ರಚಿತಾ ರಾಮ್​​ಗೆ ‘ತಲೈವಿ’ ಚಿತ್ರತಂಡ ವಿಶೇಷ ಗಿಫ್ಟ್​​​ ಕೊಟ್ಟಿದ್ದೇಕೆ..?

ರಚಿತಾ ರಾಮ್​​ಗೆ ‘ತಲೈವಿ’ ಚಿತ್ರತಂಡ ವಿಶೇಷ ಗಿಫ್ಟ್​​​ ಕೊಟ್ಟಿದ್ದೇಕೆ..?

ಬಾಲಿವುಡ್​ ನಟಿ ಕಂಗನಾ ರಣಾವತ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ತಲೈವಿ’ ಇದೇ ಸೆಪ್ಟೆಂಬರ್​ 10 ನೇ ತಾರಿಖ್​ ರಿಲೀಸ್​ ಆಗುತ್ತಿದೆ. ಇನ್ನು ತಮಿಳನಾಡು ಮಾಜಿ ಸಿ.ಎಂ, ಮಾಜಿ ನಟಿ ದಿವಂಗತ ಜಯಲಲಿತಾರ ಜೀವನ ಚರಿತ್ರೆ ಆಧಾರಿತ ಕಥೆಯನ್ನು ಹೊಂದಿರುವ ‘ತಲೈವಿ’ ಸಿನಿಮಾ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ರಿಲೀಸ್​ ಆಗಲಿದೆ.

‘ತಲೈವಿ’ ಸಿನಿಮಾ ಕನ್ನಡದಲ್ಲಿ ರಿಲೀಸ್​ ಆಗದಿದ್ದರೂ ಕೂಡ ತಲೈವಿ ಚಿತ್ರತಂಡ ಚಂದನವನ ಒಬ್ಬ ಟಾಪ್​ ನಟಿಮಣಿಗೆ ಚಿತ್ರತಂಡದ ಕಡೆಯಿಂದ ಒಂದು ಕಾಂಚೀಪುರಂ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.

ಹೌದು, ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವಿನ್​ ರಚಿತಾ ರಾಮ್​ ಅವರಿಗೆ, ‘ತಲೈವಿ’ ಚಿತ್ರತಂಡ ನೀಲಿ ಬಣ್ಣದ ಕಾಂಚೀಪುರಂ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ಕಳುಹಿಸಿದೆ. ಇನ್ನು ರಚಿತಾ ರಾಮ್​ ತಮಗೆ ಸೀರೆಯನ್ನ ಉಡುಗೊರೆಯಾಗಿ ಕಳುಹಿಸಿದಕ್ಕೆ ತಲೈವಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿ, ಶುಭ ಕೊರಿದ್ದಾರೆ. ಇನ್ನು ತಲೈವಿ ಚಿತ್ರತಂಡ ಈ ಹಿಂದೆ ಟಾಲಿವುಡ್​ ನಟಿ ಸಮಂತಾ ಅವರಿಗೂ ಸುಂದರವಾದ ಕಾಂಚೀಪುರಂ ರೇಷ್ಮೆ ಸೀರೆಯನ್ನು ಕಳುಹಿಸಿದ್ದರು.

Source: newsfirstlive.com Source link