ ನಾನು ನಮ್ಮ ಕೋರಿಯೋಗ್ರಾಫರ್ ಅನುಶ್ರೀ ಜೊತೆ ಸೇರಿ ಪಾರ್ಟಿಯನ್ನು ಮಾಡಿದ್ವಿ ಎಂದಿದ್ದರು.

blank

ಅನುಶ್ರೀ ಮಾದಕದ್ರವ್ಯ ಸೇವಿಸುತ್ತಿದ್ದರು, ಸಾಗಿಸುತ್ತಿದ್ದರು. ಸ್ನೇಹಿತರ ಜೊತೆಗೆ ಅನುಶ್ರೀ ಡ್ರಗ್ ಪಾರ್ಟಿ ಮಾಡುತ್ತಿದ್ದರು. ರೂಂನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಡ್ರಗ್ಸ್ ತರುತ್ತಿದ್ದರು. ಡ್ಯಾನ್ಸ್ ಪ್ರಾಕ್ಟೀಸ್‍ಗೆ ಬರುವಾಗ ಡ್ರಗ್ಸ್ ತರುತ್ತಿದ್ದರು. ಅವರೇ ಹೆಚ್ಚು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಅವರೇ ಡ್ರಗ್ಸ್ ತಂದು ನಮಗೂ ಕೊಡುತ್ತಿದ್ದರು ಎಂದು ಕಿಶೋರ್ ಹೇಳಿದ್ದು, ಇದರಿಂದ ಅನುಶ್ರೀಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ 

blank

ಡ್ರಗ್ಸ್ ಜಾಲ ಬೆಳಕಿಗೆ ಬಂದಿದ್ದು ಹೇಗೆ?
ಬೆಂಗಳೂರು ಸಿಸಿಬಿ ಪೊಲೀಸರು ದಾಖಲಿಸಿದ್ದ ಡ್ರಗ್ಸ್ ಕೇಸ್ ನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ಯಾಂಡಲ್‍ವುಡ್ ಡ್ರಗ್ ಕೇಸ್ ಈ ಪ್ರಕರಣದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಓರ್ವ ಆರೋಪಿ ಕೊಟ್ಟ ಸುಳಿವಿನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಎ.15 ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ ಸಿಕ್ಕಿದ್ದ ಮಹತ್ವದ ಸುಳಿವಿನಿಂದಾಗಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಬೆಂಗಳೂರು ಸಿಸಿಬಿ ಇನ್ಸ್‍ಪೆಕ್ಟರ್ ರಿಂದ ಮಂಗಳೂರು ಸಿಸಿಬಿಗೆ ಮಾಹಿತಿ ರವಾನೆ ಮಾಡಿತ್ತು. ಜೊತೆಗೆ ಡ್ರಗ್ಸ್ ಜಾಲದ ಬಗ್ಗೆ ಕಣ್ಣಿಡುವಂತೆ ಮಂಗಳೂರಿನ ಪೊಲೀಸರಿಗೆ ತಿಳಿಸಿದ್ದರು.

blank

ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿ ಮೇರೆಗೆ ಅಲರ್ಟ್ ಆದ ಮಂಗಳೂರು ಸಿಸಿಬಿ ತನಿಖೆ ನಡೆಸಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಬಂಧಿಸಿದ್ದರು. ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗಿನ ಸಂಪರ್ಕದಿಂದ ಆನುಶ್ರೀಗೆ ನೋಟಿಸ್ ನೀಡಿದ್ದ ಮಂಗಳೂರು ಸಿಸಿಬಿ ಪೊಲೀಸರು, ಕಿಶೋರ್ ಶೆಟ್ಟಿ ಹೇಳಿಕೆ ಮತ್ತು ಸಿಡಿಆರ್ ಆಧರಿಸಿ ಸಿಸಿಬಿ ಅನುಶ್ರೀ ವಿಚಾರಣೆ ನಡೆಸಿತ್ತು. ಅಲ್ಲದೇ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಪ್ರತೀಕ್ ಶೆಟ್ಟಿ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಮೂವರು ಗೆಳೆಯರಾಗಿದ್ದರು ಎಂಬ ಅಂಶ ಆಗ ಬಯಲಾಗಿತ್ತು. ಇದನ್ನೂ ಓದಿ: ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಿಲ್ಲ, ಯಾವತ್ತೂ ಮಾಡಲ್ಲ: ಕಣ್ಣೀರಿಟ್ಟ ಅನುಶ್ರೀ

ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು..?
ತರುಣ್ ಮತ್ತು ಕಿಶೋರ್ ಶೆಟ್ಟಿ ಪರಿಚಯ ಇದ್ದರೂ ಅದಕ್ಕಾಗಿ ಮಂಗಳೂರಿಗೆ ಬಂದಿದ್ದೇ. ಅವರಿಬ್ಬರೂ ನನಗೆ ಕೋರಿಯಾಗ್ರಾಫರ್ ಆಗಿದ್ರು. ನನಗೆ 12 ವರ್ಷಗಳ ಮುಂಚೆ ಸಂಪರ್ಕವಿತ್ತು, ಈಗ ಇಲ್ಲ. ನನ್ನ ಜೊತೆ ಡ್ಯಾನ್ಸ್ ಪಾಟ್ರ್ನರ್ ಮಾಡಿದ್ದಕ್ಕಾಗಿ ನಾನು ಬಂದಿದ್ದೇನೆ ಅಷ್ಟೇ ನಾನು ಯಾವುದೇ ಪಾರ್ಟಿಗಳನ್ನು ಕೂಡ ಮಾಡಿಲ್ಲ. ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

blank

ಒಟ್ಟಿನಲ್ಲಿ ಸದ್ಯ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯಿಂದ ಇದೀಗ ಅನುಶ್ರೀಗೆ ಕಂಟಕ ಶುರುವಾಗಿದ್ದು, ಸಾಕ್ಷ್ಯಧಾರ ಕೊರತೆ ಇದ್ದರೆ ಚಾರ್ಜ್ ಶೀಟ್ ಅಲ್ಲಿ ಅನುಶ್ರೀ ಹೆಸರು ಉಲ್ಲೇಖ ಆಗುತ್ತಿರಲಿಲ್ಲ. ಇದೀಗ ಪೊಲೀಸರ ತನಿಖೆ ದಾಖಲೆಗಳು ಮತ್ತು ಕಿಶೋರ್ ಶೆಟ್ಟಿ ಅಮನ್ ಶೆಟ್ಟಿ ಹೇಳಿಕೆ ಮೇಲೆ ಮಂಗಳೂರು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.

Source: publictv.in Source link