ಬಾಲಿವುಡ್ ಸ್ಟಾರ್ ಅಕ್ಷಯ್​ ಕುಮಾರ್​​ಗೆ ಮಾತೃ ವಿಯೋಗ

ಬಾಲಿವುಡ್ ಸ್ಟಾರ್ ಅಕ್ಷಯ್​ ಕುಮಾರ್​​ಗೆ ಮಾತೃ ವಿಯೋಗ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಟಿಯಾ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅರುಣಾ ಅವರನ್ನ ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಅಂತಾ ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

blank

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಅಕ್ಷಯ್ ಕುಮಾರ್.. ಅವಳು ನನಗೆ ಎಲ್ಲವೂ ಆಗಿದ್ದಳು. ಇಂದು ಅವಳು ನನ್ನನ್ನ ಬಿಟ್ಟು ಹೋಗಿರೋದಕ್ಕೆ ತೀವ್ರ ನೋವಾಗುತ್ತಿದೆ. ಇಂದು ಬೆಳಗ್ಗೆ ನನ್ನ ಅಮ್ಮ, ಅರುಣಾ ಭಟಿಯಾ ಶಾಂತಿಯುತವಾಗಿ ಈ ಜಗತ್ತನ್ನ ತೊರೆದು ಬೇರೊಂದು ಪ್ರಪಂಚದಲ್ಲಿರುವ ಅಪ್ಪನ ಜೊತೆ ಸೇರಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ನನ್ನ ಕುಟುಂಬಕ್ಕೆ ನೀವು ಮಾಡುತ್ತಿರುವ ಪ್ರಾರ್ಥನೆಯನ್ನ ಗೌರವಿಸುತ್ತೇನೆ. ಓಂ ಶಾಂತಿ ಅಂತಾ ಟ್ವೀಟ್ ಮಾಡಿದ್ದಾರೆ.

Source: newsfirstlive.com Source link